Heavy Rainfall: ಬಿರು ಬಿಸಿಲಿನ ಮಧ್ಯ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆ!
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಭಾರಿ ಮಳೆ
ವಿಜಯಪುರ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಿದೆ, ಜೊತೆಗೆ ಶುಕ್ರವಾರ ಸಂಜೆ ಜೋರಾದ ಗಾಳಿ ಮತ್ತು ಗುಡುಗಿನ ವಾತಾವರಣ ಕೂಡ ಕಂಡು ಬಂದಿತ್ತು.
ಮೂವತ್ತರ ದಶಕದ ಈ ಭಾಗದಲ್ಲಿ ದಾಖಲೆ ಮಟ್ಟದ ಉಷ್ಣತೆ ಕಂಡು ಬಂದಿತ್ತು. ಅಂದರೆ ಈ ವರ್ಷ ಈ ಭಾಗಗಳಲ್ಲಿ ಬಿಸಿಲು ಹೆಚ್ಚಾಗಿದೆ. ಮಳೆ(Rain) ಬಂದ ಕಾರಣ ಭೂಮಿಗೆ ತಂಪೆರೆದಂತಾಗಿದೆ.
ಇದನ್ನೂ ಓದಿ : Night Curfew: ಇಂದಿನಿಂದ ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಇಲ್ಲಿವೆ ಮಾರ್ಗಸೂಚಿಗಳು!
ಬಾಗಲಕೋಟಿ(Bagalakot) ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೇಲೂರಿನಲ್ಲಿ ಹೆಚ್ಚಿನ ತೀವ್ರತೆಯ ಗಾಳಿ ಬೀಸಿದ ಕಾರಣ ಬೃಹತ್ ಮರವೊಂದು ನೆಲಕ್ಕೆ ಉರುಳಿದ್ದು ಇದರ ಪರಿಣಾಮ 12 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲವು ಕಂಬಗಳು ಮನೆಗಳ ಮೇಲೆ ಮನೆಗಳ ಮೇಲೆ ಬಿದ್ದಿವೆ, ಅದೃಷ್ಟವಶಾತ ಯಾವುದೇ ಸಾವು ನೋವು ಸಂಭವಿಸಿಲ್ಲ. ಸಧ್ಯ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಇದನ್ನೂ ಓದಿ : Hatti Gold Mines: 'ಏಪ್ರಿಲ್ 30 ರಂದು 'ಹಟ್ಟಿ ಚಿನ್ನದ ಗಣಿ'ಗೆ ಮರುನಾಮಕರಣ'
ಬಾದಾಮಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಗುಡುಗು ಮತ್ತು ಮಿಂಚಿ ಸಹಿತ ಮಳೆಯಾಗಿದೆ.
ಮಳೆಯ ಪರಿಣಾಮ ಧಾರವಾಡ(Dharawada)ದ ಉದಯ ಹಾಸ್ಟೆಲ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಜಕ್ಮ್ ಗೊಂಡಿದೆ. ಮಳೆ ಬರುವ ಮೊದಲು ಅವಳಿ ನಗರಗಳಲ್ಲಿ ಸ್ವಲ್ಪ ಸಮಯದವರೆಗೆ ಜೋರಾದ ಗಾಳಿ ಬಿಸಿತ್ತು. ಎರಡೂ ನಗರಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರುದಿದೆ.
ಇದನ್ನೂ ಓದಿ : New Mining policy : 'ಈ ತಿಂಗಳ ಅಂತ್ಯದ ವೇಳೆಗೆ ಜಾರಿಯಾಗಲಿದೆ ಹೊಸ ಗಣಿಗಾರಿಕೆ ನೀತಿ'
ವಿಜಯಪುರ(Vijayapura) ನಗರ ಸೇರಿದಂತೆ, ಆಲಮೇಲ, ತಾಲಿಕೋಟೆ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮಾನ್ಸೂನ್ ಪೂರ್ವದ ಮಳೆ ಬಂಡ ಕಾರಣ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಈ ಮಳೆಯಿಂದಾಗಿ ಒಣದ್ರಾಕ್ಷಿ ಹಾನಿಯಾಗುತ್ತದೆ ಎಂದು ಭಯ ಬಿತರಾಗಿದ್ದರೆ.
ಇದನ್ನೂ ಓದಿ : Govind Karjol: ರಾಜ್ಯದ ಉಪಮುಖ್ಯಮಂತ್ರಿಗೆ 'ಕೊರೋನಾ ಪಾಸಿಟಿವ್'..।
ಕಲಬುರಗಿ(kalaburagi ) ನಗರ ಮತ್ತು ತಾಲ್ಲೂಕಿನ ಕೆಲವು ಭಾಗಗಳು ಸಹ ಸಂಜೆ ಮಧ್ಯಮ ಮಳೆಯಾಗಿದೆ. ನಗರದಲ್ಲಿ ಮಳೆಯ ಪ್ರಮಾಣ 40 ಡಿಗ್ರಿ ಗಡಿ ದಾಟಿದ ಏರುತ್ತಿರುವ ತಾಪಮಾನದಿಂದ ಮಳೆ ಸ್ವಲ್ಪ ಬಿಡುವು ನೀಡಿದಂತಾಗಿದೆ. ಚಿಕ್ಕಮಂಗಳೂರು ಜಿಲ್ಲೆಯ ಕಳಸ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಿನ್ನೆ ಮಳೆಯಾಗಿದ್ದು ಇದು ಕಾಫಿ(Coffee) ಮತ್ತು ಕಡಲ ಬೆಳೆಗಾರರ ಮುಖದಲ್ಲಿ ಮಂದಹಾಸ ತಂದಿದೆ. ಈ ಪ್ರದೇಶದಲ್ಲಿ ಸಂಜೆ ಅರ್ಧ ಘಂಟೆಯವರೆಗೆ ಜೋರಾದ ಗಾಳಿ ಸಹಿತ ಮಳೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.