ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮಕ್ಕಳು ಮತ್ತೆ ಶಾಲೆಯ ಕಡೆ ಹೆಜ್ಜೆ ಹಾಕಿದ್ದಾರೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ತರಗತಿಗಳು ಆರಂಭಗೊಂಡಿವೆ. ಸುಮಾರು 8 ತಿಂಗಳ ನಂತರ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥಹ ವಿಚಾರವನ್ನು ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ವಿತರಿಸಿದ್ದ ಬಸ್ ಪಾಸನ್ನೇ (Bus Pass) ಬಳಸಿಕೊಂಡು  ಉಚಿತವಾಗಿ ಪ್ರಯಾಣ ಮಾಡಲು ಬಿಎಂಟಿಸಿ (BMTC) ಅವಕಾಶ ನೀಡಿದೆ. ಮುಂದಿನ ಆದೇಶದವರೆಗೆ ಕಳೆದ ವರ್ಷ ವಿದ್ಯಾರ್ಥಿಗಳಿಗೆ ವಿತರಿಸಿದ್ದ ಸ್ಮಾರ್ಟ್ ಕಾರ್ಡ್ (Smart card) ಪಾಸನ್ನೇ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು. ತಮ್ಮಲ್ಲಿರುವ ಹಳೆಯ ಬಸ್, ಶಾಲೆ ಕಾಲೇಜಿಗೆ ದಾಖಲಾಗಿರುವ ಶುಲ್ಕ ಪಾವತಿಯ ರಶೀದಿ ಮತ್ತು ತಮ್ಮ ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳು  ನಿರ್ವಾಹರಿಗೆ ತೋರಿಸಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.  ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಶಾಲಾ ಕಾಲೇಜಿನವರೆಗೆ  ಹಳೆಯ ಪಾಸ್ ಮೂಲಕವೇ ಪ್ರಯಾಣ ಮಾಡಬಹುದಾಗಿದೆ. 


ALSO READ : ಪ್ರಯಾಣಿಕರಿಗೆ BMTC New Year ಗಿಫ್ಟ್


2020ರ ಫೆಬ್ರವರಿಯಲ್ಲಿ ದೇಶದಲ್ಲಿ ಕರೋನಾ (Coronavirus) ಭೀತಿ ಎದುರಾಗಿದ್ದು, ಲಾಕ್ ಡೌನ್ (Lockdown) ಹೇರಲಾಗಿತ್ತು. ಹಾಗಾಗಿ ಎಲ್ಲಾ  ಶೈಕ್ಷಣಿಕ ಸಂಸ್ಥೆಗಳು ರಜಾ ಘೋಷಿಸಿತ್ತು. ಇದೀಗ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಶಾಲಾ ಕಾಲೇಜು ಪುನರಾರಂಭಕ್ಕೆ ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಇಂದಿನಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ. 


ಈ ಮಧ್ಯೆ, ಮಕ್ಕಳ ಆರೋಗ್ಯ ಶೈಕ್ಷಣಕ ಪ್ರಗತಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಬಹಳ  ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಶಾಲೆ ಆರಂಭದ ನಿರ್ಧಾರ ಕೈಗೊಂಡಿದೆ. ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.  ಕರೋನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ ಎಂದು ಸಚಿವ ಡಾ .ಕೆ ಸುಧಾಕರ್ (Sudhakar) ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G


iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.