ಬೆಂಗಳೂರು  : ರಾಜ್ಯ ರಾಜಕೀಯದಲ್ಲಿ ‌ಬಿಜೆಪಿ ಮತ್ತು ಕಾಂಗ್ರೆಸ್ ನ ಟಾಕ್ ವಾರ್ ಜೋರಾಗಿದೆ. ದಿನ‌ ಕಳೆದರೆ  ಸಾಕು ಕಾಂಗ್ರೆಸ್ ತನ್ನ ವಿಶಿಷ್ಟ ಅಭಿಯಾನ‌ ಮೂಲಕ‌ ಅಡಳಿತ ಪಕ್ಷ ಬಿಜೆಪಿಗೆ ಬಿಸಿ‌ ಮುಟ್ಟಿಸುತ್ತಿದೆ. ಇತ್ತ ಅದಕ್ಕೆ ‌ಸರಿಸಾಟಿಯಾಗಿ ಬಿಜೆಪಿ ಸಹ ಪ್ರತಿದಾಳಿ ಮಾಡುವ ಮೂಲಕ ಕೈ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ. ಇದೀಗ ವಿಶಿಷ್ಟ ಅಭಿಯಾನ‌ ಆರಂಭಿಸಿರುವ ಕಾಂಗ್ರೆಸ್ ಸಿಎಂಗೆ ಭಾರೀ ಮುಖಭಂಗ ಮಾಡಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸರ್ಕಾರಿ‌ ನಿವಾಸದ ಪಕ್ಕವೇ ಸಿಎಂ ಭಾವಚಿತ್ರವಿರುವ QR ಸ್ಕ್ಯಾನ್ ಕೋಡ್ ಅನ್ನು ಅಂಟಿಸುವ ಮೂಲಕ‌ ಸಂಚಲ ಸೃಷ್ಟಿಸಿದೆ..


COMMERCIAL BREAK
SCROLL TO CONTINUE READING

ಬಿಜೆಪಿ V/Sಕಾಂಗ್ರೆಸ್ QR ಕೋಡ್  ವಾರ್: 
ಬಿಜೆಪಿ ಸರ್ಕಾರದ ವಿರುದ್ಧ ವಿಶಿಷ್ಟ ಅಭಿಯಾನ ಶುರು ಮಾಡಿರುವ ಕಾಂಗ್ರೆಸ್ , 40% ಕಮಿಷನ್ ವಿರುದ್ಧ ವಿಶಿಷ್ಟ ರೀತಿಯಲ್ಲಿ ಅಭಿಯಾನ ಆರಂಭಿಸಿದೆ. ನಗರದಾದ್ಯಂತ  ಪೇ-ಸಿಎಂ ಶೀರ್ಷಿಕೆಯಡಿ  ಸಿಎಂ  ಭಾವಚಿತ್ರವಿರುವ ಪೋಸ್ಟರ್‌ಗಳನ್ನ ಅಂಟಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ‌ಸಮರ ಸಾರಿದೆ. 40% ಕಮಿಷನ್ ಸರ್ಕಾರ ಅಂತಾ ವೆಬ್ ಸೈಟ್ ಕ್ರಿಯೇಟ್ ಮಾಡಿರುವ ಕಾಂಗ್ರೆಸ್, ಕ್ಯೂಆರ್ ಕೋಡ್ ಸ್ಕ್ಯಾನ್ ಸಹ ನೀಡಿದೆ. 


ಇದನ್ನೂ ಓದಿ : ಲೈಂಗಿಕ ಕಿರುಕುಳ ಆರೋಪ : ಕೋಲಾರ ಇ‌.ಟಿ.ಸಿ.ಎಂ ಆಸ್ಪತ್ರೆ ಲೆಕ್ಕಾಧಿಕಾರಿ ವಿರುದ್ಧ ದೂರು


ಸಿಎಂ ಬೊಮ್ಮಾಯಿಗೆ ಮುಜುಗರ ತಂದ ಪೋಸ್ಟರ್ : 
ಸದ್ಯ ಕಾಂಗ್ರೆಸ್ ಆರಂಭಿಸಿರುವ ಪೇ ಸಿಎಂ ಆಭಿಯಾನದಿಂದ ಸಿಎಂಗೆ ಭಾರೀ ಮುಜುಗರ ಉಂಟಾಗಿದೆ.ಅದರಲ್ಲೂ ಸಿಎಂ ಸರ್ಕಾರಿ ನಿವಾಸದ ಅಕ್ಕಪಕ್ಕವೇ ಈ ರೀತಿ ಪೋಸ್ಟರ್ ಅಂಟಿಸಿರೋದು ಸಿಎಂ ಇರುಸುಮುರುಸಿಗೆ ಕಾರಣವಾಗಿತ್ತು. ಅಧಿವೇಶನಕ್ಕೆ ಆಗಮಿಸುತ್ತಿದಂತೆ ವಿಷಯ ತಿಳಿದ ಸಿಎಂ ಅಧಿಕಾರಿಗಳ ವಿರುದ್ದ ಗರಂ  ಆಗಿದ್ದಾರೆ.  


ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್ : 
ಕಾಗ್ರೆಸ್ ಅಭಿಯಾನಕ್ಕೆ ಪ್ರತಿಯಾಗಿ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಫೋಟೋ ಹಾಕಿ ಲೇವಡಿ ಮಾಡಿದೆ. ರೀಡೂ ಸಿದ್ದಾರಾಮಯ್ಯ ಇಡಿ‌‌ ಡಿಕೆಶಿ ಎಂದು ಕಿಡಿಕಾರಿರೋ ಬಿಜೆಪಿ, ಸಮಾಜವಾದಿ ಮುಖವಾಡ ಧರಿಸಿ ರಾಜ್ಯವನ್ನು ಲೂಟಿ ಮಾಡಿರುವ ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ ಅಂತ ಅಭಿಯಾನದಲ್ಲಿ‌ ಬರೆದಿದೆ. ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನ‌ ದೂರವಿಡಿ ಎಂದು ಡಿಕೆ ಮತ್ತು ಸಿದ್ದು ಭಾವಚಿತ್ರದ ಸ್ಕ್ಯಾನ್ ಬಿಡುಗಡೆ ಮಾಡಿದೆ.


ಇದನ್ನೂ ಓದಿ : ʼಕಂದಾಯ ಇಲಾಖೆಗಳಲ್ಲಿ "ಬ್ರೋಕರ್"ಗಳ ಹಾವಳಿʼ :‌ ಸದನದಲ್ಲಿ ಕಾಂಗ್ರೆಸ್‌ ಪ್ರತಿಭಟನೆ


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.