ಬೆಂಗಳೂರು: ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿರುವ ಕರೋನಾವೈರಸ್ (Coronavirus) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ಲಾಕ್​ಡೌನ್(Lockdown)ನಿಂದಾಗಿ ಸ್ಥಗಿತಗೊಂಡಿದ್ದ ಬಸ್​​​​​​​​​​​​ಗಳ ಸಂಚಾರ ರಾಜ್ಯದಲ್ಲಿ ಇಂದಿನಿಂದ ಆರಂಭವಾಗಲಿದೆ. ಆದರೆ ಬಸ್​​​​​​​​​​​​ನಲ್ಲಿ ಓಡಾಡಬೇಕಾದರೆ ಹತ್ತಾರು ನಿಯಮಗಳನ್ನು ಪಾಲಿಸಬೇಕಾಗಿದೆ.


COMMERCIAL BREAK
SCROLL TO CONTINUE READING

ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ಮಾತನಾಡುವುದಾದರೆ ಇಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಇಲಾಖೆ ವಿಶೇಷ ಗಮನ ಹರಿಸಿದ್ದು ಬಿಎಂಟಿಸಿ ಬಸ್​​​​​​​​​​​​ನಲ್ಲಿ ದುಡ್ಡು ಕೊಟ್ಟು ಟಿಕೆಟ್ ಖರೀದಿಸುವುದಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿದೆ. ಇದರ ಬದಲಿಗೆ ದಿನದ/ವಾರದ/ತಿಂಗಳ ಪಾಸ್ ಪಡೆದು ಸಂಚಾರ ನಡೆಸುವಂತೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.


ಹೌದು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಯಲ್ಲಿ ದಿನದ ಪಾಸ್, ವಾರದ ಪಾಸ್ ಅಥವಾ ಮಾಸಿಕ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ. ತಿಂಗಳ ಪಾಸ್ಗಳನ್ನು ಕೌಂಟರ್ ನಲ್ಲಿ ಖರೀದಿ ಮಾಡಬೇಕಾಗಿದೆ.


ಬೆಂಗಳೂರಿನಲ್ಲಿ ಪಾಸ್ಗಳ ದರ ಕೆಳಗಿನಂತಿದೆ:


  • ದಿನದ ಪಾಸ್ ₹70

  • ವಾರದ ಪಾಸ್ ₹300


ಇದಲ್ಲದೆ ಹಿರಿಯ ನಾಗರೀಕರು, ಗರ್ಭಿಣಿ ಮಹಿಳೆಯರು ಮತ್ತು 10 ವರ್ಷದೊಳಗಿನ ಮಕ್ಕಳಿಗೂ ಬಸ್​​​​​​​​​​​​ನಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.