Bird Flu : ಹಕ್ಕಿ ಜ್ವರ ತಡೆಯಲು ರಾಜ್ಯದಲ್ಲಿ ರೆಡಿಯಾಗಿದೆ ‘ಏಳು ಸುತ್ತಿನ ಕೋಟೆ’..!
ಕೇರಳದಲ್ಲಿ ತಾಂಡವಕ್ಕೆ ಸಜ್ಜಾಗಿರುವ ಹಕ್ಕಿ ಜ್ವರ ರಾಜ್ಯದಲ್ಲೂ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕುಕ್ಕುಟೋದ್ಯಮ ಸಂಕಷ್ಟದಲ್ಲಿದೆ.
ಬೆಂಗಳೂರು : ಕರೋನಾಗೆ ವ್ಯಾಕ್ಸಿನ್ (Coron vaccine) ಮಂಜೂರಾದ ಬೆನ್ನಲ್ಲೆ ಮತ್ತೊಂದು ಆತಂಕ ಆವರಿಸಿಕೊಂಡಿದೆ. ಕೇರಳದಲ್ಲಿ ತಾಂಡವಕ್ಕೆ ಸಜ್ಜಾಗಿರುವ ಹಕ್ಕಿ ಜ್ವರ ರಾಜ್ಯದಲ್ಲೂ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಜಿಲ್ಲೆಗಳಲ್ಲಿ ಹೈ ಅಲರ್ಟ್ (High Alert) ಘೋಷಿಸಲಾಗಿದೆ. ಕುಕ್ಕುಟೋದ್ಯಮ ಸಂಕಷ್ಟದಲ್ಲಿದೆ. ಕೋಳಿ ಮಾಂಸ, ಮೊಟ್ಟೆ ಧಾರಣೆ ಕುಸಿಯುತ್ತಿದೆ. ರೆಸ್ಟೊರೆಂಟ್ ಗಳಲ್ಲಿ ಚಿಕನ್ ಐಟಮ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಇದುವರೆಗೆ ರಾಜ್ಯ ಸೇಫ್..!
ಖುಷಿಯ ಸಂಗತಿಯೆಂದರೆ ರಾಜ್ಯದಲ್ಲಿ ಇದುವರೆಗೆ ಒಂದೇ ಒಂದು ಪ್ರಕರಣ ದೃಢ ಪಟ್ಟಿಲ್ಲ. ಆದರೆ, ಸಮಸ್ತ ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಕೇರಳದ (Kerala) ಗಡಿಭಾಗದಲ್ಲಿರುವ ದಕ್ಷಿಣಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.
ಇದನ್ನೂ ಓದಿ : ಮತ್ತೆ ಕದ ತಟ್ಟಿದ Bird Flu, ಕೇಂದ್ರದಿಂದ ಮಹತ್ವದ ನಿರ್ಧಾರ
ಮಂಗಳೂರಿನಲ್ಲಿ 6 ಕಾಗೆಗಳ ಸಾವು..!
ಮಂಗಳೂರಿನ ಮಂಜನಾಡಿ ಗ್ರಾಮದ ಆರಂಗಡಿಯಲ್ಲಿ ಸತ್ತ ಆರು ಕಾಗೆಗಳ ಕಳೇಬರಹ ಸಿಕ್ಕಿದೆ. ಇವನ್ನು ಬೆಂಗಳೂರಿನ (Bengaluru) ಹೆಬ್ಬಾಳದಲ್ಲಿರುವ ಎಸ್ ಆರ್ ಡಿಎಲ್ ಲ್ಯಾಬ್ ಗೆ (SRDL Lab) ರವಾನಿಸಲಾಗಿದೆ. ವರದಿ ಇನ್ನೂ ಬಂದಿಲ್ಲ.
ರೆಡಿಯಾಗಿದೆ ‘ಏಳು ಸುತ್ತಿನ ರಕ್ಷಣಾ ಕೋಟೆ’..!
ಕೋಳಿ ಜ್ವರ (Bird Flu) ಸೋಂಕು ರಾಜ್ಯ ಪ್ರವೇಶಿಸುವುದನ್ನು ತಡೆಯಲು ರಕ್ಷಣಾ ವ್ಯೂಹವನ್ನೆ ರಚಿಸಲಾಗಿದೆ. ಕೇರಳದ ಗಡಿ ಭಾಗಗಲ್ಲಿ ಕೂಡಲೇ ಚೆಕ್ ಪೋಸ್ಟ್ (Check Post) ಗಳನ್ನುಸ್ಥಾಪಿಸಲು ಆದೇಶಿಸಲಾಗಿದ. ಕುಕ್ಕಟ ಉತ್ಪನ್ನಗಳ ಸಾಗಾಣಿಕೆಗೆ ನಿರ್ಬಂಧ ವಿಧಿಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಬರುವ ಕುಕ್ಕುಟ ಸಾಗಾಟ ವಾಹನಗಳ ಸಾನಿಟೈಸೇಶನ್ ಗೆ (Sanitisation) ಆದೇಶ ನೀಡಲಾಗಿದೆ. ಅಲ್ಲದೆ ಕೈಗೊಂಡ ಕ್ರಮಗಳ ಬಗ್ಗೆ ದಿನ ನಿತ್ಯವೂ ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಉಪನಿರ್ದೇಶಕರಿಗೆ ರವಾನಿಸಲು ಆದೇಶಿಸಲಾಗಿದೆ. ಕೋಳಿ ಜ್ವರ ಸರ್ವೇಕ್ಷಣಾ ಕಾರ್ಯವನ್ನು ಪರಿಣಾಮವಾಗಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಕೋಳಿ ಸಂರಕ್ಷಣಾ ಸಮಿತಿಗಳನ್ನು ರಚಿಸಲು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ಹಕ್ಕಿ ಜ್ವರದಿಂದ ಸುಮಾರು 25 ಸಾವಿರ ಪಕ್ಷಿಗಳ ಸಾವು, ಹೈಅಲರ್ಟ್ ಜಾರಿ
ಭಾರಿ ನಷ್ಟದತ್ತ ಕುಕ್ಕುಟೋದ್ಯಮ :
ಹಕ್ಕಿ ಜ್ವರ ರಾಜ್ಯದಲ್ಲಿ ಕುಕ್ಕುಟೋದ್ಯಮಕ್ಕೆ ಬರ ಸಿಡಿಲಂತೆ ಬಂದೆರಗಿದೆ. ಕರೋನಾ (Coronavirus) ಮಹಾಮಾರಿಯಿಂದ ಚೇತರಿಸುತ್ತಿರುವ ಹೊತ್ತಿನಲ್ಲೇ ಹಕ್ಕಿ ಜ್ವರ ಮಾರಕ ಹೊಡೆತ ನೀಡುತ್ತಿದೆ. ಕೋಳಿ ಮಾಂಸ, ಮೊಟ್ಟೆ, ಕುಕ್ಕುಟೊದ್ಯಮದ ಇತರ ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿದೆ. ತೀವ್ರ ಬೆಲೆ ಕುಸಿತದ ಆತಂಕ ಎದುರಾಗಿದೆ. ಹಲವು ರಾಜ್ಯಗಳು ಕೋಳಿ ಸಾಗಾಟ ನಿಷೇಧಿಸಿರುವುದರಿಂದ, ಹೊರ ರಾಜ್ಯಗಳಿಗೆ ಕುಕ್ಕುಟೋತ್ಪನ್ನಗಳನ್ನು ರವಾನಿಸುವುದು ಅಸಾಧ್ಯವಾಗಿದೆ. ನಾನ್ ವೆಜ್ ಹೊಟೇಲ್ ಗಳಲ್ಲೂ ಚಿಕನ್ ಗೆ ಬೇಡಿಕೆ ಕಡಿಮೆಯಾಗಿದೆ. ಹೊಟೇಲ್ ಗಳೂ ಚಿಕನ್ ಖರೀದಿಯನ್ನು ಕಡಿಮೆ ಮಾಡಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.