Cabinet Expansion : ಯಡಿಯೂರಪ್ಪ ಮಾತು ತಪ್ಪಲ್ಲ – ಮುನಿರತ್ನ; ಲಾಬಿ ಮಾಡಲ್ಲ – ಶಾಸಕ ತಿಪ್ಪಾರೆಡ್ಡಿ

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಸಂಪುಟ ಸೇರ್ಪಡೆ ಲಾಬಿ ಶುರುವಾಗಿದೆ.

Written by - Zee Kannada News Desk | Last Updated : Jan 11, 2021, 11:15 AM IST
  • ಸಂಪುಟ ವಿಸ್ತರಣೆ ವಿಚಾರ ಗರಿಗೆದರುತ್ತಿದ್ದಂತೆ ಯಡಿಯೂರಪ್ಪ ಮೈಸೂರಿಗೆ ತೆರಳಿದ್ದಾರೆ
  • ಬುಧವಾರ ಮಧ್ಯಾಹ್ನದ ವೇಳೆಗೆ ಅಮವಾಸ್ಯೆ ಮುಗಿದು ಹೋಗುತ್ತೆ – ಯಡಿಯೂರಪ್ಪ
  • ಯಡಿಯೂರಪ್ಪ ಮಾತು ತಪ್ಪಲ್ಲ, ನನಗೆ ಒಳ್ಳೆಯದು ಮಾಡ್ತಾರೆ – ಮುನಿರತ್ನ
Cabinet Expansion : ಯಡಿಯೂರಪ್ಪ ಮಾತು ತಪ್ಪಲ್ಲ – ಮುನಿರತ್ನ; ಲಾಬಿ ಮಾಡಲ್ಲ – ಶಾಸಕ ತಿಪ್ಪಾರೆಡ್ಡಿ title=
ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಸಂಪುಟ ಸೇರ್ಪಡೆ (file photo)ಲಾಬಿ ಶುರುವಾಗಿದೆ.(

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಗೆ (Cabinet Expansion) ಮುಹೂರ್ತ ಫಿಕ್ಸ್ ಆಗಿದೆ. 7 ಶಾಸಕರ ಸೇರ್ಪಡೆಗೆ ವರಿಷ್ಠರು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ (B S  Yadiyurappa) ಹೇಳಿದ್ದಾರೆ. ಈ ನಡುವೆಯೇ ಸಂಪುಟ ಸೇರ್ಪಡೆ ಲಾಬಿ ಸಕ್ರಿಯ ಗೊಂಡಿದೆ. ಪದಗ್ರಹಣ ಸಮಾರಂಭಕ್ಕೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಜ್ಯ  ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕರೆಯಿಸುತ್ತೇವೆ ಎಂದು ಹೇಳಿದ್ದಾರೆ ಯಡಿಯೂರಪ್ಪ.

ಯಡಿಯೂರಪ್ಪ ಮೈಸೂರಿಗೆ ತೆರಳಿದ್ದು ಯಾಕೆ..?
ಸಂಪುಟ ವಿಸ್ತರಣೆ ವಿಚಾರ ಗರಿಗೆದರುತ್ತಿದ್ದಂತೆ ಯಡಿಯೂರಪ್ಪ (Yadiyurappa) ಮೈಸೂರಿಗೆ ತೆರಳಿದ್ದಾರೆ. ಮೈಸೂರಿನಲ್ಲಿ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೈಸೂರಿನಲ್ಲಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ. 

ಇದನ್ನೂ  ಓದಿ : Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ ಬಹುತೇಕ ಖಚಿತ, ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ

“ಅಮವಾಸ್ಯೆ” ವಿಚಾರದಲ್ಲಿ ಯಡಿಯೂರಪ್ಪ ಹೇಳಿದ್ದೇನು.?
ಜ. 13 ರಂದು ಅಮವಾಸ್ಯೆ ಇದೆಯಲ್ವಾ ಎಂಬ ಪ್ರಶ್ನೆಗೆ  ಉತ್ತರಿಸಿರುವ ಯಡಿಯೂರಪ್ಪ, ಬುಧವಾರ ಮಧ್ಯಾಹ್ನದ ವೇಳೆಗೆ ಅಮವಾಸ್ಯೆ ಮುಗಿದು ಹೋಗುತ್ತೆ. 4 ಗಂಟೆ ಹೊತ್ತಿಗೆ ಒಳ್ಳೆಯ ಮುಹೂರ್ತ  ಎಂದು ಹೇಳಿದ್ದಾರೆ. 

“ಯಡಿಯೂರಪ್ಪ ಮಾತು ತಪ್ಪಲ್ಲ” : 
ಯಡಿಯೂರಪ್ಪ ಸಂಪುಟ ಸೇರುವ ಪ್ರಬಲ ನಿರೀಕ್ಷೆ ಇಟ್ಟುಕೊಂಡಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ(Munirathna) ಅವರು, ಯಡಿಯೂರಪ್ಪ ಮಾತು ತಪ್ಪಲ್ಲ ಎಂದು ಹೇಳಿದ್ದಾರೆ. ನೀವು ಮುನಿರತ್ನಅವರಿಗೆ ಮತ ನೀಡಿ, ಅವರು ಸಚಿವರಾಗ್ತಾರೆ ಎಂದು ಯಡಿಯೂರಪ್ಪ ಉಪಚುನಾವಣೆ ( By-Election)ವೇಳೆ ಹೇಳಿದ್ರು. ಯಡಿಯೂರಪ್ಪ ಕೊಟ್ಟ ಮಾತು ತಪ್ಪುವವರಲ್ಲ ಎಂದು ಹೇಳಿದ್ದಾರೆ. 

ಇದನ್ನೂ  ಓದಿ : ಅತ್ತೂ ಕರೆದು ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆದ ಸಿಎಂ ಯಡಿಯೂರಪ್ಪ

ಈಶ್ವರಪ್ಪ ಹೇಳಿದ್ದೇನು..?
ಈ ನಡುವೆ ಮೈಸೂರಿನ್ಲಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ  ಕೆಎಸ್ ಈಶ್ವರಪ್ಪ( K S Eshwarappa),  ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಸಚಿವರಾದವರು ಸಚಿವರಾಗದವರಿಗೆ ಸಹಕಾರ ನೀಡುತ್ತಾರೆ ಎಂದು ಹೇಳಿದ್ದಾರೆ.

ಮಂತ್ರಿಗಿರಿಗೆ ಲಾಬಿ ಮಾಡಲ್ಲ’:
ಚಿತ್ರದುರ್ಗಕ್ಕೆ ಇದುವರೆಗೆ ಮನ್ನಣೆ ಸಿಕ್ಕಿಲ್ಲ. ಲಾಬಿ ಮಾಡಿದವರಿಗೆ ಮಾತ್ರ ಮಂತ್ರಿಗಿರಿ ಸಿಗುತ್ತೆಅನ್ನೋದು ಸುಳ್ಳು. ನಾನು ಮಂತ್ರಿಗಿರಿಗಾಗಿ ಲಾಬಿ ಮಾಡಲ್ಲ. ನನಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ..

ಪ್ರಭಾಕರ ಕೋರೆ – ಯಡಿಯೂರಪ್ಪ ಮಾತುಕತೆ:
ಈ ನಡುವೆ ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ (Prabhakar Kore) ಅವರು ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ ಲೋಕಸಭೆ  ಅಭ್ಯರ್ಥಿ ವಿಚಾರದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News