Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದಂದು ಭಾರತದ ವೇಳಾಪಟ್ಟಿ ಹೀಗಿದೆ

14 ವರ್ಷದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್, ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿದ್ದಾರೆ. ಭಾರತ ಮಹಿಳಾ ಟೇಬಲ್ ಟೆನ್ನಿಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದ ಜಯ ದಾಖಲಿಸಿತು. ಎರಡನೇ ದಿನದಲ್ಲಿ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ತಮ್ಮ ಆಟ ಪ್ರದರ್ಶಿಸಲಿದ್ದು, ಭಾರತಕ್ಕೆ ಪದಕ ಲಭಿಸುವ ಸಾಧ್ಯತೆಯಿದೆ. 

Written by - Bhavishya Shetty | Last Updated : Jul 30, 2022, 11:04 AM IST
  • ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದ ಪೂರ್ಣ ಭಾರತದ ವೇಳಾಪಟ್ಟಿ ಇಲ್ಲಿದೆ
  • ಜುಲೈ 29 ರಂದು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತ್ತು
  • ಇಂದು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಪದಕ ತರುವ ಸಾಧ್ಯತೆ
Commonwealth Games 2022: ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದಂದು ಭಾರತದ ವೇಳಾಪಟ್ಟಿ ಹೀಗಿದೆ title=
CWG 2022

Commonwealth Games 2022: ಜುಲೈ 29 ರಂದು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಮೊದಲ ದಿನವೇ ಭಾರತೀಯ ಕ್ರೀಡಾಪಟುಗಳು ಅದ್ಭುತ ಆಟವನ್ನಾಡಿದ್ದು, ಮಹಿಳೆಯರ ಹಾಕಿ ತಂಡ, ಬ್ಯಾಡ್ಮಿಂಟನ್‌, ಈಜು ಸ್ಪರ್ಧೆ ಸೇರಿ ಅನೇಕ ಪಂದ್ಯಗಳಲ್ಲಿ ಸಾಧನೆ ತೋರಿದ್ದಾರೆ. ಇನ್ನು ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ತಮ್ಮ ಅದ್ಭುತ ಆಟ ಪ್ರದರ್ಶಿಸಿದ ಕಾರಣ ಪಾಕಿಸ್ತಾನ ತಂಡವನ್ನು 5-0 ಅಂತರದಿಂದ ಗೆದ್ದುಕೊಂಡಿದೆ. ಮತ್ತೊಂದೆಡೆ, ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಲ್ಪ ಮೊತ್ತಕ್ಕೆ ಬಂದ ಭಾರತೀಯ ಮಹಿಳಾ ಕ್ರಿಕೆಟ್ ನಿರಾಶಾದಾಯಕ ಫಲಿತಾಂಶವನ್ನು ಅನುಭವಿಸಿತ್ತು. 

ಇದನ್ನೂ ಓದಿ: CWG 2022: ಬ್ಯಾಕ್‌ಸ್ಟ್ರೋಕ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಈಜುಗಾರ ಶ್ರೀಹರಿ ನಟರಾಜ್

ಬಾಕ್ಸಿಂಗ್‌ನಲ್ಲಿ ಪುರುಷರ ಸುತ್ತಿನ 32 ಪಂದ್ಯವನ್ನು ಆಡಿದ ಶಿವ ಥಾಪಾ ಪಾಕಿಸ್ತಾನದ ಸುಲೇಮಾನ್ ಬಲೋಚ್ ವಿರುದ್ಧ ಸುಲಭವಾಗಿ ಗೆದ್ದರು. ಭಾರತೀಯ ಮಹಿಳಾ ಹಾಕಿ ತಂಡವು ಅಕ್ವಾಟಿಕ್ಸ್‌ನಲ್ಲಿ ಘಾನಾವನ್ನು ಸಮಗ್ರವಾಗಿ ಸೋಲಿಸಿತು. ಪುರುಷರ 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕುಶಾಗ್ರಾ ರಾವತ್ ಅವರು ಹೀಟ್ 3 ರಲ್ಲಿ ಕೊನೆಯ ಸ್ಥಾನವನ್ನು ಗಳಿಸಿದ ಹೊರಗುಳಿದಿದ್ದಾರೆ. 14 ವರ್ಷದ ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್, ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿದ್ದಾರೆ. ಭಾರತ ಮಹಿಳಾ ಟೇಬಲ್ ಟೆನ್ನಿಸ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದ ಜಯ ದಾಖಲಿಸಿತು. ಎರಡನೇ ದಿನದಲ್ಲಿ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ತಮ್ಮ ಆಟ ಪ್ರದರ್ಶಿಸಲಿದ್ದು, ಭಾರತಕ್ಕೆ ಪದಕ ಲಭಿಸುವ ಸಾಧ್ಯತೆಯಿದೆ. 

ಕಾಮನ್‌ವೆಲ್ತ್ ಗೇಮ್ಸ್‌ನ 2ನೇ ದಿನದ ಪೂರ್ಣ ಭಾರತದ ವೇಳಾಪಟ್ಟಿ ಇಲ್ಲಿದೆ: 
ಲಾನ್ ಬೌಲ್ಸ್ (1PM IST)- ಪುರುಷರ ಟ್ರಿಪಲ್‌ನಲ್ಲಿ ಭಾರತ; ಮಹಿಳೆಯರ ಸಿಂಗಲ್ಸ್‌ನಲ್ಲಿ ತಾನಿಯಾ ಚೌಧರಿ

ಅಥ್ಲೆಟಿಕ್ಸ್ (1:30PM IST) - ಪುರುಷರ ಮ್ಯಾರಥಾನ್ ಫೈನಲ್‌ನಲ್ಲಿ ನಿತೇಂದ್ರ ಸಿಂಗ್ ರಾವತ್

ಬ್ಯಾಡ್ಮಿಂಟನ್ (1:30PM IST)- ಶ್ರೀಲಂಕಾ ವಿರುದ್ಧ ಭಾರತದ ಮಿಶ್ರ ತಂಡ A ಗುಂಪಿನ ಟೈ

ವೇಟ್‌ಲಿಫ್ಟಿಂಗ್ (1:30PM IST): ವೇಟ್‌ಲಿಫ್ಟಿಂಗ್ - ಪುರುಷರ 55k ವಿಭಾಗದಲ್ಲಿ ಸಂಕೇತ್ ಮಹಾದೇವ್ ಸರ್ಗರ್; ಗುರುರಾಜ ಪುರುಷರ 61 ಕೆ.ಜಿ

ಟೇಬಲ್ ಟೆನಿಸ್ (ಮಧ್ಯಾಹ್ನ 2:00): ಟೇಬಲ್ ಟೆನಿಸ್ - ಮಹಿಳಾ ತಂಡ ಗುಂಪು 2 ರಲ್ಲಿ ಭಾರತ vs ಗಯಾನಾ; ಪುರುಷರ ತಂಡ vs ಉತ್ತರ ಐರ್ಲೆಂಡ್

ಸೈಕ್ಲಿಂಗ್ (2:30PM): ಸೈಕ್ಲಿಂಗ್ - ಮಹಿಳೆಯರ ಸ್ಪ್ರಿಂಟ್ ಅರ್ಹತೆಯಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್. ಮಹಿಳೆಯರ 3000 ಮೀ ವೈಯಕ್ತಿಕ ಪರ್ಸ್ಯೂಟ್ ಅರ್ಹತಾ ಸುತ್ತಿನಲ್ಲಿ ಮೀನಾಕ್ಷಿ, ಪುರುಷರ 4000 ಮೀ ವೈಯಕ್ತಿಕ ಪರ್ಸ್ಯೂಟ್ ಅರ್ಹತೆಯಲ್ಲಿ ದಿನೇಶ್ ಕುಮಾರ್ ಮತ್ತು ವಿಶ್ವಜೀತ್ ಸಿಂಗ್

ಈಜು (3:00PM) - 200 ಮೀ ಫ್ರೀಸ್ಟೈಲ್ ಹೀಟ್ 3 ರಲ್ಲಿ ಕುಶಾಗ್ರಾ ರಾವತ್

ಬಾಕ್ಸಿಂಗ್ (ಸಂಜೆ 4:30 IST) - 54-57 ಕೆಜಿ ತೂಕ ವಿಭಾಗದಲ್ಲಿ ಹುಸ್ಸನ್‌ಮುದ್ದೀನ್ ಮೊಹಮ್ಮದ್ (IND) ವಿರುದ್ಧ ಅಮ್ಜೋಲಿ (SA) (32 ರ ಸುತ್ತು)

ಸ್ಕ್ವಾಷ್ (4:30PM IST) - 32 ರ ಪುರುಷರ ಸಿಂಗಲ್ಸ್ ಸುತ್ತಿನಲ್ಲಿ ರಮಿತ್ ಟಂಡನ್ ಮತ್ತು ಸೌರವ್ ಘೋಸಲ್; 32 ರ ಮಹಿಳೆಯರ ಸಿಂಗಲ್ಸ್ ಸುತ್ತಿನಲ್ಲಿ ಜೋಷ್ನಾ ಚಿನಪ್ಪ ಮತ್ತು ಸುನಯ್ನಾ ಸಾರಾ ಕುರುವಿಲ್ಲಾ.

ವೇಯ್‌ಲಿಫ್ಟಿಂಗ್ (8PM)- ಮಹಿಳೆಯರ 55 ಕೆಜಿ ವಿಭಾಗದಲ್ಲಿ ಸಾಯಿಖೋಮ್ ಮೀರಾಬಾಯಿ ಚಾನು

ಸೈಕ್ಲಿಂಗ್ (8:30PM IST) - ಪುರುಷರ ಕೀರಿನ್ ಮೊದಲ ಸುತ್ತಿನಲ್ಲಿ ಎಸೊವ್ ಅಲ್ಬೆನ್

ಟೇಬಲ್ ಟೆನಿಸ್ (8:30PM IST) - ಪುರುಷರ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ವಿರುದ್ಧ ನಾರ್ತ್‌ ಐಲ್ಯಾಂಡ್‌

ಜಿಮ್ನಾಸ್ಟಿಕ್ಸ್ (PM 9PM IST)- ಮಹಿಳಾ ತಂಡದ ಫೈನಲ್ ಮತ್ತು ವೈಯಕ್ತಿಕ ಅರ್ಹತಾ ಉಪವಿಭಾಗ 3 ರಲ್ಲಿ ಪ್ರಣತಿ ನಾಯಕ್, ರುತುಜಾ ನಟರಾಜ್ ಮತ್ತು ಪ್ರತಿಷ್ಟಾ ಸಮಂತಾ

ಬಾಕ್ಸಿಂಗ್ (11PM IST)- 70 ಕೆಜಿ ವಿಭಾಗದ 1 ರ ರೌಂಡ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ವಿರುದ್ಧ ಎನ್ ಏರಿಯಾನ್

ಬ್ಯಾಡ್ಮಿಂಟನ್ (PM 11:30PM IST)- ಭಾರತದ ವಿರುದ್ಧ ಆಸ್ಟ್ರೇಲಿಯಾ (ಮಿಶ್ರ ತಂಡ A ಗುಂಪಿನ ಟೈ)

ಹಾಕಿ (11:30PM IST) - ಮಹಿಳೆಯರ ಪೂಲ್ A ನಲ್ಲಿ ಭಾರತ vs ವೇಲ್ಸ್

ಬಾಕ್ಸಿಂಗ್ (1:15AM IST) - ರೌಂಡ್ 1 ರ 92 ಕೆಜಿ ವಿಭಾಗದಲ್ಲಿ ಸಂಜೀತ್ ವಿರುದ್ಧ ಪಿಎಫ್‌ ಅಟೊ ಲೆಯು

ಇದನ್ನೂ ಓದಿ: Commonwealth Games 2022: ಘಾನಾ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡದ ಅದ್ಭುತ ಗೆಲುವು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News