Ram Mandir: ಸಿದ್ದರಾಮಯ್ಯ ತವರಿನಲ್ಲಿ ಕಟ್ಟುತ್ತಿರುವ `ರಾಮ ಮಂದಿರ` ಹೇಗಿದೆ ಗೊತ್ತಾ?
ಆ ಮಂದಿರದ ವಿಶೇಷತೆಗಳು ಏನೆಲ್ಲಾ? ಮಂದಿರ ಲೋಕಾರ್ಪಣೆ ಯಾವಾಗ? ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೈಸೂರು: ರಾಮ ಮಂದಿರ ನಿಧಿ ಸಂಗ್ರಹದ ಲೆಕ್ಕ ಕೇಳಿ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬಳಿಕ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಅಷ್ಟಕ್ಕೂ ಮಾಜಿ ಸಿಎಂ ತವರಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ(Ram Mandir) ಹೇಗಿಗೆ? ಎಷ್ಟು ರುಪಾಯಿ ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. ಆ ಮಂದಿರದ ವಿಶೇಷತೆಗಳು ಏನೆಲ್ಲಾ? ಮಂದಿರ ಲೋಕಾರ್ಪಣೆ ಯಾವಾಗ? ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
"ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ"
ಸಿದ್ದರಾಮಯ್ಯ(Siddaramaiah)ನವರ ತವರು ಸಿದ್ದರಾಮನಹುಂಡಿಯಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದ್ದು, 120 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.
Heavy Rainfall: ರಾಜ್ಯದಲ್ಲಿ ವರುಣನ ಅಬ್ಬರ: ಉಡುಪಿಯಲ್ಲಿ ಭಾರೀ ಮಳೆ..!
ಇದರ ಗರ್ಭಗುಡಿ 40x60 ಅಡಿ ವಿಶಾಲವಾಗಿದ್ದು, ಪ್ರಾಂಗಣ ಹಾಗೂ ಹೊರಾಂಗಣ ಕಟ್ಟಡಗಳು ಇವೆ. ಗರ್ಭಗುಡಿಯ ಸುತ್ತ 10 ದೇವರುಗಳ ಸ್ಥಾಪನೆಗೆ ಪ್ರಭಾವಳಿಗಳ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣವಾಗಿದೆ. ಏಪ್ರಿಲ್(April) ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
DK Shivakumar: ಕೈ ತೊರೆದು ಕಮಲ ಸೇರಿದವರಿಗೆ ಮರಳಿ ಕಾಂಗ್ರೆಸ್ ಗೆ ಆಹ್ವಾನ ನೀಡಿದ ಡಿಕೆಶಿ!
ನೂತನ ರಾಮ ಮಂದಿದರ ಅಂಗವಾಗಿ ಈ ಭಾರಿ ವಿಜೃಂಭಣೆಯಿಂದ ರಾಮನವಮಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಪ್ರತಿಮನೆಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಹಾಗೂ ಅವರ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರಿಂದ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ.
Siddaramaiah: 'ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ'
ಈ ಹಿಂದೆಯೇ ಇಲ್ಲಿ ಹೆಂಚಿನ ಛಾವಣಿ ಇರುವ ರಾಮಮಂದಿರ ಇತ್ತು . ಶಿಥಿಲವಾದ ರಾಮ ಮಂದಿರವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಯೋಧ್ಯೆ(Ayodhya) ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂದು ಸುದ್ದಿಯಾಗಿದ್ದ ಸಿದ್ದರಾಮಯ್ಯ ಅವರು ಇದೀಗ ಸ್ವಂತ ಊರಲ್ಲಿ ಮಂದಿರ ಕಟ್ಟುತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.