ಸುರಪುರಿನಲ್ಲಿ ವೇಣುಗೋಪಾಲ ಸ್ವಾಮಿ ದೇವರ ಹಾಲೋಕಳಿ..!

Last Updated : Aug 22, 2022, 08:27 AM IST
  • ಗೊಸಲ ರಾಜವಂಶಸ್ಥರಾದ ರಾಜಾ ಕೃಷ್ಣಪ್ಪನಾಯಕ ಚಾಲನೆ ನೀಡಿದರು.
  • ಬೆಳಿಗ್ಗೆಯಿಂದಲೇ ಪೂಜಾ ಕೈಕಂರ್ಯಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸುರಪುರಿನಲ್ಲಿ ವೇಣುಗೋಪಾಲ ಸ್ವಾಮಿ ದೇವರ ಹಾಲೋಕಳಿ..! title=

ಸುರಪುರ ನಗರದ ಆರಾಧ್ಯ ದೈವ ವೇಣುಗೋಪಾಲ ಸ್ವಾಮಿ ದೇವರ ಹಾಲೋಕಳಿ ಜಾತ್ರೆ ಅದ್ದೂರಿಯಾಗಿ ಜರುಗಿತು.

ಗೊಸಲ ರಾಜವಂಶಸ್ಥರಾದ ರಾಜಾ ಕೃಷ್ಣಪ್ಪನಾಯಕ ಚಾಲನೆ ನೀಡಿದರು, ಬೆಳಿಗ್ಗೆಯಿಂದಲೇ ಪೂಜಾ ಕೈಕಂರ್ಯಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಗೆ ಅಪಾರ ಜನಸ್ತೋಮವೇ ನೆರೆದಿತ್ತು, ಇತಿಹಾಸದ ಪುರಾತನ ಹಿನ್ನಲೆಯುಳ್ಳ ಜಾತ್ರೆ ಇದಾಗಿದ್ದು ಕೃಷ್ಣಾ ಜನ್ಮಾಷ್ಟಮೀಯಿಂದ ಮೂರುದಿನಗಳ ಕಾಲ ನಡೆಯುವ ಈ ಜಾತ್ರೆ ನೋಡೋದೆ ಚಂದ್...

ದೇವಸ್ಥಾನ ಪ್ರಾಂಗಾಣದಲ್ಲಿ ಐದು ಕಂಬಗಳು ಹಾಕಲಾಗಿರುತ್ತೆ  ವೇಣುಗೋಪಾಲ ಸ್ವಾಮಿ ಪೂಜೆ ಸಲ್ಲಿಸಿದ ನಂತರ ಆಸ್ಥಾನದ ರಾಜರು ನಾಣ್ಯಗಳನ್ನು ಚೆಲ್ಲುವ ಮೂಲಕ ಹಾಲೋಕಳಿಗೆ ಚಾಲನೆ ನೀಡುತ್ತಾರೆ ನಂತರ ನಡೆಯುವ ಕಂಬ ಹತ್ತಲು ನಾ ಮುಂದು ತಾ ಮುಂದು ಎಂದು ಭಾಗವಹಿಸಿಸುವ ಸ್ಪರ್ದಿಗಳ ಆಟ ರಣರೋಚಕವಾಗಿರುತ್ತದೆ.ಮೇಲಿಂದ ನೀರಿನ ಓಲಾಟ ನೋಡುಗರ ಕಣ್ಮನ ಸೆಳೆಯುವ ಆಟೋಟಗಳು ಇದೇಲ್ಲಾ ಜಾತ್ರೆಯ ವಿಶೇಷತೆ..ಲಕ್ಷಾಂತರ ಜನ್ರ ಭಕ್ತರ ನಡುವೆ ಸುರಪುರಿನ ವೇಣುಗೋಪಾಲ ಸ್ವಾಮಿ ಜಾತ್ರೆ ಅದ್ದೂರಿಯಾಗಿ ಜರುಗಿತು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News