ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಈರುಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 200 ರೂ.ಗೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

"ಬೆಂಗಳೂರಿನ ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿ(Onion) ಬೆಲೆ ಪ್ರತಿ ಕೆಜಿಗೆ 200 ರೂ.ಗಳನ್ನು ಮುಟ್ಟಿದೆ, ಅದರ ಸಗಟು ದರ ಕ್ವಿಂಟಲ್‌ಗೆ 5,500 ರಿಂದ 14,000 ರೂಗಳವರೆಗೆ ಇತ್ತು" ಎಂದು ರಾಜ್ಯ ಕೃಷಿ ಮಾರುಕಟ್ಟೆ ಅಧಿಕಾರಿ ಸಿದ್ದಗಂಗಯ್ಯ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದರು.


ನಾನು ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂದು ವಿತ್ತ ಸಚಿವರು ಹೇಳಿದ್ದೇಕೆ?


ಈರುಳ್ಳಿ 200ರ ಗಡಿ ಮುಟ್ಟಿರುವ ಕಾರಣದಿಂದಾಗಿ, ಈ ಟೆಕ್ ಹಬ್‌ನಾದ್ಯಂತದ ಮನೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿನ ಊಟದ ಮೆನುವಿನಿಂದ ಅತ್ಯಂತ ಸಾಮಾನ್ಯ ಮತ್ತು ಪ್ರಧಾನ ತರಕಾರಿಯೊಂದು ಸ್ಪಷ್ಟವಾಗಿ ಕಾಣೆಯಾಗಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಯ ಪ್ರಕಾರ, ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆಗಳು ಜನವರಿ ಮೂರನೇ ವಾರದ ಬಳಿಕ ತಹಬದಿಗೆ ಬರುವ ಸಾಧ್ಯತೆಯಿದೆ.


ಭಾರತಕ್ಕೆ ವಾರ್ಷಿಕ 150 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ  ಅಗತ್ಯವಿದ್ದು,  ಕರ್ನಾಟಕವು 20.19 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಉತ್ಪಾದಿಸುತ್ತದೆ. ಬೆಳೆ ನಷ್ಟ ಮತ್ತು ಸುಗ್ಗಿಯ ನಂತರದ ನಷ್ಟದಿಂದಾಗಿ ಈರುಳ್ಳಿ ಉತ್ಪಾದನೆಯಲ್ಲಿ ಸುಮಾರು 50 ಪ್ರತಿಶತದಷ್ಟು ನಷ್ಟವಾಗಿರುವ ಕಾರಣ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿದೆ. ಹೀಗಾಗಿಯೇ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.


ನವೆಂಬರ್ನಲ್ಲಿ, ಕರ್ನಾಟಕ ಮಾರುಕಟ್ಟೆಗಳಲ್ಲಿ ದಿನಕ್ಕೆ 60-70 ಕ್ವಿಂಟಾಲ್ ಈರುಳ್ಳಿ ದೊರಕಿತು, ಇದು ಡಿಸೆಂಬರ್‌ನಲ್ಲಿ ಶೇಕಡಾ 50 ರಷ್ಟು ಕುಸಿದು ಬಿಕ್ಕಟ್ಟಿಗೆ ಕಾರಣವಾಗಿದೆ ಎಂದವರು ತಿಳಿಸಿದ್ದಾರೆ.


ಮುಂದಿನ ವಾರದಿಂದ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆ!


ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ರಜಾದಿನಗಳಲ್ಲಿಯೂ ಈರುಳ್ಳಿ ವ್ಯಾಪಾರ ನಡೆಯಬೇಕು ಎಂದು ಸುತ್ತೋಲೆ ಹೊರಡಿಸಿದೆ. "ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ ಹೆಚ್ಚಿನ ಸ್ಟಾಕ್ ಉಳಿದಿಲ್ಲ. ಆಶ್ಚರ್ಯಕರವಾಗಿ, ಕರ್ನಾಟಕವು ಈರುಳ್ಳಿ ಶೇಖರಣಾ ಸೌಲಭ್ಯಗಳನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ" ಎಂದು ಸಿದ್ದಗಂಗಯ್ಯ ಹೇಳಿದರು. ಏತನ್ಮಧ್ಯೆ, ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೋರ್ಡರ್‌ಗಳನ್ನು ಭೇದಿಸಲು ದಾಳಿ ನಡೆಸುತ್ತಿದೆ.