ಮಂಗಳಮುಖಿ ಮನೆಯಲ್ಲಿ ಮಸಾಜ್ ಮಾಡಿಸಲು ಬಂದು ಕಳ್ಳತನ

 

Written by - VISHWANATH HARIHARA | Edited by - Manjunath N | Last Updated : Dec 26, 2022, 03:15 PM IST
  • ಬಳಿಕ ತನ್ನ ಸ್ನೇಹಿತ ಶಮೀರ್ ನನ್ನ ಪುಕಂಬಂ ಮನೆಗೆ ಕಳಿಸಿದ್ದ.
  • ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ಸೇರಿಸಿ ಕುಡಿಸಿದ್ದ
  • ಶಮೀರ್, ಪುಕಂಬಂ ಮನೆಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, 120 ಗ್ರಾಂ ಚಿನ್ನಾಭರಣ ದೋಚಿ ಆರೋಪಿ ಶಿವನ ಕೈಗೆ ನೀಡಿದ್ದ.
ಮಂಗಳಮುಖಿ ಮನೆಯಲ್ಲಿ ಮಸಾಜ್ ಮಾಡಿಸಲು ಬಂದು ಕಳ್ಳತನ title=

ಬೆಂಗಳೂರು : ಜೀವನ ನಿರ್ವಹಣೆಗಾಗಿ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಂಗಳಮುಖಿಯ ಮನೆಯಲ್ಲಿ ಕೈಚಳಕ ತೋರಿದ್ದ ಇಬ್ಬರು  ಕಳ್ಳರನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಿವ ಹಾಗೂ ಶಮೀರ್ ಬಂಧಿತ ಆರೋಪಿಗಳು.

ಇದನ್ನೂ ಓದಿ :ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ

ಪುಕಂಬಂ ಪ್ರಶಾಂತ ಎಂಬ ಮಂಗಳಮುಖಿಯ ಮನೆಗೆ ಮೊದಲಿಗೆ ಮಸಾಜ್ ಮಾಡಿಸಲು ಬಂದಿದ್ದ ಆರೋಪಿ ಆಕೆಯ ಮೊಬೈಲ್ ಗೆ ಸುಮಾರು 20 ಲಕ್ಷ ಕ್ರೆಡಿಟ್ ಆಗಿರುವ ಮೇಸೆಜ್ ಗಮನಿಸಿದ್ದ. ಬಳಿಕ ಆಕೆಯ ಮನೆಯಲ್ಲಿ ಕಳ್ಳತನ ಮಾಡುವ ಸಂಚು ರೂಪಿಸಿದ್ದ.ಬಳಿಕ ತನ್ನ ಸ್ನೇಹಿತ ಶಮೀರ್ ನನ್ನ ಪುಕಂಬಂ ಮನೆಗೆ ಕಳಿಸಿದ್ದ.ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ಸೇರಿಸಿ ಕುಡಿಸಿದ್ದ ಶಮೀರ್, ಪುಕಂಬಂ ಮನೆಯಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, 120 ಗ್ರಾಂ ಚಿನ್ನಾಭರಣ ದೋಚಿ ಆರೋಪಿ ಶಿವನ ಕೈಗೆ ನೀಡಿದ್ದ. ಪಿನ್ ನಂಬರ್ ಕಾರ್ಡ್ ಮೇಲೆಯೇ ಬರೆದಿಟ್ಟಿದ್ದರಿಂದ ಸುಲಭವಾಗಿ ಆರೋಪಿ ಶಿವ ಸುಮಾರು 7 ಲಕ್ಷ ಹಣವನ್ನ ಹಂತಹಂತವಾಗಿ ವಿತ್ ಡ್ರಾ ಮಾಡಿದ್ದ. ವಿತ್ ಡ್ರಾ ಸಮಯದಲ್ಲಿ ಪುಕಂಬಂ ಮನೆಗೆ ಹೋಗಿದ್ದ ಶಮೀರ್ ಅಲರ್ಟ್ ಮೆಸೇಜ್ ಗಳನ್ನು ತಾನೇ ಡಿಲೀಟ್ ಮಾಡಿ ಗೊತ್ತಾಗದಂತೆ ನೋಡಿಕೊಂಡಿದ್ದ. 

ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ

ಕದ್ದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದ ಆರೋಪಿಗಳು 

ಕಾರ್ಡ್ ನಲ್ಲಿದ್ದ ಹಣ, ಚಿನ್ನಾಭರಣ ಮಾರಿದ ಹಣ ಸೇರಿದಂತೆ ಒಟ್ಟು 7 ಲಕ್ಷದಲ್ಲಿ ತಮಿಳುನಾಡಿಗೆ ಹೋಗಿದ್ದ ಆರೋಪಿಗಳು ಮೋಜು‌ ಮಸ್ತಿಯಲ್ಲಿ ತೊಡಗಿದ್ದರು. ಇತ್ತ ಚಿನ್ನಾಭರಣ ಕಳುವಾಗಿರುವುದಾಗಿ ಪುಕಂಬಂ ಆಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಸ್.ಮಂಜುನಾಥ್ ನೇತೃತ್ವದ ತಂಡ ತನಿಖೆ ನಡೆಸಿದಾಗ ಆರೋಪಿಗಳು ಚಿನ್ನಾಭರಣ ಮಾತ್ರವಲ್ಲದೇ ಕಾರ್ಡ್ ಮೂಲಕ ಹಣ ದೋಚಿರುವುದು ಪತ್ತೆಯಾಗಿತ್ತು.

ಸದ್ಯ ಇಬ್ಬರೂ ಆರೋಪಿಗಳನ್ನ ಬಂಧಿಸಿರುವ ಆಡುಗೋಡಿ ಪೊಲೀಸರು ಒಟ್ಟು ಎರಡು ಲಕ್ಷ ನಗದು ಹಾಗೂ ಕದ್ದ ಹಣದಲ್ಲಿ ಖರೀದಿಸಿದ್ದ 30 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News