ಬೆಂಗಳೂರು : ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಸುಖ ಸಂಸಾರದಲ್ಲಿ ಅನುಮಾನವೆಂಬ ಭೂತ ವಕ್ಕರಿಸಿತ್ತು. ಅಲ್ಲಿಂದ ಸಂಸಾರ ಹಳಿ ತಪ್ಪಿತ್ತು. ಅನಾರೋಗ್ಯದಿಂದ ಬಳಲ್ತಿದ್ದ ಗಂಡನಿಗೆ ಹೆಂಡತಿ‌ ಮೇಲೆ ಸದಾ ಅನುಮಾನ. ಅದೇ ಈಗ ಜೈಲು ಪಾಲಾಗುವಂತೆ ಮಾಡಿದೆ. ತಂಗಿಯ ಎಂಗೆಜ್ಮೆಂಟ್‌ಗೆ ಬರ್ಲಿಲ್ಲ ಅಂತಾ ಪತಿ ಪತ್ನಿಯನ್ನ ಏನು ಮಾಡಿದಾ ಗೊತ್ತಾ..? ಇಲ್ಲಿದೆ ವರದಿ.


COMMERCIAL BREAK
SCROLL TO CONTINUE READING

ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಜಯಪ್ರಕಾಶ್. ಅನಾರೋಗ್ಯದಿಂದ ಬಳಲ್ತಿರೊ ಈತ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲೆ ಕೂತಿದ್ದ. ಪ್ರೀತಿಸಿ ಮದುವೆ ಆದ ಕಾರಣಕ್ಕೆ ಇಡೀ ಸಂಸಾರದ ಹೊಣೆಯನ್ನ ಪತ್ನಿಯೇ ಹೊತ್ತಿದ್ದಳು. ಇಷ್ಟಾಕ್ಕಾದ್ರು ಕೃತಜ್ಙನೆಯಿಂದ ಇರದ ಈತ ತಾಳಿ ಕಟ್ಟಿದ ಪತ್ನಿಯನ್ನೆ ಚಾಕುವಿನಿಂದ ಇರಿದಿದ್ದಾನೆ.


ಇದನ್ನೂ ಓದಿ:ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿಎಂ ಡಿ.ಕೆ ಶಿವಕುಮಾರ್


ಹೌದು... 32 ವರ್ಷದ ಜಯಪ್ರಕಾಶ್ ಹಾಗೂ 26 ವರ್ಷದ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾವಣಗೆರೆಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ರು. ಇವ್ರ ಮದುವೆಗೆ ಕುಟುಂಬಸ್ಥರ ವಿರೋಧವಿತ್ತು ಹಾಗಾಗಿ ಒಳ್ಳೆ ಜೀವನ ಮಾಡಿ ಬದುಕಲ್ಲಿ ಏನನ್ನಾದರು ಸಾಧಿಸಬೇಕು ಅಂತಾ ಕ್ಯಾಟರಿಂಗ್ ಬ್ಯುಸಿನೆಸ್ ಶುರು ಮಾಡಿದ್ರು. ಆದ್ರೆ ವಿಧಿಯಾಟ ಬೇರೆ ಆಗಿತ್ತು. ಜಯಪ್ರಕಾಶ್ ಕಳೆದ ಮೂರು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ. ಹಾಗಾಗಿ ಕೆಲಸ ಎಲ್ಲಾ ಬಿಟ್ಟು ಮನೆಯಲೇ ಇದ್ದ ದಿವ್ಯಶ್ರೀ ಕೂಡ ಕ್ಯಾಟರಿಂಗ್ ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋಗ್ತಿದ್ಳು. ಇಡೀ ಮನೆಯ ಜವಾಬ್ದಾರಿಯನ್ನ ತಾನೆ ಹೊತ್ತಿದ್ಳು. ಜೊತೆಗೆ ಗಂಡನ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ತಿದ್ದಳು.
 
ಹೀಗಿರ್ಬೇಕಾದ್ರೆ ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡಿತಲೇ‌ ಇತ್ತು. ಅಲ್ಲದೇ ಪತ್ನಿ ಫೋನಲ್ಲಿ‌ ಹೆಚ್ಚು ಮಾತಾಡ್ತಾಳೆ ಹಾಗಾಗಿ ಆಕೆಗೆ ಅಕ್ರಮ ಸಂಬಂಧ ಇದೆ ಅನ್ನೋ ಅನುಮಾನ ಗಂಡನ ತಲೆಗೆ ಬಂದಿತ್ತು. ಅಲ್ಲಿ ಮನೆ ಖಾಲಿ ಮಾಡಿ ಸುಂಕದಕಟ್ಟೆ ಸಮೀಪ ಹೊಸದೊಂದು ಮನೆ ಬಾಡಿಗೆ ಪಡೆದು ಬದುಕು ಶುರು ಮಾಡಿದ್ರು. ಹೀಗಿರ್ಬೇಕಾದ್ರೆ ಫೆಬ್ರವರಿ 15 ರ ಬೆಳಗ್ಗೆ ತನ್ನ ತಂಗಿಯ ನಿಶ್ಚಿತಾರ್ಥಕ್ಕೆ ನೀನು ಬರ್ಲಿಲ್ಲ ಅಂತಾ ದಿವ್ಯಶ್ರೀ ಜೊತೆಗೆ ಜಯಪ್ರಕಾಶ್ ಗಲಾಟೆ ಶುರು ಮಾಡಿದ್ದ.


ಇದನ್ನೂ ಓದಿ:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಪ್ರೋಗ್ರಾಮ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಆಹ್ವಾನ


ಗಲಾಟೆ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ಸ ಚಾಕು ತೆಗೆದುಕೊಂಡು ಕೊಲ್ಲಲು ಬಂದಿದ್ದಾನೆ.‌ ದಿವ್ಯಶ್ರೀ ತಪ್ಪಿಸಿಕೊಂಡಿದ್ದ ತೊಡೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿ 8 ಹೊಲಿಗೆ ಬಿದ್ದಿದೆ. ಘಟನೆಗೆ ಸಂಬಂಧಪಟ್ಟಂತೆ ದಿವ್ಯಶ್ರೀ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಎಫ್ಐಆರ್ ದಾಖಲಿಸಿಕೊಂಡಿರೊ ಪೊಲೀಸರು ಜಯಪ್ರಕಾಶ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ...


ಏನೇ ಹೇಳಿ ಪ್ರೀತಿಸಿ ಮದುವೆಯಾದವರು ಛಲದೊಂದಿಗೆ ಬದುಕು ನಡೆಸಿ ಪ್ರೀತಿಗೆ ವಿರೋಧವಾಗಿದ್ದ ಪೋಷಕರಿಗೆ ಉತ್ತರ ನೀಡಬೇಕಿತ್ತು. ಆದ್ರೆ ಅನುಮಾನದಿಂದ ಇಡೀ ಸಂಸಾರವೇ ಹಳಿ ತಪ್ಪಿರೋದು ಮಾತ್ರ ಪ್ರೀತಿ ಮಾಡೋರು ಸ್ವಲ್ಪ ಯೋಚನೆ ಮಾಡುವಂತೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.