ಗುಡ್ ನ್ಯೂಸ್: ಮುಂದಿನ ವಾರದಿಂದ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆ!

ಮುಂದಿನ ವಾರದಿಂದ ಈರುಳ್ಳಿ ಬೆಲೆ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

Updated: Dec 7, 2019 , 12:30 PM IST
ಗುಡ್ ನ್ಯೂಸ್: ಮುಂದಿನ ವಾರದಿಂದ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆ!

ನವದೆಹಲಿ: ದಿನೇ ದಿನೇ ಈರುಳ್ಳಿ ದರ ಆಕಾಶ ಮುಟ್ಟುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏತನ್ಮಧ್ಯೆ, ಸರ್ಕಾರದ ಮೂಲಗಳಿಂದ ಪರಿಹಾರದ ಸುದ್ದಿಯೊಂದು ಕೇಳಿ ಬರುತ್ತಿದೆ. ಸರ್ಕಾರವು ಈರುಳ್ಳಿ ಆಮದಿಗೆ ಈಗಾಗಲೇ ಸಮ್ಮತಿಸಿತ್ತು. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಈರುಳ್ಳಿಯ ಮೊದಲ ಬ್ಯಾಚ್ ಶೀಘ್ರದಲ್ಲೇ ಭಾರತವನ್ನು ತಲುಪಲಿದೆ ಎಂದು ಹೇಳಲಾಗಿದ್ದು, ಮುಂದಿನ ವಾರದಿಂದ ಈರುಳ್ಳಿ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. 

ಈಜಿಪ್ಟ್ ಮತ್ತು ಟರ್ಕಿಯಿಂದ ಈರುಳ್ಳಿ(Onion) ಆಮದು:
ಈಜಿಪ್ಟ್ ಮತ್ತು ಟರ್ಕಿಯಿಂದ ಹೆಚ್ಚುವರಿ ಈರುಳ್ಳಿಯನ್ನು ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ. ಕಳೆದ ವಾರ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಎಂಎಂಟಿಸಿಯು ಈಜಿಪ್ಟ್‌ನಿಂದ 6,090 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿತ್ತು. ಮುಂದಿನ ದಿನಗಳಲ್ಲಿ 6,090 ಟನ್ ಈರುಳ್ಳಿ ಈಜಿಪ್ಟ್‌ನಿಂದ ಭಾರತವನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಜನವರಿ ಮೊದಲ ವಾರದೊಳಗೆ ಟರ್ಕಿಯಿಂದ 11,000 ಟನ್ ಈರುಳ್ಳಿ ತರಲು ಎಂಎಂಟಿಸಿ ವ್ಯವಸ್ಥೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಗುರುವಾರ ಕೇಂದ್ರ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈರುಳ್ಳಿಯ ಬೆಲೆ ಗಗನಕ್ಕೇರುತ್ತಿದೆ. ಬೆಲೆಗಳನ್ನು ನಿಯಂತ್ರಿಸಲು ಆಮದು ಮೂಲಕ ಈರುಳ್ಳಿ ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾಡಿದ ಪ್ರಗತಿಯನ್ನು ಪರಿಶೀಲಿಸಿದರು. ಈರುಳ್ಳಿ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಬೆಲೆಗಳನ್ನು ನಿಯಂತ್ರಿಸಲು ಆಮದುಗಳನ್ನು ವೇಗಗೊಳಿಸಲು ಕಳೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಅನುಷ್ಠಾನದ ಪ್ರಗತಿಯನ್ನು ಷಾ ಪರಿಶೀಲಿಸಿದರು. ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಪ್ರಧಾನಿ ಸಲಹೆಗಾರ ಪಿ.ಕೆ. ಸಿನ್ಹಾ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಅವಿನಾಶ್ ಶ್ರೀವಾಸ್ತವ ಉಪಸ್ಥಿತರಿದ್ದರು.

ಈರುಳ್ಳಿ ಬೆಲೆ ಏರಿಕೆ ಬಗ್ಗೆ ಆಕ್ರೋಶ:
ಈರುಳ್ಳಿ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ವಾರಾಂತ್ಯದ ವರೆಗೆ ಕೆ.ಜಿ.ಗೆ 70-80 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಪ್ರತಿ ಕೆ.ಜಿ.ಗೆ 100-150 ರೂ. ತಲುಪಿದೆ. ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಚಿಲ್ಲರೆ ಈರುಳ್ಳಿಯನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಇನ್ನೂ 80-120 ಕೆ.ಜಿ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಗ್ರಾಹಕ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ದೆಹಲಿಯಲ್ಲಿ ಚಿಲ್ಲರೆ ಈರುಳ್ಳಿ ಬೆಲೆ ಶುಕ್ರವಾರ ಕೆ.ಜಿ.ಗೆ 98 ರೂ.ಗೆ ಏರಿದೆ. ಮುಂದಿನ ವಾರದಿಂದ ದೇಶಾದ್ಯಂತ ಹೊಸ ಈರುಳ್ಳಿ ಬೆಳೆ ಆಗಮನವಾಗಲಿದ್ದು, ಇದು ಬೆಲೆ ಏರಿಕೆಯ ಮೇಲೆ ಪ್ರಭಾವ ಬೀರಲಿದೆ ಎಂದು ಆಜಾದ್‌ಪುರ ಮಂಡಿಯ ಉದ್ಯಮಿ ಮತ್ತು ಈರುಳ್ಳಿ ವ್ಯಾಪಾರಿ ಸಂಘದ ಅಧ್ಯಕ್ಷ ರಾಜೇಂದ್ರ ಶರ್ಮಾ ಹೇಳಿದ್ದಾರೆ.

21 ಸಾವಿರ ಟನ್ ಈರುಳ್ಳಿ ಆಮದು ಒಪ್ಪಂದ: 
ಎಂಎಂಟಿಸಿ ಈವರೆಗೆ 21,090 ಟನ್‌ಗಿಂತ ಹೆಚ್ಚು ಈರುಳ್ಳಿ ಆಮದು ಮಾಡಿಕೊಳ್ಳುವ ಗುತ್ತಿಗೆ ನೀಡಿದೆ. ಇದಲ್ಲದೆ, 15,000 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕಂಪನಿಗೆ ಮೂರು ಹೊಸ ಟೆಂಡರ್ ನೀಡಲಾಗಿದೆ. ವಿಶೇಷವೆಂದರೆ, 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ