ಶಿವಮೊಗ್ಗ: ಪಕ್ಷದ ನಾಯಕರ ನಡೆಗೆ ತೀವ್ರ ಅಸಮಾಧಾನಗೊಂಡಿದ್ದ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರನ್ನ ಸಂಸದ ರಾಘವೇಂದ್ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಮೂಗೂರು ಏತಾನೀರಾವರಿ ಉದ್ಘಾಟನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಮುನಿಸಕೊಂಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ(BY Raghavendra) ಅವರು ಇಂದು ಕುಮಾರ್ ಬಂಗಾರಪ್ಪ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.


BS Yediyurappa: 'ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಫಿಕ್ಸ್'


ಸೊರಬ ತಾಲೂಕಿನ ಮಹತ್ವಾಕಾಂಕ್ಷಿ ಮೂಗೂರು ಏತ ನೀರಾವರಿ ಲೋಕಾರ್ಪಣೆ ಕಾರ್ಯಕ್ರಮದ ತಮ್ಮನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಸಿದ್ದಪಡಿಸಲಾದ ಸ್ಟೇಜ್ ದಾಕ್ಯುಮೆಂಟರಿ ಮತ್ತು ಪ್ಲೆಕ್ಸ್ ಗಳಲ್ಲಿ ತಮ್ಮ ಫೋಟೋ(Photo) ಇರದಿದ್ದಕ್ಕೆ ಕುಮಾರ್ ಬಂಗಾರಪ್ಪ ಮುನಿಸಿಕೊಂಡಿದ್ದರು ಎನ್ನಲಾಗಿದೆ.


BS Yediyurappa: ಹುಟ್ಟುಹಬ್ಬದ ದಿನ ರಾಜಹುಲಿ ಮನೆ ಮುಂದೆ ನಿಂತ ಘರ್ಜಿಸುವ ಸಿಂಹ..!


ಈ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ(Kumar Bangarappa) ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಕೇಳಿದರೆ ಅಲ್ಲಿ ಸಮರ್ಪಕ ಉತ್ತರ ಬಂದಿಲ್ಲ. ಹಾಗಿದ್ದರೆ ಕಾರ್ಯಕ್ರಮ ನೀವೇ ಮಾಡಿಕೊಳ್ಳಿ ಎಂದು ಅಸಮಾಧಾನಗೊಂಡಿದ್ದರು.


Karnataka Bandh: ಮಾರ್ಚ್‌ 27 ಕ್ಕೆ 'ಕರ್ನಾಟಕ ಬಂದ್'..!


ಕುಮಾರಬಂಗಾರಪ್ಪ ಅವರ ಬೆಂಬಲಿಗರು ಈ ಬಗ್ಗೆ ಸಾಮಾಜಿಕ ಜಾಲತಾಣ(Social Media)ದಲ್ಲಿಯೂ ಇಲಾಖೆಯ ಕ್ರಮವನ್ನು ಖಂಡಿಸಿದ್ದಲ್ಲದೆ, ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು.


Congress Rally : ಸ್ವಾರಸ್ಯಕರವಾಗಿದೆ `ಕನಕಪುರದ ಬಂಡೆ'ಗೆ ಡಿಕೆಶಿ ಕೊಟ್ಟ ವ್ಯಾಖ್ಯಾನ..!


ಬಳಿಕ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹಾಗೂ ಬಿಜೆಪಿ(BJP) ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕುಮಾರ ಬಂಗಾರಪ್ಪ ಮನೆಗೆ ಭೇಟಿ ದೌಡಾಯಿಸಿದರು.


GESCOM JOBS : ಜೆಸ್ಕಾಂನಲ್ಲಿ 205 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.