ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ: ಖಾಸಗಿ ರೆಸಾರ್ಟ್ಗಳಿಗೆ ಹಲವು ನಿಯಮ ಜಾರಿ
Bandipur National Park: ದೇಶದ ಪ್ರಮುಖ ವನ್ಯಜೀವಿ ತಾಣವಾಗಿರುವ ಬಂಡೀಪುರಕ್ಕೆ ಪ್ರತಿದಿನ ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಹಾಗು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸಿ ಇಲ್ಲಿ ವಾಸ್ತವ್ಯ ಹೂಡಲು ಇಚ್ಚಿಸುತ್ತಾರೆ.
New Year Celebration Bandipur: ಕರ್ನಾಟಕದ ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದ್ದು, ಡಿ.31 ಮತ್ತು 2025ರ ಜ.1ರಂದು ಬಂಡೀಪುರ ಅರಣ್ಯ ಇಲಾಖೆ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ಕೂಡ ನಿರ್ಬಂಧ ಹೇರಲಾಗಿದೆ. ಆದಾಗ್ಯೂ, ಎಂದಿನಂತೆ ಬಂಡೀಪುರದಲ್ಲಿ ಸಫಾರಿಯನ್ನು ಆನಂದಿಸಬಹುದಾಗಿದೆ.
ಹೌದು, ಹೊಸ ವರ್ಷಾಚರಣೆ ನೆಪದಲ್ಲಿ ಬಂಡೀಪುರದಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗಳು ಮೋಜು ಮಸ್ತಿ ಮಾಡಿ ಕಾಡಿನಲ್ಲಿರುವ ಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿಯುಂಟುಮಾಡುವುದರಿಂದ ಅರಣ್ಯ ಇಲಾಖೆಯು 2024 ಡಿಸೆಂಬರ್ 31 ಹಾಗೂ 2025 ಜನವರಿ 01ರಂದು ಈ ಎರಡೂ ದಿನಗಳ ಕಾಲ ಅರಣ್ಯ ಇಲಾಖೆ ವಸಗಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ, ಬಂಡೀಪುರದಲ್ಲಿ ಹೊಸ ವರ್ಷ ಆಚರಣೆ ಮೋಜು, ಮಸ್ತಿಗೆ ಪ್ಲಾನ್ ಮಾಡಿದ್ದ ಪ್ರವಾಸಿಗಳಿಗೆ ನಿರಾಶೆಯಾದಂತಾಗಿದೆ.
ಇದನ್ನೂ ಓದಿ- ಹೊಸ ವರ್ಷಾಚರಣೆ ವೇಳೆ ದುರ್ವರ್ತನೆ ತೋರಿದರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ
ಖಾಸಗಿ ರೆಸಾರ್ಟ್ಗಳಿಗೆ ಹಲವು ನಿಯಮ ಜಾರಿ:
ಬಂಡೀಪುರದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಬ್ರೇಕ್ ಹಾಕಿರುವುದರ ಜೊತೆ ಜೊತೆಗೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಖಾಸಗಿ ರೆಸಾರ್ಟ್ಗಳು ಹಾಗೂ ಹೋಂ ಸ್ಟೇ ಗಳಿಗೂ ಕೂಡ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ಅಡಚಣೆಯಾಗಬಾರದೆಂಬ ಉದ್ದೇಶದಿಂದ ಖಾಸಗಿ ರೆಸಾರ್ಟ್ಗಳು ಹಾಗೂ ಹೋಂ ಸ್ಟೇ ಗಳಲ್ಲಿ ಈ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಅನುಸರಿಸಲೇಬೇಕಾಗಿದೆ. ಆ ನಿಯಮಗಳೆಂದರೆ...
>> ಖಾಸಗಿ ರೆಸಾರ್ಟ್ಗಳು, ಹೋಂ ಸ್ಟೇಗಳಿಗೆ ರಾತ್ರಿ 10 ಗಂಟೆಗೆ ಬಂದ್ ಮಾಡುವಂತೆ ಸೂಚನೆ.
>> ಫೈರ್ ಕ್ಯಾಂಪ್ ಹಾಕಬಾರದು.
>> ಅಧಿಕ ಪ್ರಮಾಣದ ಶಬ್ದ ಮಾಡುವಂತಿಲ್ಲ.
>> ಲೈಟಿಂಗ್ಸ್, ಡಿಜೆ ಬಳಸುವಂತಿಲ್ಲ. ಹೀಗೆ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಇನ್ನೂ ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಯಮಪಾಲನೆ ಮಾಡುವಂತೆ ತಿಳಿಸಿರುವ ಬಂಡೀಪುರ ಎಸಿಎಫ್ ನವೀನ್ ಕುಮಾರ್, ನಿಮಯ ಪಾಲನೆ ಮಾಡದವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ- ಬಂಡೀಪುರದಲ್ಲಿ ಮತ್ತೇ ಹೊಸ ಚರ್ಚೆಗೆ ನಾಂದಿ ಹಾಡಿದೆ ಸುರಂಗ ಮಾರ್ಗದ ಮಾತು
ಎಂದಿನಂತೆ ಸಿಗಲಿದೆ ಸಫಾರಿ ಆನಂದ:
ಹೊಸ ವರ್ಷದಲ್ಲಿ ಕೇವಲ ಬಂಡೀಪುರದ ವಸತಿ ಗೃಹಕ್ಕಷ್ಟೇ ನಿರ್ಬಂಧ ಹೆರಿರುವ ಅರಣ್ಯ ಇಲಾಖೆ ಎಂದಿನಂತೆ ಬಂಡೀಪುರ ಸಫಾರಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರವಾಸಿಗರು ಹೊಸ ವರ್ಷದಲ್ಲಿ ಸಫಾರಿಯನ್ನು ಆನಂದಿಸಬಹುದು ಎಂದು ತಿಳಿಸಿದೆ. ಇನ್ನೂ ಈಗಾಗಲೇ ಆನ್ಲೈನ್ ನಲ್ಲಿ ಸಫಾರಿ ಟಿಕೆಟ್‍ಗಳನ್ನು ಬುಕ್ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.