ಹಾಸನ: ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮೇಲ್ಪಂಕ್ತಿ ನಾಯಕರಿಗೆ ಬಿಟ್ಟ ವಿಚಾರವಾಗಿದೆ ಎಂದು ಶಾಸಕ ಪ್ರೀತಮ್ ಗೌಡ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಸನಕ್ಕೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಆಗಮಿಸುತ್ತಿದು, ನಾಳೆ ನಡೆಯುವ ಯುವಸ್ಪಂದನ ಹಾಗೂ ಜನಸೇವಕ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದೇನೆ ಎಂದರು.


H Nagesh : 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ'


ಸಿಎಂ ಆಪ್ತರಿಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಮುಖ್ಯಮಂತ್ರಿಗಳ ಆಪ್ತರೇ. ಎಲ್ಲರಿಗೂ ಅವರ ನಿರ್ಧಾರ ತಿಳಿದಿರುತ್ತದೆ ಎಂದ ಅವರು, ಮೊದಲ ಬಾರಿ ಶಾಸಕರಾಗಿದ್ದರು, ಸಚಿವಸ್ಥಾನಕ್ಕೆ ಆಕಾಂಕ್ಷೆ ಎಂಬುದು ಏನು ಇಲ್ಲ. ಸಚಿವಸ್ಥಾನಕ್ಕೆ ಅರ್ಹತೆ ಯೋಗ್ಯತೆಯನ್ನು ಪಕ್ಷ ತೀರ್ಮಾನಿಸುತ್ತದೆ . ಈ ತೀರ್ಮಾನಕ್ಕೆ ಎಲ್ಲಾ ಶಾಸಕರು ಬದ್ಧರಾಗಿರುತ್ತಾರೆ ಎಂದು ತಿಳಿಸಿದರು.


Cabinet Expansion : ಯಡಿಯೂರಪ್ಪ ಮಾತು ತಪ್ಪಲ್ಲ – ಮುನಿರತ್ನ; ಲಾಬಿ ಮಾಡಲ್ಲ – ಶಾಸಕ ತಿಪ್ಪಾರೆಡ್ಡಿ


ಯಾರಿಗೆ ಮಂತ್ರಿಸ್ಥಾನ ಕೊಡಬೇಕು ಎಂಬುದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು ಹಾಗೂ ಹೈಕಮಾಂಡ್‍ಗೆ ಬಿಟ್ಟ ವಿಚಾರವಾಗಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು . ಪ್ರೀತಮ್‍ಗೌಡ ಅವರಿಗೆ ಸಚಿವ ಸ್ಥಾನ ಸಿಗಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ಅದು ನಮ್ಮ ಮಟ್ಟಕ್ಕಿಂತ ಮೇಲೆ ಬರುವ ವಿಚಾರವಾಗಿದೆ. ಹೀಗಾಗಿ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಜ.13 ಅಥವಾ 18 ರಂದು ಸಂಪುಟ ವಿಸ್ತರಣೆ ಎಂಬುದು ಮಾಧ್ಯಮಗಳ ಮೂಲಕ ತಿಳಿದಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.


Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ ಬಹುತೇಕ ಖಚಿತ, ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ