ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯದಾದ್ಯಂತ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರವಿದ್ದಿದ್ದರೇ ಕಲ್ಲು ಹೊಡೆಯಬಹುದಿತ್ತು ಎಂಬ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗರಂ ಆಗಿದ್ದಾರೆ.  


COMMERCIAL BREAK
SCROLL TO CONTINUE READING

ತೇಜಸ್ವಿ ಸೂರ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಅರವಿನಂಗಡಿ ನಡುವಿನ ಮೊಬೈಲ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ತೇಜಸ್ವಿ ಸೂರ್ಯ ನಡೆಗೆ ಕೇಸರಿ ಹೈಕಮಾಂಡ್ ಕೆರಳಿ ಕೆಂಡವಾಗಿದೆ. ಸಂಸದನ ಹೇಳಿಕೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.  


ಇದನ್ನೂ ಓದಿ: ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಯುವಕನ ಬರ್ಬರ ಹತ್ಯೆ


ಕಲ್ಲು ಹೊಡೆಯುವ ಮಾತನಾಡಿರುವ ತೇಜಸ್ವಿ ಸೂರ್ಯಗೆ ಜೆಪಿ ನಡ್ಡಾ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ತಾವು ಸಂಸದರಾಗಿದ್ದೀರಿ, ವಿವೇಚನೆಯಿಂದ ಹೇಳಿಕೆ ನೀಡಬೇಕು. ಬೀದಿಯಲ್ಲಿ ನಿಂತು ಬಸ್‍ಗೆ ಕಲ್ಲೋಡೆಯುವ ಹೇಳಿಕೆ ತಮಗೆ ತರವಲ್ಲ. ಹತ್ಯೆಯಂತಹ ಸೂಕ್ಷ್ಮ ಪ್ರಕರಣದಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ. ಹೀಗಾಗಿ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಗಮನ ಹರಿಸುವಂತೆ’ ನಡ್ಡಾ ಸೂಚಿಸಿದ್ದಾರೆ.


‘ಪ್ರವೀಣ್ ಹತ್ಯೆ ಖಂಡಿಸಿ ನೀವೇ ನೇಮಕ ಮಾಡಿದ್ದ 700ಕ್ಕೂ ಹೆಚ್ಚು ಯುವ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ತಮಗೆ ಅರಿವಿಲ್ಲವೇ? ಹಗುರ ಹೇಳಿಕೆ ಬಿಟ್ಟು, ಯುವ ಪದಾಧಿಕಾರಿಗಳು ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಿ. ಒಂದು ವಾರದೊಳಗೆ ಯುವ ಪದಾಧಿಕಾರಿಗಳ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಬೇಕೆಂದು’ ನಡ್ಡಾ ತೇಜಸ್ವಿ ಸೂರ್ಯಗೆ ಸೂಚಿಸಿದ್ದಾರೆ.


ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳಿಗೆ ಆ.11ರವರೆಗೆ ನ್ಯಾಯಾಂಗ ಬಂಧನ


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರ ಸೂಚನೆಗೆ ತೇಜಸ್ವಿ ಸೂರ್ಯ ತಣ್ಣಗಾಗಿದ್ದಾರೆ. ಇದೀಗ ಪದಾಧಿಕಾರಿಗಳ ರಾಜೀನಾಮೆ ಬಿಕ್ಕಟ್ಟು ಸಂಸದ ತೇಜಸ್ವಿಗೆ ಇಕ್ಕಟ್ಟು ಸೃಷ್ಟಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.