Congress Rally : ಸ್ವಾರಸ್ಯಕರವಾಗಿದೆ `ಕನಕಪುರದ ಬಂಡೆ'ಗೆ ಡಿಕೆಶಿ ಕೊಟ್ಟ ವ್ಯಾಖ್ಯಾನ..!

ಉಡುಪಿ ನಗರದಲ್ಲಿ ನಡೆದ ಕಾಂಗ್ರೆಸ್ ಜನಧ್ವನಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ, ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು. 

Written by - Ranjitha R K | Last Updated : Feb 27, 2021, 07:05 PM IST
  • ಉಡುಪಿಯಲ್ಲಿ ಕಾಂಗ್ರೆಸ್ ಜನಧ್ವನಿ ಸಮಾರೋಪ ಸಮಾರಂಭ
  • ಬಿಜೆಪಿ ವಿರುದ್ಧ ಪ್ರಶ್ನೆಗಳ ಮಳೆ ಸುರಿಸಿದ ಡಿಕೆಶಿ
  • ಕನಕಪುರದ ಬಗ್ಗೆ ಭರ್ಜರಿ ವ್ಯಾಖ್ಯಾನ ಕೊಟ್ಟ ಕಾಂಗ್ರೆಸ್ ನಾಯಕ
Congress Rally : ಸ್ವಾರಸ್ಯಕರವಾಗಿದೆ `ಕನಕಪುರದ ಬಂಡೆ'ಗೆ  ಡಿಕೆಶಿ ಕೊಟ್ಟ ವ್ಯಾಖ್ಯಾನ..! title=
ಉಡುಪಿಯಲ್ಲಿ ಕಾಂಗ್ರೆಸ್ ಜನಧ್ವನಿ ಸಮಾರೋಪ ಸಮಾರಂಭ (file photo)

ಉಡುಪಿ : ಉಡುಪಿ ನಗರದಲ್ಲಿ ನಡೆದ ಕಾಂಗ್ರೆಸ್ ಜನಧ್ವನಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ, ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು. ಕಾಂಗ್ರೆಸ್ ಪಕ್ಷ ಬ್ಯಾಂಕಿಂಗ್ ವ್ಯವಸ್ಥೆಯನ್ನು (Banking System) ಬೆಳೆಸಿದರೆ, ಬಿಜೆಪಿ ಎಲ್ಲಾ ಬ್ಯಾಂಕ್ ಗಳಿಗೆ ಬೀಗ ಹಾಕಿತು. ಆಗ ಕರಾವಳಿಯ ಘಟಾನುಘಟಿ ಸಂಸದರು ಎಲ್ಲಿ ಹೋಗಿದ್ದರು?. ಅವರ ಧ್ವನಿ ಎಲ್ಲಿ ಅಡಗಿತ್ತು ಎಂದು ಪ್ರಶ್ನಿಸಿದರು. 

ಭರ್ಜರಿ ಡೈಲಾಗ್ ಹೊಡೆದ ಡಿಕೆಶಿ :
ಕನಕಪುರದ ವಿಚಾರ ಬಂದಾಗ ಡಿಕೆಶಿ (DKS)ಭರ್ಜರಿ ಡೈಲಾಗ್ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ``ನಾನು ಕನಕಪುರದ ಬಂಡೆ (Kanakapura Bande)ಅಲ್ಲ. ಅದು ಪ್ರಕೃತಿ. ಕಡಿದರೆ ಆಕೃತಿ. ಪೂಜಿಸಿದರೆ ಸಂಸ್ಕೃತಿ'' ಎಂದು ಡೈಲಾಗ್ ಸಿಡಿಸಿದರು. ಬಿಜೆಪಿಯವರು (BJP)ನಾವು ಹಿಂದೂ ಮುಂದೂ ಅಂತಾರೆ. ನಾವು ಹಾಗೇನಿಲ್ಲ. ನಮಗೆ ಎಲ್ಲಾ ಧರ್ಮಗಳು ಸೇರಿ ಒಂದು ರಕ್ತ, ಉಸಿರು. ಬೆವರಿನಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಡಿಕೆಶಿ (DK Shivakumar) ಹೇಳಿದರು. 

 ಇದನ್ನೂ ಓದಿ : Sanjeev Kumar: ಬೈಎಲೆಕ್ಷನ್ ಬಗ್ಗೆ 'ಮಹತ್ವದ ಮಾಹಿತಿ' ನೀಡಿದ ಮುಖ್ಯ ಚುನಾವಣಾಧಿಕಾರಿ!

ಸಿದ್ದರಾಮಯ್ಯರನ್ನ ಯಾರೂ ಟಾರ್ಗೆಟ್ ಮಾಡ್ತಾ ಇಲ್ಲ.!
ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ (Congress) ಜೆಡಿಎಸ್  ಮೈತ್ರಿಯ ಬಗ್ಗೆ ಮಾತನಾಡಿದ ಡಿಕೆಶಿವಕುಮಾರ್,ಕಾಂಗ್ರೆಸ್ನಲ್ಲಿ ಯಾರೂ ಕೂಡಾ ಸಿದ್ದರಾಮಯ್ಯ (Siddaramaiah) ಅವರನ್ನು ಟಾರ್ಗೆಟ್ ಮಾಡ್ತಾ ಇಲ್ಲ. ಜೆಡಿಎಸ್ (JDS)ನವರು ನಮಗೆ ಮೇಯರ್ ಸ್ಥಾನ ಕೊಡ್ತೇವೆ ಅಂದರು. ಆದರೆ, ಕೊನೆ ಕ್ಷಣದಲ್ಲಿ ಜೆಡಿಎಸ್ ನಾಮಪತ್ರ ಸಲ್ಲಿಸಿದೆ. ನಾವು ನಮ್ಮ ಪಕ್ಷದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕೆಂದು ಪ್ರಯತ್ನ ಮಾಡಿದೆವು ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

 ಇದನ್ನೂ ಓದಿ : HC Mahadevappa: ಸಿದ್ದರಾಮಯ್ಯ ವಿರುದ್ಧವೇ ಸಿಡಿದೆದ್ದ ಕಾಂಗ್ರೆಸ್ ಶಾಸಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News