ಕೋಲಾರ : ನಗರದ ಪ್ರತಿಷ್ಠಿತ ಇ.ಟಿ.ಸಿ.ಎಂ ಆಸ್ಪತ್ರೆ ಲೆಕ್ಕಾಧಿಕಾರಿ ಹಾಗೂ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಕುರಿತು ಸಂತ್ರಸ್ತ ವಿದ್ಯಾರ್ಥಿನಿಯರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲೈಂಗಿಕ ಕಿರುಕುಳದ ಬಗ್ಗೆ ಜಾನ್ಸನ್ ಕುಂದರ್ ವಿರುದ್ದ ದೂರು ನೀಡಿದ್ದರೂ ಸಹ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಠಾಣಾಧಿಕಾರಿ ಸೂಚನೆಯಂತೆ ನಿರ್ಭಯಾ ಅತ್ಯಾಚಾರ ಪ್ರಕರಣದ ನಿರ್ದೇಶನದ ಆಧಾರದ ಮೇಲೆ, ಲೈಂಗಿಕ ಕಿರುಕುಳ ಸಂತ್ರಸ್ತ ವಿದ್ಯಾರ್ಥಿನಿಯರು ತಮ್ಮ ಹೆಸರು ಬದಲಿಸಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಬುಧವಾರ ಅಡಿಕೆ ಧಾರಣೆ ಕುಸಿತ!
ಈ ಮೊದಲು ಜಾನ್ಸನ್ ಕುಂದರ್ ಹಲವಾರು ವರ್ಷಗಳಿಂದ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿರುವ ಬಗ್ಗೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ವಾರ್ಡನ್ ಶೀಲಾ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ಸಲ್ಲಿಸಿದ್ದರು. ಆದ್ರೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸದೇ NCR ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಕಾಲೇಜು ಆಡಳಿತ ಮಂಡಳಿಗೂ ದೂರು ನೀಡಲಾಗಿತ್ತು ಎನ್ನಲಾಗಿದೆ. ವಿದ್ಯಾರ್ಥಿನಿಯರಿಂದ ಕ್ರಮಕ್ಕೆ ಒತ್ತಡ ಬಂದ ಹಿನ್ನೆಲೆ ಕಾಲೇಜು ಆಡಳಿತಾಧಿಕಾರಿ ಜಾನ್ಸನ್ ಕುಂದರ್ ನಿಂದ ರಾಜಿನಾಮೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದೂರು ವಾಪಸ್ ಪಡೆಯುವಂತೆ ವಿದ್ಯಾರ್ಥಿನಿಯರಿಗೆ ಜಾನ್ಸನ್ ಕುಂದರ್ ಹಣದ ಆಮಿಷ ಒಡ್ಡಿದ್ದಾನೆ ಎಂದು ಹೇಳಲಾಗಿದೆ. ವಿಡಿಯೋ ರೆಕಾರ್ಡಿಂಗ್, ಆಡಿಯೊ ರೆಕಾರ್ಡಿಂಗ್, ಫೋಟೋಗಳು, ಇನ್ಸ್ಟಾಗ್ರಾಂ ಸಂದೇಶಗಳನ್ನು ಸಹ ನಾಶಪಡಿಸಲು ಕುಂದರ್ ಯತ್ನಿಸಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿಯರ ಮೇಲೆ ಪ್ರತಿ ದೂರು : ವಿದ್ಯಾರ್ಥಿನಿಯರ ಮೇಲೆ ಹಾಗೂ ಅವರ ರಕ್ಷಣೆಗೆ ಮುಂದಾದ ಕಾಲೇಜಿನ ಉದ್ಯೋಗಿಗಳ ಮೇಲೆ ಕಾಲೇಜಿನ ಮಾಜಿ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ಹೆಂಡತಿಯಿಂದ ಕೋಲಾರ ಪೋಲಿಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.