ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಮಾಡುವ ಹಿನ್ನಲೆಯಲ್ಲಿ ಎರಡನೇ ದಿನವೂ KSRTC ಹಾಗೂ BMTC ನೌಕರರ ಧರಣಿ ಮುಂದುವರೆದಿದ್ದು ನೌಕರರು ಇಂದು ಸಹ ಬಸ್ ಗಳನ್ನು ಡಿಪೋಗಳಿಂದ ತೆಗೆಯದಿರಲು ನಿರ್ಧರಿಸಿದ್ದಾರೆ.


COMMERCIAL BREAK
SCROLL TO CONTINUE READING

ನೌಕರರ ಬಿಗಿಪಟ್ಟಿನಿಂದಾಗಿ ನಗರ ಸಂಚರಿಸಬೇಕಿದ್ದ ಬಸ್ ಗಳು ಡಿಪೋದಲ್ಲೇ ನಿಂತಿವೆ. ನಗರದ ಬಸ್ ನಿಲ್ದಾಣಗಳು ಕೂಡ ಖಾಲಿಯಾಗಿವೆ. ಪರಿಣಾಮವಾಗಿ ಬೆಳ್ಳಂಬೆಳಗ್ಗೆ ಪ್ರಯಾಣಿಕರಿಲ್ಲದೆ ಮೆಜೆಸ್ಟಿಕ್ ಕೂಡ ಬಣಗುಡುತ್ತಿದೆ. ಕೆಎಸ್‌ಆರ್ ಟಿಸಿ (KSRTC) ನಿಲ್ದಾಣದ ಕತೆಯೂ ಇದೇ ಆಗಿದೆ.


ಪ್ರಯಾಣಿಕರ ಪರದಾಟ :
ಇನ್ನೊಂದೆಡೆ ಕೆಎಸ್‌ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಅದರಲ್ಲೂ ದೂರದ ಊರಿಗೆ ತೆರಳಬೇಕಿದ್ದವರು ಪರದಾಡುವಂತಾಗಿದೆ. ಬಸ್ ಬರುತ್ತಿದೆ ಎಂದು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಬೇರೆ ಊರುಗಳಿಂದ ಆಗಮಿಸಿರುವ ಪ್ರಯಾಣಿಕರು ತಮ್ಮ ಮನೆಗೆ ತೆರಳಲು BMTC ಬಸ್ ಇಲ್ಲದೆ ಪರಿತಪಿಸುತ್ತಿದ್ದಾರೆ.


ಪದವಿ ವಿದ್ಯಾರ್ಥಿಗಳಿಗೆ ‘ಭರ್ಜರಿ ಸಿಹಿ ಸುದ್ದಿ’ ನೀಡಿದ KSRTC..!


ಖಾಸಗಿ ಬಸ್, ಟ್ಯಾಕ್ಸಿ, ಆಟೋಗಳಿಗೆ ಬೇಡಿಕೆ :
KSRTC ಹಾಗೂ BMTC ನೌಕರರ ಧರಣಿ ಮುಂದುವರೆದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಟ್ಯಾಕ್ಸಿ ಮತ್ತು ಆಟೋಗಳಿಗೆ ಭಾರೀ ಬೇಡಿಕೆ ಬಂದಿದೆ.‌ ಇವು KSRTC ಹಾಗೂ BMTC ನಿಲ್ದಾಣದೊಳಗೆ ಬಂದು ಪ್ರಯಾಣಿಕರನ್ನು ಪಿಕ್ ಮಾಡುತ್ತಿವೆ.‌ ಪೊಲೀಸರು ವಾಪಾಸ್ ಕಳುಹಿಸುವ ನಾಟಕ ಆಡುತ್ತಿದ್ದಾರೆ.


ಹೆಚ್ಚುವರಿ ಮೆಟ್ರೋ‌ ಸೇವೆ :
ರಾಜ್ಯ ಸಾರಿಗೆ ನೌಕರರಿಂದ ಮುಷ್ಕರದ ಹಿನ್ನಲೆಯಲ್ಲಿ ಸಾರ್ವಜನಿಕರ ಅನುಕೂಲ ಮಾಡಿಕೊಡಲು ಹೆಚ್ಚುವರಿ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ನಿರ್ಧಾರ ಮಾಡಿದೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಓಡಾಟ ಆರಂಭಿಸಿವೆ.


ಕೆ.ಎಸ್.ಆರ್.ಟಿ.ಸಿ ಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ


ಬಸ್ ಸಂಚಾರ ಸ್ತಬ್ಧವಾದ ಹಿನ್ನಲೆಯಲ್ಲಿ ಜನ‌ ಮೆಟ್ರೋದ ಬಳಿ ಬಂದಿದ್ದರಿಂದ ಹೆಚ್ಚುವರಿಯಾಗಿ 50 ರೈಲುಗಳನ್ನ ಓಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.