ಬೆಂಗಳೂರು : ಗಣೇಶ ಹಬ್ಬ ಸಮೀಪಿಸುತ್ತಿದೆ. ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.   ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ  ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ಸ್ಪೆಷಲ್ ಡ್ರೈವ್  ಆರಂಭಿಸಿದ್ದಾರೆ.  ಯಾವ ಏರಿಯಾಗಳಲ್ಲಿ ಗಣೇಶ ಕೂರಿಸಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆದ ಕೆಲವು ಘಟನೆಗಳು ರಾಜ್ಯ ಪೊಲೀಸರ ನಿದ್ದೆಗೆಡಿಸಿದೆ. ಈ ನಿಟ್ಟಿನಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಈ ಮಧ್ಯೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರುತ್ತಿದೆ. ಗಣೇಶ ಹಬ್ಬದ ವೇಳೆ ಸಾರ್ವಜನಿಕ ಗಣೇಶೋತ್ಸವ ಸರ್ವೇ ಸಾಮಾನ್ಯ. ಆದರೆ ಈ ಬಾರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ನಗರದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. 


ಇದನ್ನೂ ಓದಿ :   Today Vegetable Price: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಹೀಗಿದೆ


ಗಣೇಶೋತ್ಸವ ಕುರಿತು ಪ್ರತಿ ಏರಿಯಾದ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಎಲ್ಲೆಲ್ಲಿ ಗಣೇಶ ಕೂರಿಸಲಾಗುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುತ್ತಿರುವವರು ಯಾರು ? ಯಾವ ಸ್ಥಳದಲ್ಲಿ ಗಣೇಶ ಕೂರಿಸಲಾಗುವುದು ಎನ್ನುವ ಬಗ್ಗೆ ಬಿಬಿಎಂಪಿ ಅನುಮತಿ ಪಡೆಯಲಾಗಿದೆಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. 


ಅಲ್ಲದೆ , ಗಣೇಶ ಕೂರಿಸುವ ಜಾಗ ಖಾಸಗಿಯವರಿಗೆ ಸೇರಿದ್ದ, ಅಥವಾ ಬಿಬಿಎಂಪಿ ಜಾಗನಾ..? ಗಣೇಶ ಕೂರಿಸುವ ಏರಿಯಾ ಎಂಥದ್ದು ? ಆ ಏರಿಯಾದಲ್ಲಿ ವಿವಾದಗಗಳೇನಾದರು ಇದೆಯಾ?  ಆ ಜಾಗದಲ್ಲಿ ಎಷ್ಟು ಜನ ಸೇರಬಹುದು?  ಸ್ಥಳಾವಕಾಶ ಹೇಗಿದೆ, ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡುತ್ತಿದ್ದಾರಾ ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. 


ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂದಂತೆ ಸಂಪೂರ್ಣ ಎಚ್ಚರ ವಹಿಸಿಕೊಳ್ಳಲಾಗಿದೆ.  
 
 ಇದನ್ನೂ ಓದಿ :   ಪ್ರೇಯಸಿ ಮೀಟ್‌ಗೆ ಭೂಗತ ಪಾತಕಿ ಬಚ್ಚಾಖಾನ್‌ಗೆ ಅನುವು ಮಾಡಿಕೊಟ್ಟಿದ್ದೇ ಪೊಲೀಸರು!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.