ಬೆಂಗಳೂರು: ಕೊರೊನಾವೈರಸ್ (Coronavirus) ಪಾಸಿಟಿವ್ ಬಂದಿದೆ ಎಂದು ಕಲಬುರಗಿ ತಾಲೂಕಿನ ಫರತಾಬಾದ್ ನಲ್ಲಿ ಕೊರೊನಾ ಪೀಡಿತ ಕುಟುಂಬಕ್ಕೆ ಅಕ್ಕಪಕ್ಕದವರು ನೀರು ಕೊಡದಿರುವ ಘಟನೆ ನಡೆದಿದೆ.


ಇದನ್ನೂ ಓದಿ: ದೇಶದಲ್ಲೇ ಕೊರೋನಾಗೆ ಮೊದಲ ಬಲಿಯಾಗಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಸೋಂಕು ಪತ್ತೆ


COMMERCIAL BREAK
SCROLL TO CONTINUE READING

ಈ ಇದನ್ನು ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಫರತಾಬಾದ್ PSI ಯಶೋದಾ, ಠಾಣೆಯಿಂದಲೆ ನೀರು ಪೂರೈಕೆ ಭರವಸೆ ನೀಡಿದ್ದಲ್ಲದೆ ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ,ಯಾರನ್ನು ಕೀಳರಿಮೆಯಿಂದ ನೋಡದಿರಿ ಎಂದು ನೆರೆಹೊರೆಯವರಿಗೆ ಬುದ್ದಿವಾದ ಹೇಳಿದ್ದಾರೆ.ಈಗ ಈ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.


PSI ಯಶೋದಾ ಅವರ ಈ ನಡೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಉಳಿದವರೂ ಕೂಡ ನಿಮ್ಮ ಮಾರ್ಗವನ್ನು ಅನುಸರಿಸಲಿ ಎಂದು ಹಲವರು ಹಾರೈಸಿದ್ದಾರೆ.