ಮಂಡ್ಯ: ಬೆಲ್ಲದ ಮೇಲಿನ GST ಖಂಡಿಸಿ ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇಂದು ನೂರಾರು ಟ್ರ್ಯಾಕ್ಟರ್ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಕೆಬ್ಬಳ್ಳಿಯಿಂದ ರೈತರ ಪಾದಯಾತ್ರೆ ಆರಂಭವಾಗಲಿದ್ದು, ಬಳಿಕ ನಗರದ ಕಾಳಿಕಾಂಭ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್ ರ್ಯಾಲಿ ಮುಂದುವರಿಯಲಿದೆ. ಬೆಳಗ್ಗೆ 11 ಗಂಟೆಗೆ ರೈತರ ಟ್ಯ್ರಾಕ್ಟರ್ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.


ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ NIA ದಾಳಿ: ಬಟ್ಕಳದಲ್ಲಿ ISIS ಜೊತೆ ನಂಟು ಹೊಂದಿದ್ದ ಇಬ್ಬರು ವಶಕ್ಕೆ!


ಬೆಲ್ಲದ ಮೇಲೆ ಕೇಂದ್ರ ಸರ್ಕಾರವು ಶೇ.5ರಷ್ಟು GST ತೆರಿಗೆ ವಿಧಿಸಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಲ್ಲದ ಮೇಲಿನ GSTಯಿಂದ 1 ಕ್ವಿಂಟಾಗ್ ಗೆ 3,800 ರೂ. ಇದ್ದ ಬೆಲೆ 3,000 ರೂ.ಗೆ ಇಳಿಯಲಿದೆ. ಇದರಿಂದ ರೈತರಿಗೆ ದೊಡ್ಡ ನಷ್ಟವಾಗಲಿದೆ. ಆದ್ದರಿಂದ ಬೆಲ್ಲದ ಮೇಲಿನ GSTಯನ್ನು ಕೂಡಲೇ ತೆಗೆದುಹಾಕಬೇಕು. ಒಂದು ಟನ್ ಕಬ್ಬಿಗೆ (FRP)ಗೆ4,500 ರೂ.ಗೆ ಬೆಲೆ ನಿಗದಿ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಪರಭಾಷಾ ಪತ್ರ, ಆದೇಶಗಳನ್ನು ಕನ್ನಡಿಕರಿಸಿ;-ಟಿ.ಎಸ್.ನಾಗಾಭರಣ


ಬೇರೆ ರಾಜ್ಯದಲ್ಲಿ ಕಬ್ಬಿನ ಬೆಲೆ ಜಾಸ್ತಿ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಕಬ್ಬಿನ FRP ದರವನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸಲಿದ್ದು, ತಮ್ಮ ಒತ್ತಾಯಗಳ ಕುರಿತು ಡಿಸಿಗೆ ಮನವಿ ಸಲ್ಲಿಸಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.