ಪದವಿ ವಿದ್ಯಾರ್ಥಿಗಳಿಗೆ ‘ಭರ್ಜರಿ ಸಿಹಿ ಸುದ್ದಿ’ ನೀಡಿದ KSRTC..!

ಬಸ್‍ಗಳಲ್ಲಿ ಕಳೆದ ವರ್ಷದ ಪಾಸ್‍ನ್ನು ತೋರಿಸಿ ಪ್ರಯಾಣಿಸಲು ಅವಕಾಶ ನೀಡಿದ KSRTC

Last Updated : Nov 19, 2020, 03:13 PM IST
  • ಬಸ್‍ಗಳಲ್ಲಿ ಕಳೆದ ವರ್ಷದ ಪಾಸ್‍ನ್ನು ತೋರಿಸಿ ಪ್ರಯಾಣಿಸಲು ಅವಕಾಶ ನೀಡಿದ KSRTC
  • 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿರುವ ಬಸ್‍ಪಾಸ್‍ನ್ನು ಡಿಸೆಂಬರ್ 10ರವರೆಗೂ ಮಾನ್ಯ
  • ಪದವಿ, ಸ್ನಾತಕೋತ್ತರ, ಡಿಪ್ಲೊಮೊ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಇದರ ಪ್ರಯೋಜನ
ಪದವಿ ವಿದ್ಯಾರ್ಥಿಗಳಿಗೆ ‘ಭರ್ಜರಿ ಸಿಹಿ ಸುದ್ದಿ’ ನೀಡಿದ KSRTC..! title=

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಬಸ್‍ಗಳಲ್ಲಿ ಕಳೆದ ವರ್ಷದ ಪಾಸ್‍ನ್ನು ತೋರಿಸಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಕೆಎಸ್‍ಆರ್ ಟಿಸಿಯು 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿರುವ ಬಸ್‍ಪಾಸ್‍ನ್ನು ಡಿಸೆಂಬರ್ 10ರವರೆಗೂ ಮಾನ್ಯ ಮಾಡಲಿದೆ.

ಪದವಿ, ಸ್ನಾತಕೋತ್ತರ, ಡಿಪ್ಲೊಮೊ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಕೆಎಸ್‍ಆರ್ ಟಿಸಿ(KSRTC)ಯು ಪ್ರಕಟಣೆಯಲ್ಲಿ ತಿಳಿಸಿದೆ.

'ಹದಿನೇಳು ಜನರ ಬಗ್ಗೆ ಸಿಎಂ ಬಿಎಸ್‌ವೈಗೆ ಬಹಳ ಗೌರವವಿದೆ'

ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ, ರಸೀದಿ ಹಾಗೂ ಕಳೆದ ಸಾಲಿನ ಬಸ್‍ಪಾಸ್ ತೋರಿಸಿ ಸಂಬಂಧಪಟ್ಟ ಮಾರ್ಗದಲ್ಲಿ ಕೆಎಸ್‍ಆರ್ ಟಿಸಿ, ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‍ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ.

'KPSC' ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಮುಖ್ಯ ಪರೀಕ್ಷೆ ಮುಂದೂಡಿದ ರಾಜ್ಯಸರ್ಕಾರ

Trending News