ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

ಇದೇ ಸಂದರ್ಭದಲ್ಲಿ “ಮಾತು ಬಾರದ ಸುನೀತಾ ಬಾಯಿ ಎಂಬವರು ತನ್ನ ಮಗಳಾದ ಅರ್ಪಿತ ಮೂಲಕ ಸಮಸ್ಯೆ ಹೇಳಿಕೊಂಡರು. ಮಗುವಿನ ವಾಕ್ಚಾತುರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಕರೆದು "ಸುನೀತಾ ಬಾಯಿ ಅವರಿಗೆ ಪಿಂಚಣಿ ಹಣ ಮತ್ತು ಗೃಹಲಕ್ಷ್ಮೀ ಹಣ ಬರುವಂತೆ ವ್ಯವಸ್ಥೆ ಮಾಡಬೇಕು"ಎಂದು ಆದೇಶಿಸಿದರು.

Written by - Bhavya Sunil Bangera | Edited by - Bhavishya Shetty | Last Updated : Feb 18, 2024, 07:03 PM IST
    • ಜ್ಞಾನಭಾರತಿ ಆವರಣದ ಬಿಪಿಎಡ್ ಕ್ರೀಡಾಂಗಾಣದಲ್ಲಿ ನಡೆದ ಕಾರ್ಯಕ್ರಮ
    • "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮ
    • ಮಗುವಿನ ವಾಕ್ಚಾತುರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಿಸಿಎಂ ಡಿಕೆಶಿ
ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಡಿಸಿಎಂ ಡಿ.ಕೆ ಶಿವಕುಮಾರ್  title=
DCM DK Shivakumar

ಬೆಂಗಳೂರು: ಜ್ಞಾನಭಾರತಿ ಆವರಣದ ಬಿಪಿಎಡ್ ಕ್ರೀಡಾಂಗಾಣದಲ್ಲಿ ನಡೆದ ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ" ಕಾರ್ಯಕ್ರಮದಲ್ಲಿ ಜನರ ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು.

ಇದೇ ಸಂದರ್ಭದಲ್ಲಿ “ಮಾತು ಬಾರದ ಸುನೀತಾ ಬಾಯಿ ಎಂಬವರು ತನ್ನ ಮಗಳಾದ ಅರ್ಪಿತ ಮೂಲಕ ಸಮಸ್ಯೆ ಹೇಳಿಕೊಂಡರು. ಮಗುವಿನ ವಾಕ್ಚಾತುರ್ಯಕ್ಕೆ ಮೆಚ್ಚುಗೆ ಸೂಚಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಕರೆದು "ಸುನೀತಾ ಬಾಯಿ ಅವರಿಗೆ ಪಿಂಚಣಿ ಹಣ ಮತ್ತು ಗೃಹಲಕ್ಷ್ಮೀ ಹಣ ಬರುವಂತೆ ವ್ಯವಸ್ಥೆ ಮಾಡಬೇಕು"ಎಂದು ಆದೇಶಿಸಿದರು.

ಇದನ್ನೂ ಓದಿ: IND vs ENG : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 434 ರನ್ ಗಳ ಅಂತರದಿಂದ ದಾಖಲೆಯ ಜಯ

ಆರ್.ಆರ್ ನಗರ ವಾಸಿ ಎರಡು ಕಾಲುಗಳಿಲ್ಲದ ರಾಜಪ್ಪ ಎಂಬವರು ಪೆಟ್ಟಿಗೆ ಅಂಗಡಿ ಹಾಕಿಕೊಡಿ ಏನಾದರೂ ವ್ಯಾಪಾರ ಮಾಡಿಕೊಂಡು ಬದುಕುತ್ತೇನೆ ಎಂದಾಗ "ಇವರ ಮನವಿಗೆ ತಕ್ಷಣ ಸ್ಪಂದಿಸಿ ನನಗೆ ಮಾಹಿತಿ ನೀಡಿ" ಎಂದು ಡಿಸಿಎಂ ಹೇಳಿದರು.

"ಕೆಂಪೇಗೌಡ ಬಡಾವಣೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಮುನ್ನವೇ ನಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡಿದ್ದೆವು. ಆದರೂ ಮನೆ ಕೆಡವಲಾಗಿದೆ" ಎಂದು ಚಂದ್ರಶೇಖರ್ ಅವರ ಮನವಿಗೆ "ಈ ರೀತಿಯ ಅನೇಕ ಸಮಸ್ಯೆಗಳಿದ್ದು ಮೊದಲ ಆದ್ಯತೆ ನೀಡಿ ಬಗೆಹರಿಸುತ್ತೇನೆ" ಎಂದು ಯುವಕನಿಗೆ ಭರವಸೆ ನೀಡಿದರು.

ಪೀಣ್ಯದಲ್ಲಿ ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಜಾಗದ ಮಾಲೀಕರಿಗೆ ತಿಂಗಳಿಗೆ 1 ಸಾವಿರ  ಕಟ್ಟುತ್ತಿದ್ದೇವೆ ಎಂದು ರೇಣುಕ, ರಂಗಮ್ಮ, ಗುರುಬಾಯಿ, ಕವಿತಾ, ಶಾಂತಮ್ಮ ಅವರು ಮನವಿ ಸಲ್ಲಿಸಿದಾಗ "ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿ, ಖುದ್ದಾಗಿ ನಾನೇ ಮನೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ" ಎಂದು ಆಶ್ವಾಸನೆ ನೀಡಿದರು.

ಬೆಂಗಳೂರಿಗೆ ಬಂದು 30 ವರ್ಷ ದುಡಿದು ಸೈಟ್ ತೆಗೆದುಕೊಂಡಿದ್ದೇನೆ ಮನೆ ಕಟ್ಟಲು ಯಾವುದಾದರೂ ಬ್ಯಾಂಕಿನಿಂದ ಸಾಲ ಕೊಡಿಸಿ ಎಂದು ಲಗ್ಗೆರೆಯ ಲೀಲಾವತಿಯವರು ಕೇಳಿದಾಗ "ಒಳ್ಳೆಯ ಮನೆ ಕಟ್ಟಿ, ಎಲ್ಲಾದರೂ ಸಾಲ ಸೌಲಭ್ಯ ದೊರೆಯುವಂತೆ ಮಾಡಿಕೊಡುತ್ತೇನೆ" ಎಂದು ಭರವಸೆ ನೀಡಿದರು.

ಗಂಡ, ಮಕ್ಕಳಿಲ್ಲದ ನಾನು ಒಬ್ಬಂಟಿ. ಪಡಿತರ ಚೀಟಿ ಇಲ್ಲ ಎಂದು ಕಣ್ಣೀರಾದ ಆರ್.ಆರ್.ನಗರದ ಸಿದ್ದಲಿಂಗಮ್ಮ ಅವರಿಗೆ "ನಮ್ಮ ಸರ್ಕಾರ ನಿಮ್ಮ ಜೊತೆಗಿದೆ. ನೀವು ಒಬ್ಬಂಟಿಯಲ್ಲ" ಎಂದು ಡಿಸಿಎಂ ಸಮಾಧಾನ ಮಾಡಿದರು.

ಹಿರಿಯ ನಾಗರಿಕರ ಮತ್ತು ವಿಶೇಷ ಚೇತನರ ಬಳಿ ತೆರಳಿ ಅವರ ನಡುವೆಯೇ ಕುಳಿತು ಸಾವಧಾನದಿಂದ ಸಮಸ್ಯೆಗಳನ್ನು ಆಲಿಸಿ, ಅರ್ಜಿಗಳಲ್ಲಿ ದೋಷಗಳಿದ್ದರೆ ತಿದ್ದುಪಡಿ ಮಾಡಿದ ಡಿಸಿಎಂ ಅವರು ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು ವಿಶೇಷವಾಗಿತ್ತು.

ತುರ್ತು ಕಾರ್ಯದ ನಿಮಿತ್ತ ಡಿ.ಕೆ.ಶಿವಕುಮಾರ್ ಅವರು ತೆರಳಿದ ನಂತರ ಸಂಸದ ಡಿ.ಕೆ.ಸುರೇಶ್ ಅವರು ಜನರ ಸಮಸ್ಯೆಗಳನ್ನು ಆಲಿಸಿದರು.

"ಏನು ಮಾಡುತ್ತಿರೋ ನನಗೆ ಗೊತ್ತಿಲ್ಲ. ಮೂರು ದಿನದೊಳಗೆ ಮಂಜುನಾಥ್ ಅವರ ಮಕ್ಕಳಿಗೆ ವಿಕಲಚೇತನರ ಮಾಶಾಸನ ಬರುವಂತೆ ವ್ಯವಸ್ಥೆ ಮಾಡಬೇಕು" ಎಂದು ಬಿಬಿಎಂಪಿ ವಲಯ ಅಧಿಕಾರಿಗೆ ಸಂಸದ ಡಿ.ಕೆ.ಸುರೇಶ್ ಅವರು ಸೂಚನೆ ನೀಡಿದರು.

"ನನ್ನ ಇಬ್ಬರೂ ಮಕ್ಕಳು ಹುಟ್ಟು ಕುರುಡರಾಗಿದ್ದು, ಡ್ರೈವರ್ ಆಗಿ ಕೆಲಸ ಮಾಡುವ ನನಗೆ ಅಪಘಾತವಾಗಿ ಶಸ್ತ್ರಚಿಕಿತ್ಸೆಯಾಗಿದೆ ಸಹಾಯ ಮಾಡಿ ಎಂದ ಶ್ರೀನಗರದ ಮಂಜುನಾಥ್ ಮನವಿಗೆ ಸಂಸದರು ಸ್ಪಂದಿಸಿದ್ದು ಹೀಗೆ. ಸಂಸದ ಡಿ.ಕೆ.ಸುರೇಶ್ ಅವರ ಸಹಾಯಕ್ಕೆ ಕಣ್ಣೀರು ಹಾಕುತ್ತಾ ಮಂಜುನಾಥ್ ಭಾವುಕರಾಗಿ ಧನ್ಯವಾದಗಳನ್ನು ತಿಳಿಸಿದರು.

ತರಕಾರಿ ವ್ಯಾಪಾರ ಮಾಡುವ ಮಂಜುಳ ಅವರು 4 ಪುಟ್ಟ ಮಕ್ಕಳ ಜೊತೆ ಧಾರವಾಡದಿಂದ ಬಂದಿದ್ದನ್ನು ಗಮನಿಸಿ ಧನಸಹಾಯ ಮಾಡಿದ್ದಲ್ಲದೆ, ಅವರ ಸಮಸ್ಯೆ ಪರಿಹಾರಕ್ಕೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆಯವರು ತೀರಿ ಹೋಗಿದ್ದು ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಿ ಎಂದು ಸುಂಕದಕಟ್ಟೆಯ ಜಗದೀಶ್ ಅವರು ಮನವಿ ನೀಡಿದಾಗ "ಮನೆಯ ಬಳಿ ಬಾ ರಾಮಲಿಂಗರೆಡ್ಡಿ ಅವರ ಗಮನಕ್ಕೆ ತಂದು ಕೆಲಸ ದೊರೆಯುವಂತೆ ಮಾಡುತ್ತೇನೆ" ಎಂದು ತಿಳಿಸಿದರು.

ಲಗ್ಗೆರೆ ವಾರ್ಡಿನ ಅಂಧ ಸ್ನೇಹಿತರಾದ ರಾಜು, ಶಾಲು, ಅಣ್ಣಮ್ಮ, ಮಹಾಲಕ್ಷ್ಮಿ ಅವರು ವಾಸಿಸಲು ಮನೆ, ದುಡಿಯಲು ಕೆಲಸ ಬೇಕು" ಎಂದು ಕೇಳಿದರು. ಸುಂಕದಕಟ್ಟೆಯ ನಿರ್ಮಲ, ರೂಪಾ, ಗಂಗಮ್ಮ, ಯಮುನ, ಲಗ್ಗೆರೆಯ ಶಾರದಮ್ಮ, ಆರ್.ಆರ್ ನಗರದ ವಿನುತಾ ಅವರು "ನಮಗೆ ವಾಸಿಸಲು ಮನೆ ನೀಡಿ ನಿಮ್ಮ ಪಕ್ಷಕ್ಕೆ ಮತ ಹಾಕಿರುವುದು” ಎಂದರು.

ಕನಕಪುರದ ಗಗನ್ ದೀಪ್  ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದಾಗ "ಕನಕಪುರದವನು ಇಲ್ಲಿಗೆ ಏಕೆ ಬಂದೆ. ಊರಲ್ಲಿ ಲಾಟರಿ ಹಾಕಿ ಹೆಸರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು" ಎಂದರು.

ಬೆಂಗಳೂರಿಗೆ ಡಿ.ಕೆ.ಶಿವಕುಮಾರ್ ಅವರು ಕೊಡುಗೆ ಕೊಟ್ಟೆ ಕೊಡುತ್ತಾರೆ ಎನ್ನುವ ನಂಬಿಕೆ ನನಗಿದೆ. ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆರ್‌.ಆರ್‌.ನಗರ ಶಾಸಕ ಮುನಿರತ್ನ ಅವರು ಹೊಗಳಿದರು.

ಇದನ್ನೂ ಓದಿ:  Mohammed Siraj: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭಾವಿ ಪತ್ನಿ ಇವರೇ..!

ಇಬ್ಬರೂ ಬೆಂಗಳೂರನ್ನು, ಇದರ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಡಿಸಿಎಂ ಕೊಡುಗೆ ನೀಡುವುದರಲ್ಲಿ ಅನುಮಾನವಿಲ್ಲ ಎಂದು ಪುನಃರುಚ್ಚರಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News