ಕರಗದ ಪೂಜೆ ವೇಳೆ ಬೆಂಕಿ ಅವಘಡ, 20 ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿ
ನಗರದಲ್ಲಿ ಕರಗದ ಪೂಜೆ ವೇಳೆ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಬೈಕುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ನಡೆದಿದೆ.
ಬೆಂಗಳೂರು: ನಗರದಲ್ಲಿ ಕರಗದ ಪೂಜೆ ವೇಳೆ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಬೈಕುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ನಡೆದಿದೆ.
ಪೂಜೆವೇಳೆ ದೊಡ್ಡಕರ್ಪೂರಗಳನ್ನು ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ೨೦ ಕ್ಕೂ ಅಧಿಕ ಬೈಕುಗಳು ಮತ್ತು ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಇದನ್ನೂ ಓದಿ: ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ! ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು!
ಇಂದು ರಾತ್ರಿ ಕರಗದ ಉತ್ಸವ ಇದ್ದಿದ್ದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಮಾವೇಶಗೊಂಡಿದ್ದರು.ತಮ್ಮ ಹರಕೆಯನ್ನು ತೀರಿಸಲು ಭಕ್ತರು ಕರ್ಪೂರ ಹಚ್ಚುತ್ತಿದ್ದಾಗ ಬೆಂಕಿ ಹತ್ತಿ ಹತ್ತಿರದಲ್ಲಿದ್ದ ವಾಹನಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.
ಇದನ್ನೂ ಓದಿ: ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ
ಈ ದುರ್ಘಟನೆ ನಂತರ ಅಗ್ನಿಶಾಮಕ ಸಿಬ್ಬಂಧಿಯು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.ಆದರೆ ಇದುವರೆಗೆ ಯಾವುದೇ ಜೀವಹಾನಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.