Covid BF. 7 ನಿಯಂತ್ರಣ ಸಭೆ; ಸರ್ಕಾರ ಸಿದ್ಧತೆ ಹೇಗಿದೆ? ರಾಜಕೀಯ ಕಾರ್ಯಕ್ರಮಕ್ಕೆ ನಿರ್ಬಂಧನೆ ಇಲ್ಲ!
ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ನಿಯಮಗಳ ಬಗ್ಗೆ ಸುಧಾಕರ್ ಮತ್ತು ಆರ್ ಅಶೋಕ್ ವಿವರಣೆ ನೀಡಿದರು. ಆರೋಗ್ಯ ಸಚಿವ ಸುಧಾಕರ್ ಯಾವುದೇ ತರಹದ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ, ಎನ್ನುವುದನ್ನು ಈ ವೇಳೆ ಸ್ಪಷ್ಟಪಡಿಸಿದರು.
ಬೆಳಗಾವಿ : ಸುವರ್ಣ ಸೌಧದಲ್ಲಿ ಅಧಿವೇಶನ ನಡುವೆಯೇ ಹೆಚ್ಚುತ್ತಿರುವ ಕೋವಿಡ್ ಆತಂಕ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಅಶೋಕ್ ಸೇರಿದಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಚರ್ಚೆ ನಡೆಸಿ ಕೆಲ ನಿಯಮಗಳನ್ನ ಜಾರಿಗೆ ತರಲು ನಿರ್ಧರಿಸಿದ್ದಾರೆ.
ಸಭೆ ಬಳಿಕ ಸಚಿವ ಸುಧಾಕರ್ ಹಾಗೂ ಅಶೋಕ್ ಸುದ್ದಿಗೋಷ್ಠಿ ನಡೆಸಿ, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ನಿಯಮಗಳ ಬಗ್ಗೆ ವಿವರಣೆ ನೀಡಿದರು. ಆರೋಗ್ಯ ಸಚಿವ ಸುಧಾಕರ್ ಯಾವುದೇ ತರಹದ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ, ಎನ್ನುವುದನ್ನು ಈ ವೇಳೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ : COVID: ಹೊಸ ವರ್ಷಾಚರಣೆಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ
ಕೋವಿಡ್ ಗಾಗಿ ರಾಜ್ಯದಲ್ಲಿ ಮಿಸಲ್ಲಿಟ್ಟಿರುವ ಬೆಡ್ ಗಳ ಸಂಖ್ಯೆ:
Icu beds with ventilator - 2896 ಬೆಡ್ ಗಳು
Oxygen beds - 28206 ಬೆಡ್ ಗಳು
ಮಕ್ಕಳಿಗೆ - 426 ಬೆಡ್ ಗಳು
Nicu ಮಕ್ಕಳಿಗೆ - 593 ಬೆಡ್ ಗಳು
ಒಟ್ಟು 50817 ಇದು ಸರ್ಕಾರ ವ್ಯವಸ್ಥೆಯ ಬೆಡ್ ಗಳು ಮೀಸಲು
ಕಂದಾಯ ಸಚಿವ ಅಶೋಕ್ ಮಾತನಾಡಿ, ಚೀನಾ ಮತ್ತು ಬೇರೆ ಬೇರೆ ದೇಶದಲ್ಲಿ ಕೋವಿಡ್ ಜಾಸ್ತಿಯಾಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಮಾನಿಟರಿಂಗ್ ಮಾಡಲಾಗುತ್ತದೆ. ಇದಕ್ಕಾಗಿ 2 ಪ್ರತ್ಯೇಕ ಆಸ್ಪತ್ರೆಗಳು ಮೀಸಲಿಡಲಾಗಿದೆ ಎಂದು ಹೇಳಿದರು.
ಇದೆ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ , ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ತಾಂತ್ರಿಕ ಸಮಿತಿ, ವಿಪತ್ತು ನಿರ್ವಹಣೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಇಂಟರ್ ನ್ಯಾಶನಲ್ ಏರ್ ಪೋರ್ಟ್ ಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿ ರೋಗದ ಲಕ್ಷಣಗಳಿದದ್ದರೆ, ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ಮಂಗಳಮುಖಿ ಮನೆಯಲ್ಲಿ ಮಸಾಜ್ ಮಾಡಿಸಲು ಬಂದು ಕಳ್ಳತನ
ಕೇಂದ್ರ ಆರೋಗ್ಯ ಇಲಾಖೆಯಿಂದಲೂ ಮಾರ್ಗಸೂಚಿ ಜಾರಿ :
ಪಾಸಿಟಿವ್ ಇದ್ದು, ಸಿಟಿ ವ್ಯಾಲ್ಯೂ 25 ಕ್ಕಿಂತ ಕಡಿಮೆ ಇದ್ದರೆ, ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸಲಾಗುವುದು. ಬೂಸ್ಟರ್ ಡೋಸ್ ಹೆಚ್ಚಿನ ಜನಕ್ಕೆ ಕೊಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮೂಲಕ ಡೋಸ್ ನೀಡಲಾಗುತ್ತದೆ ಎಂದು ಹೇಳಿದರು. ತಾಂತ್ರಿಕ ಸಲಹಾ ಸಮಿತಿ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ರ್ಯಾಂಡಮ್ ಆಗಿ 2 ಪರ್ಸೆಂಟ್ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲು ಚಿಂತನೆ ಮಾಡಲಾಗಿದೆ, ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.