COVID: ಹೊಸ ವರ್ಷಾಚರಣೆಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ

ಡಿಸೆಂಬರ್ 31ಕ್ಕೆ ಹೊಸ ವರ್ಷ ಆಚರಣೆ ಇರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೆಲ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ ಈ ನಿಯಮಗಳು ಹೊಸ ವರ್ಷಾಚರಣೆ ದಿನಕ್ಕೆ ಮಾತ್ರ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ.   

Written by - Prashobh Devanahalli | Edited by - Ranjitha R K | Last Updated : Dec 26, 2022, 03:29 PM IST
  • ಹೊಸ ವರ್ಷದ ಆಚರಣೆ ಹೊಸ ನಿಯಮ
  • ಸರ್ಕಾರ ಜಾರಿಗೆ ತಂದ ನಿಯಮ ಇಲ್ಲಿದೆ
  • ಮುಂಜಾಗೃತಿ ಕ್ರಮಗಳನ್ನು ಪಾಲಿಸುವುದು ಕಡ್ಡಾಯ
COVID: ಹೊಸ ವರ್ಷಾಚರಣೆಗೆ ಸರ್ಕಾರ ಜಾರಿಗೆ ತಂದಿದೆ ಹೊಸ ನಿಯಮ  title=
covid guidelines for new year

ಬೆಳಗಾವಿ : ಕೋವಿಡ್ ನಿಯಂತ್ರಣ ಸಭೆ ನಂತರ ಹೊಸ ವರ್ಷದ ಆಚರಣೆ ಹಾಗೂ ಇನ್ನಿತರ ಮುಂಜಾಗೃತಿ ಕ್ರಮಗಳನ್ನ ಪಾಲಿಸಲು ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. 

ಹೊಸ ವರ್ಷಾಚರಣೆಗೆ ಇರುವ ನಿಯಮಗಳು:
ಡಿಸೆಂಬರ್ 31ಕ್ಕೆ ಹೊಸ ವರ್ಷ ಆಚರಣೆ ಇರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೆಲ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ ಈ ನಿಯಮಗಳು ಹೊಸ ವರ್ಷಾಚರಣೆ ದಿನಕ್ಕೆ ಮಾತ್ರ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ : ಕೋವಿಡ್‌ನಿಂದ ಜನರ ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ : ಸಿಎಂ ಬೊಮ್ಮಾಯಿ

ನಿಯಮಗಳು :
-ಬಾರ್, ಪಬ್ ಗಳಲ್ಲಿ ಸಪ್ಲೈಯರ್, ಬರುವವರು, ಹೋಗುವವರು ಎರಡು ಡೋಸ್ ಲಸಿಕೆ  ಕಡ್ಡಾಯವಾಗಿ ಹಾಕಿರಬೇಕು 
- ಎಷ್ಟು ಟೇಬಲ್, ಕುರ್ಚಿಗಳಿದೆಯೋ ಅಷ್ಟೇ ಗ್ರಾಹಕರಿಗೆ ಅವಕಾಶ
- ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಶನ್ ಮಾಡೋರಿಗೆ ಮಾಸ್ಕ್ ಕಡ್ಡಾಯ
-ರಾತ್ರಿ ಒಂದು ಗಂಟೆಗೆ ಸೆಲೆಬ್ರೇಶನ್ ಎಲ್ಲಾ ಮುಗಿಯಬೇಕು
-ಒಂದು ಗಂಟೆ ನಂತರ ಎಲ್ಲಾ ಮನೆಗಳಿಗೆ ಹೋಗಬೇಕು
-ರೆಸ್ಟೋರೆಂಟ್, ಬಾರ್, ಪಬ್ ಗಳು ಒಂದು ಗಂಟಗೆ ಕ್ಲೋಸ್

ಇನ್ನುಳಿದಂತೆ ಕೋವಿಡ್ ತಡೆಯಲು ಕೆಲ ನಿಯಮಗಳನ್ನು ಸರ್ಕಾರ ಜಾರಿ ಮಾಡಿದೆ.

ಆ ನಿಯಮಗಳೆಂದರೆ : 
ಶಾಲಾ - ಕಾಲೇಜುಗಳಲ್ಲಿ ಸ್ಯಾನಿಟೈಸೇಶನ್
ಮಕ್ಕಳು ಮಾಸ್ಕ್ ಹಾಕೋದು ಕಡ್ಡಾಯ 
ಬೆಂಗಳೂರು ಬೌರಿಂಗ್, ಮಂಗಳೂರು ವೆನ್ಕಾಲ್  ಆಸ್ಪತ್ರೆಗಳಲ್ಲಿ ಐಸೋಲೇಶನ್ ಸೆಂಟರ್
ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ
ಡಾಕ್ಟರ್ ಸೆಲ್ ಮೂಲಕ ಮಾನಿಟರ್
ಬೆಂಗಳೂರು, ಮಂಗಳೂರಿನಲ್ಲಿ ಎರಡು ಕಡೆ ಆಸ್ಪತ್ರೆಗಳ ಸ್ಥಾಪನೆ
ಥೀಯೇಟರ್ ಗಳಲ್ಲಿ ಮಾಸ್ಕ್ ಕಡ್ಡಾಯ

ಇದನ್ನೂ ಓದಿ :  ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಸಾವು.. ಓರ್ವನ ಸ್ಥಿತಿ ಚಿಂತಾಜನಕ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News