ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್‌ ಪೂಂಜಾ ನನಗೆ ಮುಸ್ಲೀಂರ ಮತಗಳು ಬೇಡ ಎಂದು ಹೇಳಿದ್ದಾರೆ. ಈ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Char Dham Yatra: ಚಾರ್‌ಧಾಮ ಯಾತ್ರೆಗೆ ತೆರಳಿದ್ದ 39 ಮಂದಿ ಸಾವು


"ಮುಂದಿನ ಚುನಾವಣೆಯಲ್ಲಿ ಸಂಘದ ಹಿರಿಯರು ಸೂಚಿಸಿದರೆ ಮಾತ್ರ  ಸ್ಪರ್ಧಿಸುತ್ತೇನೆ. ಒಂದು ವೇಳೆ ಸ್ಪರ್ಧಿಸಿದರೆ ಆಗ ನಾನು ತಾಕತ್ತಿನಿಂದ ಹೇಳುತ್ತೇನೆ. ನನಗೆ ಮುಸ್ಲೀಂರ ಓಟುಗಳು ಬೇಡ  ಹಿಂದೂಗಳ ಮತಗಳಷ್ಟೇ ಸಾಕು" ಎಂದು ತುಳು ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. 


"ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ಹಾಗೂ ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣವಾಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ, ನನಗೆ ಮುಸ್ಲೀಂರ ಮತಗಳು ಬೇಡ" ಎಂದು ಹೇಳಿಕೆ ನೀಡಿದ್ದಾರೆ. 


ಸದ್ಯ ಶಾಸಕರ ಹೇಳಿಕೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ ಎಂಬ ವಿವಾದಾತ್ಮಕ ಹೇಳಿಕೆಯನ್ನು ಹರೀಶ್‌ ಪೂಂಜಾ ನೀಡಿದ್ದರು. ಈ ಭಾಷಣದ ತುಣುಕು ಎಲ್ಲೆಡೆ ವೈರಲ್‌ ಆಗಿತ್ತು. 


ಇದನ್ನು ಓದಿ: ಮಲೇಶಿಯಾದಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡತಿ ʼಸಾನ್ವಿ ದೇಸಾಯಿʼ


"ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜವನ್ನು ಹಾರಿಸಿಯೇ ಸಿದ್ಧ. ಇದನ್ನು ಯಾವ ಪಕ್ಷದಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದು ಹಿಂದೂ ಸಮಾಜ ಮತ್ತು ಭಾರತೀಯ ಜನತಾ ಪಾರ್ಟಿಯ ಸಂಕಲ್ಪ" ಎಂದು ಹೇಳಿದ್ದರು. ಇದೀಗ ಮತ್ತೆ ಇಂತಹ ಹೇಳಿಕೆಯನ್ನು ನೀಡಿ ಶಾಸಕರು ಸುದ್ದಿಯಾಗಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.