ಬೆಂಗಳೂರು: ನಗರ ಪೊಲೀಸ್ ವಿಭಾಗದಲ್ಲಿ ಡಿಸಿಪಿಯೊಬ್ಬರ ಮೇಲೆ ಎರಡನೇ ಬಾರಿ ಕೆಳಹಂತದ ಅಧಿಕಾರಿ, ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಧಾನಸೌಧ ಭದ್ರತಾ ವಿಭಾಗದ ಸಿಬ್ಬಂದಿಗೆ ಭದ್ರತೆ ಇಲ್ಲದಂತಾಗಿದ್ದು, ದಯಾ ಮರಣ ಕೋರಿ ಡಿಸಿಪಿ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ಅವರ ವಿರುದ್ಧ ಅಧಿಕಾರಿ, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಇದೇ ಡಿಸಿಪಿ ವಿರುದ್ಧ ಜೂನ್‌ನಲ್ಲಿ ಕಾರು ಚಾಲಕನೇ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದರು. ಇದೀಗ ಮತ್ತೆ ಅಧಿಕಾರಿ ಸಿಬ್ಬಂದಿ ಹೆಸರಲ್ಲಿ ಯಾವುದೇ ಸಹಿ ಇಲ್ಲದೇ ದಯಾಮರಣ ಕೋರಿ ರಾಷ್ಟ್ರಪತಿಗೆ ಬರೆದಿರುವ ಅರ್ಜಿ ಎಲ್ಲೆಡೆ ವೈರಲ್ ಆಗಿದೆ. 


ಇದನ್ನೂ ಓದಿ: ಮತ್ತೆ ಮುಷ್ಕರಕ್ಕೆ ಸಜ್ಜಾದ ಸಾರಿಗೆ ನೌಕರರು; ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ..?


ಸಶಸ್ತ್ರ ಮೀಸಲು ಪಡೆ ವಿಭಾಗದಿಂದ ಬಂದಿರುವ ಅಶೋಕ ರಾಮಪ್ಪ, 3 ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಿವಿಲ್ ಪೊಲೀಸರ ಮೇಲೆ ಪ್ರತಿ ಹಂತದಲ್ಲಿ ಕಿರಿಕಿರಿ ಉಂಟು ಮಾಡಿ ಸಣ್ಣ ವಿಚಾರಕ್ಕೂ ರೂಲ್ ನಂ.7 ನಂತ ನೋಟೀಸ್ ಕೊಟ್ಟು ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರೂಲ್ ನಂ.7 ಕೊಟ್ಟಿರುವ ಡಿಸಿಪಿ ಎಂಬ ಕುಖ್ಯಾತಿ ಇವರ ಮೇಲಿದೆ ಎಂದು ಪತ್ರದಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರು ಅಸಮಧಾನ ವ್ಯಕ್ತಪಡಿಸಿದ್ದಾರೆ.


ವಾರದ ರಜೆ ಕೊಡಲು ನಿರಾಕರಿಸುತ್ತಾರೆ. ಕೆಲ ತಿಂಗಳ ಹಿಂದೆ ಪೊಲೀಸ್ ಒಬ್ಬರ ಪತ್ನಿಗೆ ಹೆರಿಗೆ ಸಮಯದಲ್ಲಿ ಮಗು ಅಸುನೀಗಿದರೂ ಸಹ ರಜೆ ಕೊಡದೆ ಡ್ಯೂಟಿಗೆ ಬರುವಂತೆ ತಾಕೀತು ಮಾಡಿದ್ದರು. ಅಷ್ಟೇ ಅಲ್ಲೆದೆ ಇತ್ತಿಚೇಗೆ ನಿಧನರಾದ ಇನ್ಸ್ ಪೆಕ್ಟರ್ ಧನಂಜಯ ಸಾವಿಗೂ ಇದೇ ಡಿಸಿಪಿ ಪರೋಕ್ಷ ಕಾರಣ. ಧನಂಜಯ್ ಗೆ ಚಿಕಿತ್ಸೆ ಪಡೆಯಲು ಸೂಕ್ತ ಸಮಯದಲ್ಲಿ ಸ್ಪಂದಿಸದೆ ಮಾನಸಿಕ ಹಿಂಸೆಗೆ ಒಳಗಾಗುವಂತೆ ಮಾಡಿದರು ಎಂದು ಗಂಭೀರ ಆರೋಪಿಸಿದ್ದಾರೆ.


ಇದನ್ನೂ ಓದಿ: ಜಮೀರ್ ಕ್ಷೇತ್ರತ್ಯಾಗ; ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ?


ಇನ್ನೂ ಭಾರತೀಯ ಸೇವೆಯಿಂದ ನಿವೃತ್ತಿಯಾಗಿ ಪೊಲೀಸ್ ಸೇವೆಗೆ ಸೇರಿರುವ ಮಾಜಿ ಸೈನಿಕನಿಗೆ ಗೌರವ ಕೊಡದೆ ಕೇವಲ ತಮ್ಮ ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ವಿಧಾನಸೌಧದ ಮೇಲೆ ಕೇರಳ ಮೂಲದ ಯುವಕರು ದ್ರೋಣ್ ಕ್ಯಾಮರಾ ಹಾರಾಟ ಮಾಡಿದಾಗ ಕೇಸ್ ಮುಚ್ಚಿ ಹಾಕಿದರು. ಎಲ್ಲಿ ಠಾಣೆಗೆ ದೂರು ಕೊಟ್ಟರೇ ತನ್ನ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಮುಚ್ಚಿದ್ದಾರೆ. ವಿಷಯ ಬಹಿರಂಗ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು 4 ಪುಟಗಳಲ್ಲಿ ಆರೋಪಗಳನ್ನು ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.