ದಾವಣಗೆರೆ: ನಮಗೂ ಸಚಿವ ಸ್ಥಾನ ಬೇಕು, ನಮ್ಮ ಅನುಭವವನ್ನ ಗಮನಿಸಿ ಕೊಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ(Renukacharya) ಆಗ್ರಹಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಸಚಿವ ಸ್ಥಾನ ನೀಡುವ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಒತ್ತಾಯ ಮಾಡಿದ್ದೇವೆ. ಆದರೆ, ಪಕ್ಷದ ಘನತೆ ದೃಷ್ಟಿಯಿಂದ ಬಹಿರಂಗವಾಗಿ ಹೇಳಿಕೆಗಳನ್ನ ನೀಡಿಲ್ಲ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ ಎಂದು ಪ್ರಶ್ನಿಸಿದರು.
ಕೆಲ ಸಚಿವರಂತು ಶಾಸಕರ ಫೋನ್ ರಿಸೀವ್ ಮಾಡಲ್ಲ. ಶಾಸಕರು ಪತ್ರ ಕೊಟ್ಟರೇ ಸಚಿವರು ಉತ್ತರ ಕೊಡಬೇಕು. ಆದ್ರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇದು ನಮಗೆ ಬೇಜಾರಾಗುತ್ತೆ ಅವಮಾನ ಆಗುತ್ತೆ. ಇಂತಹ ಸಚಿವರು ಬೇಕಾ? ಎಂದು ಆಕ್ರೋಶ ಹೊರಹಾಕಿದರು.
ಈಗ ನಾಲ್ಕು ಸಚಿವ ಸ್ಥಾನ ಖಾಲಿ ಇವೆ. ಸತತ ಸಚಿವರಾದವರು ತಾವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾರ್ಚ್ ನಲ್ಲಿ ಸಂಪುಟ ವಿಸ್ತರಣೆ (Cabinet Expansion) ಬೇಡ. ಈಗಲೇ ಆಗಲಿ. ಈ ವಿಚಾರವಾಗಿ ನಾನು ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದೇವೆ. ಯತ್ನಾಳ್ ಮತ್ತು ನಾನು ಪರಸ್ಪರ ವಾಗ್ದಾಳಿ ಮಾಡಿದ್ದೇವೆ. ಆದ್ರೆ ಮತ್ತೆ ಬಿಜೆಪಿ ಸರ್ಕಾರ ಬರಬೇಕು. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಕಾರಣಕ್ಕೆ ಒಂದಾಗಿದ್ದೇವೆ ಎಂದು ತಿಳಿಸಿದರು.
ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ. ಕೊಟ್ಟು ನೋಡಲಿ ಕೆಲಸ ಮಾಡಿ ತೋರಿಸುವ ತಾಕತ್ತು ಇದೆ. ಸಚಿವ ಸ್ಥಾನ ನಮಗೂ ಕೊಡಲಿ. ಈ ಎಲ್ಲ ವಿಚಾರವನ್ನ ಯತ್ನಾಳ್ (Basanagaouda Patil Yatnal) ಜೊತೆ ಮಾತಾಡಿರುವೆ. ಇದು ಚುನಾವಣೆ ವರ್ಷ ವಿಳಂಬ ಮಾಡಿ ಸಚಿವ ಸ್ಥಾನ ಕೊಟ್ಟರೆ ಉಪಯೋಗವಿಲ್ಲ. ಹೊಸ ಮುಖಗಳಿಗೆ ಅವಕಾಶ ನೀಡಿ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಅನುಕೂಲ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್ ಅಂಜುತ್ತಿದ್ದಾರೆ: ಬಿಜೆಪಿ
ನನ್ನ ಕ್ಷೇತ್ರ ಅಭಿವೃದ್ಧಿಮಾಡಿದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ನಾನು ಕೇಳುತ್ತಿಲ್ಲ ಕ್ಷೇತ್ರದ ಜನರು ಕೇಳುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.