ಮೃತಪಟ್ಟ 30 ವರ್ಷದ ಬಳಿಕ ಆತ್ಮಗಳಿಗೆ ಮದುವೆ ಮಾಡಿದ ಕುಟುಂಬ!
ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಭಿನ್ನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತದೆ. ಹುಟ್ಟಿದ ಕೂಡಲೇ ಸಾವನ್ನಪ್ಪಿದ ಶೋಭಾ ಮತ್ತು ಚಂದಪ್ಪ ಎಂಬುವರಿಗೆ ಮದುವೆ ಮಾಡಿಸಲಾಗಿದೆ. ಈ ಬಗ್ಗೆ ಯೂಟ್ಯೂಬರ್ ಅನ್ನಿ ಅರುಣ್ ಎಂಬವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ನಿಧನವಾಗಿ ಮೂವತ್ತು ವರ್ಷ ಕಳೆದ ಬಳಿಕ ಕುಟುಂಬಗಳು ಸೇರಿ ಆತ್ಮಗಳಿಗೆ ಮದುವೆ ಮಾಡಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇದು ಕೇಳೋದಕ್ಕೆ ವಿಚಿತ್ರವಾಗಿದ್ದರೂ ಸಹ ಆತ್ಮಗಳ ಮೋಕ್ಷಕ್ಕಾಗಿ ನಡೆಸುವ ವಿಭಿನ್ನ ಸಂಪ್ರದಾಯವಾಗಿದೆ.
ದಕ್ಷಿಣ ಕನ್ನಡ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಈ ವಿಭಿನ್ನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತದೆ. ಹುಟ್ಟಿದ ಕೂಡಲೇ ಸಾವನ್ನಪ್ಪಿದ ಶೋಭಾ ಮತ್ತು ಚಂದಪ್ಪ ಎಂಬುವರಿಗೆ ಮದುವೆ ಮಾಡಿಸಲಾಗಿದೆ. ಈ ಬಗ್ಗೆ ಯೂಟ್ಯೂಬರ್ ಅನ್ನಿ ಅರುಣ್ ಎಂಬವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Paperless Banking: ಬ್ಯಾಂಕ್‌ಗಳಲ್ಲಿ ‘ಪೇಪರ್’ ಬಳಕೆ ಬಂದ್, ‘ಇ-ರಶೀದಿ ನೀಡುವಂತೆ RBI ಆದೇಶ
"ನಾನು ಇಂದು ಮದುವೆಗೆ ಹೋಗುತ್ತಿದ್ದೇನೆ. ಈ ವಿಷಯ ಟ್ವೀಟ್‌ಗೆ ಏಕೆ ಅರ್ಹವಾಗಿದೆ ಎಂದು ನೀವು ಕೇಳಬಹುದು. ಈ ಮದುವೆಯ ವಧು ವರ ಸುಮಾರು 30 ವರ್ಷಗಳ ಹಿಂದೆಯೇ ಸತ್ತಿದ್ದಾರೆ. ಅವರಿಗೆ ಇಂದು ವಿವಾಹ ಮಾಡಲಾಗುತ್ತಿದೆ. ದಕ್ಷಿಣ ಕನ್ನಡದ ಸಂಪ್ರದಾಯಗಳಿಗೆ ಒಗ್ಗಿಕೊಳ್ಳದವರಿಗೆ ಇದು ತಮಾಷೆ ಎನಿಸಬಹುದು" ಎಂದಿದ್ದಾರೆ.
ಚಿಕನ್ ಸುಕ್ಕ, ಕಡ್ಲೆ ಬಲ್ಯಾರ್ ಖಾದ್ಯಗಳನ್ನು ಒಳಗೊಂಡಿತ್ತು. ಇನ್ನು ಮದುವೆಯಾದ ಬಳಿಕ ಜೋಡಿ ದೇವರ ಆಶೀರ್ವಾದ ಪಡೆಯಲು ಮನೆಯಿಂದ ಹೊರ ಹೋಗುತ್ತಾರೆ. ಅವರು ಸಂತೋಷದಿಂದ ಇರುತ್ತಾರೆ ಎಂದು ಈ ಕಲ್ಯಾಣದ ನಂಬಿಕೆ.
ಏನಿದು ಆತ್ಮಗಳ ಮದುವೆ:
ದಕ್ಷಿಣ ಕನ್ನಡ ಎಂದಾಕ್ಷಣ ನೆನಪಾಗುವುದು ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ಮೇಲಿನ ಅಪಾರ ನಂಬಿಕೆ ಹೊಂದಿರುವ ಜನರು. ಇಲ್ಲಿನ ಪದ್ಧತಿ ಇತರರಿಗೆ ಹೋಲಿಸಿದರೆ ಕೊಂಚ ವಿಭಿನ್ನವಾಗಿರುತ್ತದೆ. ಈ ಭಾಗದಲ್ಲಿ ಮೃತಪಟ್ಟವರ ಆತ್ಮಕ್ಕೆ ಮೋಕ್ಷ ಕಲ್ಪಿಸುವ ಸಲುವಾಗಿ ಪ್ರೇತ ಕಲ್ಯಾಣವನ್ನು ಮಾಡಲಾಗುತ್ತದೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಅವರು ಇತರ ಶುಭ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡುತ್ತಾರೆ. ಹೀಗಾಗಿ ಸಂಪ್ರದಾಯಬದ್ಧವಾಗಿ, ಇಲ್ಲಿನ ಜನರು ಪ್ರೇತಗಳಿಗೆ ವಿವಾಹ ಮಾಡುತ್ತಾರೆ. ಸಾಮಾನ್ಯವಾಗಿ ಮದುವೆಯಲ್ಲಿ ಯಾವೆಲ್ಲಾ ಪ್ರಕ್ರಿಯೆಗಳಿವೆಯೋ ಅವೆಲ್ಲವೂ ಆತ್ಮಗಳ ವಿವಾಹದಲ್ಲಿರುತ್ತದೆ.
Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದಂದು ಭಾರತದ ವೇಳಾಪಟ್ಟಿ ಹೀಗಿದೆ
ಹೀಗೆ ಆತ್ಮಗಳಿಗೆ ಮದುವೆ ಮಾಡುವುದರಿಂದ ಪ್ರೇತಾತ್ಮಗಳು ಸಂಸಾರ ಕಟ್ಟಿಕೊಂಡು ಇತರರಿಗೆ ಸಮಸ್ಯೆ ನೀಡದೆ ಜೀವನ ನಡೆಸುತ್ತವೆ ಎಂಬುದು ಕರಾವಳಿ ಜನರ ಬಲವಾದ ನಂಬಿಕೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.