Anand Singh : ಆನಂದ್ ಸಿಂಗ್ ಉಸ್ತುವಾರಿ ಬದಲಾವಣೆ : ಅಭಿಮಾನಿಗಳಿಂದ ಭುಗಿಲೆದ್ದ ಆಕ್ರೋಶ!
ಪ್ರತಿಭಟನಾ ಸ್ಥಳಕ್ಕೆ ಸಿನಿಮೀಯ ರೀತಿಯಲ್ಲಿ ಸಚಿವ ಆನಂದ್ ಸಿಂಗ್ ಆಗಮಿಸಿ ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು.
ವಿಜಯನಗರ : ಸಚಿವ ಆನಂದ್ ಸಿಂಗ್ ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೊಸಪೇಟೆಯಲ್ಲಿ ಅಭಿಮಾನಿಗಳಿಂದ ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಸಿನಿಮೀಯ ರೀತಿಯಲ್ಲಿ ಸಚಿವ ಆನಂದ್ ಸಿಂಗ್(Anand Singh) ಆಗಮಿಸಿ ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಅಭಿಮಾನಿಗಳಿಗೆ, ಫೈರ್ ಇಂಜಿನ್ ತರಿಸಿ ಬೆಂಕಿ ನಂದಿಸಿ ಇವೆಲ್ಲಾ ತಾಂತ್ರಿಕ ಸಮಸ್ಯೆಗಳು ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ. ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾನಿಗಳು ಸಂತೈಸಿದರು.
ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ: ಸಚಿವ ಈಶ್ವರಪ್ಪ
ನಂತರ ತಹಸೀಲ್ದಾರ್ ಕಚೇರಿವರೆಗೆ ಸಚಿವರ ಹಿಂದೆಯೇ ಬಂದ ಅಭಿಮಾನಿಗಳು, ನಾನು ಕೆಲವೊಂದನ್ನು ತಮ್ಮ ಬಳಿ ಹೇಳಲು ಆಗಲ್ಲ ಎಂದಾಗ ಉದ್ದೇಶವ ಪೂರ್ವಕವಾಗಿಯೇ ನಿಮ್ಮ ಬದಲಾವಣೆ ಆಗಿದೆ ಎಂದ ಅಭಿಮಾನಿಗಳಿಗೆ ತಿಳಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆನಂದ್ ಸಿಂಗ್, ನಾನು ಬಗರ್ ಹುಕುಂ ಸಭೆಯಲ್ಲಿದ್ದೆ, ಜಿಲ್ಲಾ ಉಸ್ತುವಾರಿ(District incharge minister) ಬದಲಾವಣೆ ಉದ್ದೇಶಪೂರ್ವಕವಾಗಿ ಆಗಿದೆ ಅಂತ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಅವರು ಅಮಾಯಕ ಅಭಿಮಾನಿಗಳು, ಅವರ ಅಭಿಮಾನಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಉಸ್ತುವಾರಿ ಬದಲಾವಣೆ ವಿಚಾರ, ನನ್ನ ಗಮನಕ್ಕೆ ಇದೆ. ಸಿಎಂ ಬಸವರಾಜ್ ಬೊಮ್ಮಾಯಿಯವರು ನಮ್ಮ ಬಳಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ನಮ್ಮ ಕ್ಯಾಪ್ಟನ್ ಹೇಳಿದ ಹಾಗೆ ನಾವು ಕೇಳಬೇಕಾಗುತ್ತದೆ. ಬೇರೆಯವರ ಥರ ಏಕಾ- ಏಕಿ ಬದಲಾವಣೆ ಮಾಡಿಲ್ಲ. ತಾಂತ್ರಿಕ ಸಮಸ್ಯೆಗಳು ಇರ್ತವೆ ನಮ್ಮ ಕ್ಯಾಪ್ಟನ್ ಹೇಳೋದನ್ನು ಪಾಲನೆ ಮಾಡೋದು ನಮ್ಮ ಧರ್ಮ. ನಾನು ನಮ್ಮ ಬೆಂಬಲಿಗರಿಗೆ ಮನವಿ ಮಾಡಿಕೊಂಡಿದ್ದೇನೆ. ಈ ಬಗೆಯಾಗಿ ಪ್ರತಿಭಟನೆ ಮಾಡೋದು ಸರಿ ಅಲ್ಲಾ ಅಂತ, ನಾನು ಅಭಿಮಾನಿಗಳಿಗೆ ಹೇಳಿದ್ದೇನೆ.
ಇದನ್ನೂ ಓದಿ : Basavaraj Bommai : 30 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾರಿಗೆ ಯಾವ ಜಿಲ್ಲೆ?
ವಿಜಯನಗರ ಜಿಲ್ಲೆ(Vijayanagara Dist)ಯ ಹೊಸಪೇಟೆ, ಇಂದು ಸರ್ಕಾರ ಆನಂದ್ ಸಿಂಗ್ ಅವರ ಉಸ್ತುವಾರಿಯನ್ನು ಕೊಪ್ಪಳಕ್ಕೆ ವರ್ಗಾಯಿಸಿದೆ. ಇದರಿಂದ ಕುಪಿತಗೊಂಡ ಆನಂದ್ ಸಿಂಗ್ ಅಭಿಮಾನಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.