ಬೆಂಗಳೂರು: ಭಾರತದ ಪ್ರಮುಖ K12 ಶಾಲಾ ಸರಣಿಯಾದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯು ಬೆಂಗಳೂರಿನಲ್ಲಿ ಇ-ತ್ಯಾಜ್ಯ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ. ಎಲೆಕ್ಟ್ರಾನಿಕ್‌ ಹಾಗೂ ಎಲೆಕ್ಟ್ರಿಕಲ್‌ ಮರುಬಳಕೆ ಸಂಸ್ಥೆಯಾದ ಇ-ಪರಿಸರದ ಸಹಯೋಗದಲ್ಲಿ ನಡೆದ ಈ ಅಭಿಯಾನದಲ್ಲಿ, ಬೆಂಗಳೂರಿನಲ್ಲಿರುವ ಎಲ್ಲಾ ಆರ್ಕಿಡ್ಸ್‌ ಶಾಖೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ


 ಇ-ತ್ಯಾಜ್ಯ ಉತ್ಪನ್ನಗಳ ವಿಂಗಡಣೆ ಹಾಗೂ ಮರುಬಳಕೆಯ ಮಹತ್ವದ ಬಗ್ಗೆ ಇ ಪರಿಸರದ ಪ್ರತಿನಿಧಿ ಪೂರ್ಣಿಮಾ ಅವರು ಜಾಲಹಳ್ಳಿ ಶಾಖೆಯ ಮಕ್ಕಳಿಗೆ ಅರಿವಿನ ಉಪನ್ಯಾಸ ನೀಡಿದರು.
ಇ-ತ್ಯಾಜ್ಯ ವಸ್ತುಗಳಾದ ಹಳೆಯ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ ಗಳು, ಮೌಸ್, ಸ್ಪೀಕರ್ ಗಳು, ಬ್ಯಾಟರಿಗಳು, ಪವರ್ ಬ್ಯಾಂಕ್ ಗಳು, ಚಾರ್ಜರ್ ಗಳು, ಕುಕ್ಕರ್ ಗಳು, ಗ್ರೈಂಡರ್ ಗಳು, ಟಿವಿ, ಹೆಡ್ ಫೋನ್ ಗಳು, ಸಿಡಿ ಗಳು ಹಾಗೂ ಹಳೆಯ ಮೊಬೈಲ್ ಫೋನ್ ಗಳನ್ನು ಸಂಗ್ರಹಿಸಲಾಯಿತು.ಮುಂಬೈ, ಪುಣೆ, ಹೈದರಾಬಾದ್‌ ಹಾಗೂ ಬೆಂಗಳೂರು ನಗರಗಳಲ್ಲಿ ನಡೆದ ಈ ಅಭಿಯಾನದಲ್ಲಿ ಒಟ್ಟು  500 ಕೆಜಿ ಇ-ತ್ಯಾಜ್ಯ ವನ್ನು ಸಂಗ್ರಹಿಸಲಾಯಿತು.


ಇದನ್ನೂ ಓದಿBig Boss Kannada 9 : ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...!


ಈ ಅಭಿಯಾನದ ಬಗ್ಗೆ ಮಾತನಾಡಿದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯ ಸಾರ್ವಜನಿಕ ಸಂವಹನ ಮುಖ್ಯಸ್ಥೆ ಸರ್ವಮಂಗಳಾ, "ಇಂದು ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಾರೆ.ಒಮ್ಮೆ ಈ ವಸ್ತುಗಳು ಹಳೆಯದಾದರೆ ಅಥವಾ ಕೆಲಸ ಮಾಡದಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ವಿಧಾನ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಪರಿಸರದ ಮೇಲೆ ಈ ಎಲೆಕ್ಟ್ರಾನಿಕ್ ತ್ಯಾಜ್ಯಗಳ ಅಪಾಯಕಾರಿ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.