ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರ (BJP State President) ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ. ಬಿಜೆಪಿ ಅಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಚಿವ ಈಶ್ವರಪ್ಪ (Eshwarappa) ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಚರ್ಚೆ:
ಸಚಿವ ಸಂಪುಟ ವಿಸ್ತರಣೆ (Cabinet Expansion) ಚರ್ಚೆ ವಿಚಾರವಾಗಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಈಗ ಚರ್ಚೆ ಅಗಬೇಕಿರುವುದು ಸ್ವಾಭಾವಿಕ. ನಾಲ್ಕು ಪೋಸ್ಟ್ ಖಾಲಿ ಇದೆ. ಚುನಾವಣೆಗೆ ಒಂದು ವರ್ಷ ಮೂರು ತಿಂಗಳಿದೆ. ರಾಷ್ಟ್ರೀಯ ನಾಯಕರು ಕೂತು ಚರ್ಚೆ ಮಾಡಿ, ಯಾರಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಚಿಂತನೆ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್ ಅಂಜುತ್ತಿದ್ದಾರೆ: ಬಿಜೆಪಿ
ರಾಜ್ಯದ ಹಿತದೃಷ್ಟಿ, ಜಿಲ್ಲೆ, ಎಲ್ಲಾ ಸಮಾಜವನ್ನು ನೋಡಿ, ಪರಿಗಣಿಸಿ, ನಾಲ್ಕು ಸ್ಥಾನ ತುಂಬುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಒಂದು ಹುದ್ದೆ ಇದ್ದಾಗ ರಾಜಕೀಯ ಆಕಾಂಕ್ಷಿಗಳು ಸಹ ಇರೋದು ಸ್ವಾಭಾವಿಕ. ನಾನು ಮಂತ್ರಿ ಆಗಬೇಕು ಅಂತಾ ಎಂಎಲ್ಎ, ಎಂಎಲ್ ಸಿ ಯೋಚನೆ ಮಾಡುವುದು ತಪ್ಪಲ್ಲಾ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ:
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಬಿಲ್ ಕುಲ್ ಇಲ್ಲ. ಬಿಜೆಪಿ ಅಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮಂತ್ರಿಮಂಡಲದಲ್ಲಿ ಖಾಲಿ ಇದೆ ಅದಕ್ಕೆ ಚರ್ಚೆ ಮಾಡ್ತಾರೆ. ರಾಜ್ಯಾಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಹಾಗಾಗಿ ಬದಲಾವಣೆಯ ಪ್ರಶ್ನೇಯೇ ಉದ್ಭವವಾಗಲ್ಲ. ಮುಂದಿನ ಚುನಾವಣೆ ದೃಷ್ಟಿಯಿಂದ ಕಟೀಲ ಅವರು ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ಬೂತ್ ಹಾಗೂ ಪೇಜ್ ಮಟ್ಟದ ಕಮಿಟಿಯನ್ನು ಸಹ ಮಾಡಿದ್ದಾರೆ. ಎಲ್ಲಾ ಚುನಾವಣೆಯಲ್ಲೂ ಅವರು ಅಧ್ಯಕ್ಷರಾದ ಮೇಲೆ ಗೆದ್ದಿದ್ದೇವೆ. ಉಪಚುನಾವಣೆ, ಗ್ರಾ.ಪಂ ಚುನಾವಣೆ, ಪಾಲಿಕೆ ಚುನಾವಣೆ ಹಾಗೂ ಎಂಎಲ್ ಸಿ ಚುನಾವಣೆ, ಹೀಗೆ ಹಲವು ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು, ಬಹುಮತವನ್ನು ಬಿಜೆಪಿ ಪಡೆದಿದೆ. ನಳೀನ್ ಕುಮಾರ್ ಸಂಘಟನಾ ಚತುರ. ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಬದಲಾವಣೆಯ ಪ್ರಶ್ನೆ ಇಲ್ಲ ಎಂದರು.
ಪಕ್ಷ ಏನು ಜವಾಬ್ದಾರಿ ಕೊಟ್ಟರೂ ಸ್ವೀಕರಿಸುವೆ:
ಪಕ್ಷ ಏನು ಜವಾಬ್ದಾರಿ ಕೊಟ್ಟರೂ ಹಿಂದೆಯಿಂದಲೂ ಮಾಡಿಕೊಂಡು ಬಂದಿದ್ದೇನೆ. ಮಂತ್ರಿಯಾಗು ಅಂದಾಗ ಮಂತ್ರಿ ಆಗಿದ್ದೀನಿ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡು ಅಂದಾಗ ಕೊಟ್ಟು, ರಾಜ್ಯಾಧ್ಯಕ್ಷ ಸಹ ಆಗಿದ್ದೇನೆ. ಈಗಲೂ ಸಹ ಕೇಂದ್ರ ಹಾಗೂ ರಾಜ್ಯದ ನಾಯಕರು, ಪರಿವಾರದವರು ಹೇಳಿದ್ದಕ್ಕೆ ನಾನು ತಯಾರು ಎಂದು ತಿಳಿಸಿದರು.
ಇದನ್ನೂ ಓದಿ: Be Careful.! ಕ್ರೆಡಿಟ್ ಕಾರ್ಡ್ ಪ್ರಾಬ್ಲಂ ಅನ್ನೋರೇ ಈ ನಯವಂಚಕರ ಟಾರ್ಗೆಟ್!
ಪಕ್ಷದ ಸಂಘಟನೆಗೆ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಿಂತಲೂ ಪಕ್ಷದ ಜವಾಬ್ದಾರಿ ನನಗೆ ತುಂಬಾ ಖುಷಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.