H Nagesh : 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ'

'ಸಂಪುಟದಿಂದ ನನ್ನನ್ನ ಕೈಬಿಡುವ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ. ಮಂತ್ರಿ ಸ್ಥಾನ ನೀಡಿದಾಗ ನೀನೂ ಇನ್ನು 3 ವರ್ಷಗಳ ಕಾಲ ಮಂತ್ರಿಯಾಗಿರ್ತೀಯಾ ಅಂತಾ ಸಿಎಂ ಹೇಳಿದ್ರು

Last Updated : Jan 11, 2021, 01:06 PM IST
  • ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಪ್ರಮುಖ ಕಾರಣ. ನನಗೆ ಯಡಿಯೂರಪ್ಪ ಅವ್ರ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆಯಿದ್ದು, ನನ್ನನ್ನ ಸಂಪುಟದಿಂದ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಅಬಕಾರಿ ಸಚಿವ ಹೆಚ್.‌ ನಾಗೇಶ್‌
  • 'ಸಂಪುಟದಿಂದ ನನ್ನನ್ನ ಕೈಬಿಡುವ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ. ಮಂತ್ರಿ ಸ್ಥಾನ ನೀಡಿದಾಗ ನೀನೂ ಇನ್ನು 3 ವರ್ಷಗಳ ಕಾಲ ಮಂತ್ರಿಯಾಗಿರ್ತೀಯಾ ಅಂತಾ ಸಿಎಂ ಹೇಳಿದ್ರು
  • ಸಿಎಂ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎರಡುವರೆ ವರ್ಷಗಳ ಕಾಲ ನಾನೇ ಮಂತ್ರಿಯಾಗಿರ್ತೀನಿ. ಯಡಿಯೂರಪ್ಪರನ್ನೂ ಭೇಟಿಯಾಗಿ ಮಾತನಾಡ್ತೇನೆ ಎಂದರು.
H Nagesh : 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ'

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾನೇ ಪ್ರಮುಖ ಕಾರಣ. ನನಗೆ ಯಡಿಯೂರಪ್ಪ ಅವ್ರ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆಯಿದ್ದು, ನನ್ನನ್ನ ಸಂಪುಟದಿಂದ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದು ಅಬಕಾರಿ ಸಚಿವ ಹೆಚ್.‌ ನಾಗೇಶ್‌ ಹೇಳಿದ್ದಾರೆ.

ಸಚಿವ ಸಂಪುಟದ ಸರ್ಜರಿ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಹೆಚ್.‌ ನಾಗೇಶ್‌(H Nagesh), 'ಸಂಪುಟದಿಂದ ನನ್ನನ್ನ ಕೈಬಿಡುವ ವಿಚಾರ ಕೇಳಿ ನನಗೆ ಶಾಕ್‌ ಆಗಿದೆ. ಮಂತ್ರಿ ಸ್ಥಾನ ನೀಡಿದಾಗ ನೀನೂ ಇನ್ನು 3 ವರ್ಷಗಳ ಕಾಲ ಮಂತ್ರಿಯಾಗಿರ್ತೀಯಾ ಅಂತಾ ಸಿಎಂ ಹೇಳಿದ್ರು. ಹಾಗಾಗಿ ಸಿಎಂ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎರಡುವರೆ ವರ್ಷಗಳ ಕಾಲ ನಾನೇ ಮಂತ್ರಿಯಾಗಿರ್ತೀನಿ. ಯಡಿಯೂರಪ್ಪರನ್ನೂ ಭೇಟಿಯಾಗಿ ಮಾತನಾಡ್ತೇನೆ ಎಂದರು.

Cabinet Expansion : ಯಡಿಯೂರಪ್ಪ ಮಾತು ತಪ್ಪಲ್ಲ – ಮುನಿರತ್ನ; ಲಾಬಿ ಮಾಡಲ್ಲ – ಶಾಸಕ ತಿಪ್ಪಾರೆಡ್ಡಿ

ಇನ್ನು ನೂರಕ್ಕೆ ನೂರರಷ್ಟು ನನ್ನನ್ನ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಯಾಕಂದ್ರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನೇ ಪ್ರಮುಖ ಕಾರಣ. ಸಮ್ಮಿಶ್ರ ಸರ್ಕಾರವನ್ನ ತೊರೆದು ಮೊದಲು ರಾಜೀನಾಮೆ ಕೊಟ್ಟವನು ನಾನು. ನಂತರ ಎಲ್ಲರೂ ಧೈರ್ಯ ಮಾಡಿ ರಾಜೀನಾಮೆ ಕೊಟ್ಟರು ಎಂದು ವಿಕಾಸಸೌಧದಲ್ಲಿ ಅಬಕಾರಿ ಸಚಿವ ಹೆಚ್‌. ನಾಗೇಶ್‌ ಹೇಳಿದರು.

Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ ಬಹುತೇಕ ಖಚಿತ, ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News