ಪ್ರಯಾಣಿಕರಿಗೆ BMTC New Year ಗಿಫ್ಟ್

ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ ಎಸಿ ಬಸ್‌ಗಳ ಟಿಕೆಟ್ ದರ ಕಡಿತಗೊಳಿಸುವುದಾಗಿ ಘೋಷಿಸಿರುವ ಬಿಎಂಟಿಸಿ ಟಿಕೆಟ್ ದರದಲ್ಲಿ ಶೇ.20ರಷ್ಟು ಕಡಿತಗೊಳಿಸಿದೆ. 

Written by - Yashaswini V | Last Updated : Jan 1, 2021, 10:21 AM IST
  • BMTC ಬಸ್‌ಗಳ ಟಿಕೆಟ್‌, ಪಾಸ್‌ ದರಗಳನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಕಡಿಮೆಗೊಳಿಸಿದೆ
  • ದೈನಂದಿನ ಪಾಸ್‌ ದರ 27 ರೂ.ನಷ್ಟು ಕಡಿಮೆ
  • ಇದಲ್ಲದೆ ಮಾಸಿಕ ಪಾಸ್‌ ದರವನ್ನು 363 ರೂ.ವರೆಗೆ ಕಡಿತ
ಪ್ರಯಾಣಿಕರಿಗೆ BMTC New Year ಗಿಫ್ಟ್ title=
BMTC cuts ticket prices for AC buses

ಬೆಂಗಳೂರು: ಸಿಲಿಕಾನ್ ಸಿಟಿಯ ಬಸ್ ಪ್ರಯಾಣಿಕರಿಗಾಗಿ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿರುವ ಬಿಎಂಟಿಸಿ ಇಂದಿನಿಂದ ಎಸಿ ಬಸ್‌ಗಳ ಟಿಕೆಟ್ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಟಿಕೆಟ್‌, ಪಾಸ್‌ ದರಗಳನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಕಡಿಮೆಗೊಳಿಸಿದೆ. ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ ಎಸಿ ಬಸ್‌ಗಳ (AC Bus) ಟಿಕೆಟ್ ದರ ಕಡಿತಗೊಳಿಸುವುದಾಗಿ ಘೋಷಿಸಿರುವ ಬಿಎಂಟಿಸಿ ಟಿಕೆಟ್ ದರದಲ್ಲಿ ಶೇ.20ರಷ್ಟು ಕಡಿತಗೊಳಿಸಿದೆ.  

ಅಷ್ಟೇ ಅಲ್ಲದೆ ದೈನಂದಿನ ಪಾಸ್‌ ದರವನ್ನು 27 ರೂ.ನಷ್ಟು ಕಡಿಮೆ ಮಾಡಿದೆ. ಅಂದರೆ ದೈನಂದಿನ ಪಾಸ್ ದರವನ್ನು ಬಿಎಂಟಿಸಿ 147 ರೂ. ಗಳಿಂದ 120 ರೂ.ಗಳಿಗೆ ಇಳಿಸಲಾಗಿದೆ. 

ಇದನ್ನೂ ಓದಿ : ಅಂಗವಿಕಲ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ : ಅರ್ಜಿ ಆಹ್ವಾನ

ಇದಲ್ಲದೆ ಮಾಸಿಕ ಪಾಸ್‌ ದರವನ್ನು 363 ರೂ.ವರೆಗೆ ಕಡಿತಗೊಳಿಸಿದೆ. ವೋಲ್ವೊ ಮಾಸಿಕ ಬಸ್‌ ಪಾಸ್‌ನ ಪ್ರಸ್ತುತ ದರವು ಜಿಎಸ್‌ಟಿ (GST) ಸೇರಿದಂತೆ 2363 ರೂ. ಇದೆ. ಆದರೆ ಇಂದಿನಿಂದ ಈ ದರವನ್ನು 2000 ರೂ.ಗಳಿಗೆ ಇಳಿಸಲಾಗಿದೆ. ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು 5 ರೂ. ನಿಂದ 20 ರೂ.ವರೆಗೆ ಕಡಿಮೆ ಮಾಡಲಾಗಿದೆ.  ಇದರೊಂದಿಗೆ ಮಾಸಿಕ ಪಾಸ್ ಹೊಂದಿರುವವರು ಭಾನುವಾರವೂ ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ  ಸಾಮಾನ್ಯ, ವಾಯುವಜ್ರ ಬಸ್ (BUS) ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.  

ಇದನ್ನೂ ಓದಿ : School-College Open: ಇಂದಿನಿಂದ ಶಾಲಾ-ಕಾಲೇಜುಗಳು ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News