Night Curfew: ಇಂದಿನಿಂದ ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಇಲ್ಲಿವೆ ಮಾರ್ಗಸೂಚಿಗಳು!

 ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕುರು, ಉಡುಪಿ ಮತ್ತು ಮಣಿಪಾಲ್‌ನಲ್ಲಿ ಏಪ್ರಿಲ್ 10 ರಿಂದ 20 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನೈಟ್ ಕರ್ಫ್ಯೂ

Last Updated : Apr 10, 2021, 10:43 AM IST
  • ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ
  • ಮದುವೆ, ಸಭೆ ಸಮಾರಂಭಗಳು ಮತ್ತು ಪ್ರತಿಭಟನೆ, ಹೋರಾಟಗಳು ನಿಗದಿಪಡಿಸಿದ ಮಿತಿಗಳಲ್ಲಿ ನಡೆಸಲು ಸರ್ಕಾರ ಸೂಚಿಸಿದೆ.
  • ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕುರು, ಉಡುಪಿ ಮತ್ತು ಮಣಿಪಾಲ್‌ನಲ್ಲಿ ಏಪ್ರಿಲ್ 10 ರಿಂದ 20 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನೈಟ್ ಕರ್ಫ್ಯೂ
Night Curfew: ಇಂದಿನಿಂದ ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಇಲ್ಲಿವೆ ಮಾರ್ಗಸೂಚಿಗಳು! title=

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಾಂಡವಾಡುತ್ತಿದೆ. ನಿನ್ನೆ ಒಂದು ದಿನ ರಾಜಧಾನಿಯಲ್ಲಿ 5,576 ಹೊಸ ಪ್ರಕರಣಗಳು ದಾಖಲಾಗಿವೆ. ದಿನೆ ದಿನೆ  ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.  ಪ್ರಸ್ತುತ ಪ್ರತಿದಿನ 4,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ.

ಈ ವರ್ಷದಲ್ಲಿ ಒಂದೇ ದಿನ 7,955 ಕರೋನಾ ಪ್ರಕರಣ(Corona Cases)ಗಳು ಕಂಡು ಬಂದಿವೆ,  ಇದು ಸಧ್ಯ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10,48,085 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 46 ಸಾವುಗಳು ಸಂಭವಿಸಿವೆ, ಇದರಿಂದ ಸಾವಿನ ಸಂಖ್ಯೆ 12,813 ಕ್ಕೆ ಏರಿದೆ.

ಬೆಂಗಳೂರು ಸೇರಿದಂತೆ ರಾಜ್ಯದ  ಆರು ನಗರಗಳಲ್ಲಿ ಇಂದಿನಿಂದ (ಏಪ್ರಿಲ್ 10) ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ(Night Curfew) ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕುರು, ಉಡುಪಿ ಮತ್ತು ಮಣಿಪಾಲ್‌ನಲ್ಲಿ ಏಪ್ರಿಲ್ 10 ರಿಂದ 20 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕರೋನಾ ಕರ್ಫ್ಯೂ (ನೈಟ್ ಕರ್ಫ್ಯೂ) ವಿಧಿಸಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಹೇಳಿದ್ದಾರೆ.

ಇದನ್ನೂ ಓದಿ : Hatti Gold Mines: 'ಏಪ್ರಿಲ್ 30 ರಂದು 'ಹಟ್ಟಿ ಚಿನ್ನದ ಗಣಿ'ಗೆ ಮರುನಾಮಕರಣ'

ಮದುವೆ(Marriages), ಸಭೆ ಸಮಾರಂಭಗಳು ಮತ್ತು ಪ್ರತಿಭಟನೆ, ಹೋರಾಟಗಳು ನಿಗದಿಪಡಿಸಿದ ಮಿತಿಗಳಲ್ಲಿ ನಡೆಸಲು ಸರ್ಕಾರ ಸೂಚಿಸಿದೆ. 

ಮಾಸ್ಕ್(Mask) ಧರಿಸದೆ ಓಡಾಡುವ ಹಾಗಿಲ್ಲ, ಹಾಗೇನಾದ್ರೂ ಆದ್ರೆ  250 ರೂ. ದಂಡ ಮತ್ತು ಕಠಿಣ  ಕೈಗೊಳ್ಳಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಇದನ್ನೂ ಓದಿ : New Mining policy : 'ಈ ತಿಂಗಳ ಅಂತ್ಯದ ವೇಳೆಗೆ ಜಾರಿಯಾಗಲಿದೆ ಹೊಸ ಗಣಿಗಾರಿಕೆ ನೀತಿ'

ರಾಜಧಾನಿ  ಬೆಂಗಳೂರಿನಲ್ಲಿ ದಿನಕ್ಕೆ 1 ಲಕ್ಷ ಕೋವಿಡ್ ಟೆಸ್ಟ್(Covid Test) ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ನೆಗೆಟಿವ್ ಪ್ರಕರಣಗಳನ್ನು ಗುರುತಿಸಲು ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಿದೆ.

ಇದನ್ನೂ ಓದಿ : Govind Karjol: ರಾಜ್ಯದ ಉಪಮುಖ್ಯಮಂತ್ರಿಗೆ 'ಕೊರೋನಾ ಪಾಸಿಟಿವ್'..।

ಎಲ್ಲಿ  ನಿರ್ಬಂಧ ವಿಧಿಸಲಾಗಿದೆ: 

ಏಪ್ರಿಲ್ 10 ರಿಂದ ಏಪ್ರಿಲ್ 20 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ((Night Curfew) ವಿಧಿಸಲಾಗಿದೆ.

ರೋಗಿಗಳು(Patients) ಮತ್ತು ಅವರ ಜೊತೆಯವರಿಗೆ ಮಾತ್ರ ಪ್ರಯಾಣಿಸಲು ಅವಕಾಶ.

ಅಗತ್ಯ ಸೇವೆಗಳು, ಸರಕುಗಳ ವಿತರಣೆ, ಇ-ಕಾಮರ್ಸ್(E-commerce ) ಡೆಲೆವರಿಗೆ ಅವಕಾಶ ನೀಡಲಾಗುವುದು.

ಇದನ್ನೂ ಓದಿ : BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ'

ನೈಟ್ ಶಿಫ್ಟ್(Night Shift) ಕೆಲಸ ಮಾಡುವ ಕೈಗಾರಿಕೆಗಳ ನೌಕರರು ರಾತ್ರಿ 10 ರ ಮೊದಲೇ ಕೆಲಸದ ಸ್ಥಳ ತಲುಪಬೇಕು.

ವೈದ್ಯಕೀಯ ಸೇವೆಗಳು(Medical Services) ಮತ್ತು ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ರೈಲ್ವೆ ನಿಲ್ದಾಣ(railway station), ಬಸ್ ನಿಲ್ದಾಣ ಅಥವಾ ವಿಮಾನದಿಂದ ಕರ್ಫ್ಯೂ ಅವಧಿಯಲ್ಲಿ ಪ್ರಯಾಣಿಸುವವರು ತಮ್ಮ ಪ್ರಯಾಣದ ಪುರಾವೆಯಾಗಿ ಟಿಕೆಟ್‌ಗಳನ್ನು ತೋರಿಸಬೇಕು.

ಇದನ್ನೂ ಓದಿ : Bengaluru in Section 144: ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ! ಜಿಮ್, ಸ್ವಿಮಿಂಗ್ ಫೂಲ್ ಏಪ್ರಿಲ್ 20 ರವರೆಗೆ ಬಂದ್!

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ(Social Distancing,) ಕಾಪಾಡಿಕೊಳ್ಳುವುದು ಕಡ್ಡಾಯ ಮತ್ತು ಗುಂಪು ಗುಡಿ ನಿಲ್ಲುವ ಹಾಗಿಲ್ಲ.

ಮಾಸ್ಕ್ ಇಲ್ಲದಿದ್ದರೆ 250 ರೂ. ದಂಡ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News