ಬರ್ಮಿಂಗ್‌ಹ್ಯಾಮ್: ಭಾರತದ ಈಜುಪಟು ಶ್ರೀಹರಿ ನಟರಾಜ್ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನ ಸೆಮಿಫೈನಲ್‌ನಲ್ಲಿ 54:55 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಇನ್ನು ನಾಳೆ ನಡೆಯಲಿರುವ ಪದಕ ಸ್ಪರ್ಧೆಯಲ್ಲಿ ದೇಶಕ್ಕೆ ಪದಕ ಗೆಲ್ಲುವ ತವಕದಲ್ಲಿದ್ದಾರೆ ಶ್ರೀಹರಿ.
ದಕ್ಷಿಣ ಆಫ್ರಿಕಾದ ಪೀಟರ್ ಕೊಯೆಟ್ಜೆ ಅವರು ಎರಡೂ ಸೆಮಿ-ಫೈನಲ್‌ಗಳಲ್ಲಿ 53.67 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!
2010ರಲ್ಲಿ ದೆಹಲಿ ಸಿಡಬ್ಲ್ಯೂಜಿಯಲ್ಲಿ ನಡೆದ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಪ್ರಶಾಂತ ಕರ್ಮಾಕರ್ ಅವರು ಐತಿಹಾಸಿಕ ಕಂಚಿನ ಪದಕ ಪಡೆದ ನಂತರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಈಜುಗಾರನಾಗುವತ್ತ ಬೆಂಗಳೂರಿನ ಹುಡುಗ ಈಗ ತನ್ನ ದೃಷ್ಟಿಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಶಾಂತಿ ಸಭೆ: ನಗರದಲ್ಲಿ ಸೆಕ್ಷನ್ 144 ವಿಸ್ತರಣೆ
ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಟರಾಜ್ ಎ ಹೀಟ್‌ನಲ್ಲಿ ಈಜಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಯುವ ಈಜುಗಾರ ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 27 ನೇ ಸ್ಥಾನದಲ್ಲಿದ್ದ ಶ್ರೀಹರಿ 54:31 ಸೆಕೆಂಡ್‌ಗಳಲ್ಲಿ ಗುರಿಯನ್ನು ಪೂರ್ಣಗೊಳಿಸಿದ್ದರು.
ಇನ್ನೊಂದೆಡೆ ಕಳೆದ ದಿನ ನಡೆದ ಮಹಿಳಾ ಹಾಕಿ ಪಂದ್ಯದಲ್ಲಿ ಘಾನಾ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಕ್ರೀಡಾಕೂಟದ ಮೊದಲ ದಿನದಂದು ಭಾರತೀಯ ಮಹಿಳಾ ಹಾಕಿ ತಂಡ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿಯೇ ಭಾರತೀಯ ಮಹಿಳಾ ತಂಡ ಘಾನಾ ಮಹಿಳಾ ಹಾಕಿ ತಂಡವನ್ನು 5-0 ಅಂತರದಿಂದ ಸೋಲಿಸಿದೆ. ಭಾರತೀಯ ತಂಡದ ಪರವಾಗಿ ಗುರ್ಜೀತ್ ಕೌರ್ ಅತಿ ಹೆಚ್ಚು ಅಂದರೆ ಎರಡು ಗೋಲ್ ಬಾರಿಸಿದ್ದರು. ಇನ್ನೊಂದೆಡೆ ನೇಹಾ ಗೋಯಲ್, ಸಂಗೀತಾ ಕುಮಾರಿ ಹಾಗೂ ಸಲೀಮಾ ಟೆಟೆ ಕೂಡ ತಲಾ ಒಂದೊಂದು ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.