ವಿಗ್ ಹಾಕಿದ್ರಾ ಅಥವಾ ಕೂದಲು ಕಸಿ ಮಾಡಿಸಿಕೊಂಡ್ರಾ ಡಿಬಾಸ್ ದರ್ಶನ್...?

 

Written by - Zee Kannada News Desk | Last Updated : Dec 26, 2022, 04:38 PM IST
  • ಈಗ ಕ್ರಾಂತಿ ಚಿತ್ರದಲ್ಲಿನ ದರ್ಶನ್ ಅವರ ಹೊಸ ಲುಕ್ ಮಾತ್ರ ಸಾಕಷ್ಟು ಗಮನ ಸೆಳೆದಿದೆ
  • ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಪ್ಯಾನ್ ಇಂಡಿಯಾದಲ್ಲಿ ಹವಾ ಮಾಡಲು ಸಜ್ಜಾಗಿದ್ದಾರೆ
  • ಚಂದನವನದ ಪರಿಮಳವನ್ನು ಜಗತ್ತಿನೆಲ್ಲೆಡೆ ಪಸರಿಸಲಿ ಎನ್ನುವುದೇ ಪ್ರೇಕ್ಷಕ ಪ್ರಭುವಿನ ಹಾರೈಕೆ ಆಗಿದೆ
ವಿಗ್ ಹಾಕಿದ್ರಾ ಅಥವಾ ಕೂದಲು ಕಸಿ ಮಾಡಿಸಿಕೊಂಡ್ರಾ ಡಿಬಾಸ್ ದರ್ಶನ್...? title=

ಬೆಂಗಳೂರು: ರಾಜ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ತಮ್ಮ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ ಪ್ರೊಮೋಷನ್ ನಲ್ಲಿ ನಿರತರಾಗಿದ್ದಾರೆ.

ಈಗ ಕ್ರಾಂತಿ ಚಿತ್ರದಲ್ಲಿನ ದರ್ಶನ್ ಅವರ ಹೊಸ ಲುಕ್ ಮಾತ್ರ ಸಾಕಷ್ಟು ಗಮನ ಸೆಳೆದಿದೆ. ಆದರೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳನ್ನು ಗಮನಿಸಿದಾಗ ಅವರು ತಮ್ಮ ತಲೆಗೆ ಕಸಿ ಮಾಡಿಕೊಂಡಿದ್ದಾರೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.ಸಾಮಾನ್ಯವಾಗಿ ನಟರಿಗೆ ವಯಸ್ಸಾದಂತೆ ಅದಕ್ಕೆ ತಕ್ಕನಾಗಿ ದೇಹವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿಯಾಗಿರುತ್ತದೆ.ಹೀಗಾಗಿ ಅವರು ತಮ್ಮ ದೇಹವನ್ನು ದಂಡಿಸುವುದರ ಜೊತೆಗೆ ಯಾವಾಗಲೂ ಯಂಗ್ ಲುಕ್ ನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: BBK 9: ಇವರೇ ನೋಡಿ ಬಿಗ್‌ ಬಾಸ್‌ ಕನ್ನಡ ಫೈನಲಿಸ್ಟ್ 

ಒಂದೆಡೆ ದರ್ಶನ್ ಅವರ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರೆ, ಇನ್ನೊಂದೆಡೆಗೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಕೆಲವು ಫೋಟೋಗಳನ್ನು ಗಮನಿಸಿರುವ ನೆಟ್ಟಿಗರು ದರ್ಶನ್ ಅವರು ತಮ್ಮ ತಲೆಗೆ ವಿಗ್ ಹಾಕಿಸಿಕೊಂಡಿದ್ದಾರೋ ಅಥವಾ ತಮ್ಮ ಕೂದಲಿಗೆ ಕಸಿ ಮಾಡಿಸಿಕೊಂಡಿದ್ದಾರೋ?  ಎಂದು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಹೆಸರಾಂತ ನಟರು ತಮ್ಮ ತಲೆಗೆ ಕಸಿ ಮಾಡಿಸಿಕೊಳ್ಳುವುದಾಗಲಿ ಅಥವಾ ವಿಗ್ ಹಾಕಿಸಿಕೊಳ್ಳುವುದಾಗಲಿ ಚಿತ್ರರಂಗಕ್ಕೆ ಹೊಸದೇನಲ್ಲ.ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ನಾವು ಶಾರುಖ್ ಖಾನ್ ಸೇರಿದಂತೆ ಅನೇಕ ನಟರು ತಮ್ಮ ಚಿತ್ರದ ಪಾತ್ರಕ್ಕೆ ಅನುಗುಣವಾಗಿ ಯಂಗ್ ಆಗಿ ಕಾಣಿಸಿಕೊಳ್ಳಲು ವಿಗ್ ಅಥವಾ ಕೂದಲು ಕಸಿ ಮಾಡಿಸಿಕೊಳ್ಳುವುದನ್ನು ನೋಡಬಹುದಾಗಿದೆ.ಅದೇ ರೀತಿ ದರ್ಶನ್ ಕೂಡ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲು ತಲೆಗೆ ವಿಗ್ ಅಥವಾ ಕಸಿಮಾಡಿಸಿಕೊಂಡಿರಬಹುದು ಎನ್ನುವುದು ನೆಟ್ಟಿಗರ ಅಂಬೋಣವಾಗಿದೆ.

ಇದನ್ನೂ ಓದಿBig Boss Kannada 9 : ಬಿಗ್ ಬಾಸ್ ನಿಂದ ಅರುಣ್ ಸಾಗರ್ ಔಟ್...!

ಏನೇ ಆಗಲಿ ಈಗ ಕ್ರಾಂತಿ ಚಿತ್ರದ ಮೂಲಕ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಪ್ಯಾನ್ ಇಂಡಿಯಾದಲ್ಲಿ ಹವಾ ಮಾಡಲು ಸಜ್ಜಾಗಿದ್ದಾರೆ.ಈ ಚಿತ್ರವು ಕೂಡ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದು ಚಂದನವನದ ಪರಿಮಳವನ್ನು ಜಗತ್ತಿನೆಲ್ಲೆಡೆ ಪಸರಿಸಲಿ ಎನ್ನುವುದೇ ಪ್ರೇಕ್ಷಕ ಪ್ರಭುವಿನ ಹಾರೈಕೆ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

 

Trending News