Viral Video: ಮುದ್ದಾಡಲು ಹೋದಾತನ ಕುತ್ತಿಗೆಗೆ ಸುತ್ತು ಹಾಕಿಕೊಂಡ ಹೆಬ್ಬಾವು: ಮುಂದೇನಾಯ್ತು!! ವಿಡಿಯೋ ನೋಡಿ

Python Viral video: ಇದೀಗ ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಹೆಬ್ಬಾವು ಮತ್ತು ವ್ಯಕ್ತಿಯ ಮಧ್ಯೆ ನಡೆಯುತ್ತಿರುವ ಭೀಕರ ಸೆಣಸಾಟ ಎಂದೇ ಹೇಳಬಹುದು. ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ. ಹೆಬ್ಬಾವು ಕೋಪದಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದೆ.  

Written by - Bhavishya Shetty | Last Updated : Dec 17, 2022, 11:49 AM IST
    • ಹಾವುಗಳ ಜೊತೆ ಸರಸವಾಡಿ ಪ್ರಾಣಕ್ಕೆ ಅಪಾಯ ತಂದುಕೊಂಡಿರುವ ವಿಡಿಯೋ
    • ಕೆಲವೊಮ್ಮೆ ಈ ಜೀವಿಗಳು ಸ್ಥಳದಲ್ಲೇ ತನ್ನ ಕೋಪವನ್ನು ಪ್ರದರ್ಶಿಸಿ ಸೇಡು ತೀರಿಸಿಕೊಳ್ಳುತ್ತವೆ
    • ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
Viral Video: ಮುದ್ದಾಡಲು ಹೋದಾತನ ಕುತ್ತಿಗೆಗೆ ಸುತ್ತು ಹಾಕಿಕೊಂಡ ಹೆಬ್ಬಾವು: ಮುಂದೇನಾಯ್ತು!! ವಿಡಿಯೋ ನೋಡಿ title=
Python

Viral video: ಅನೇಕ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಬೆಚ್ಚಿ ಬೀಳಿಸುವಂತಹ ವಿಡಿಯೋಗಳನ್ನು ನಾವು ಕಂಡಿರುತ್ತೇವೆ. ಹಾವುಗಳ ಜೊತೆ ಸರಸವಾಡಿ ಪ್ರಾಣಕ್ಕೆ ಅಪಾಯ ತಂದುಕೊಂಡಿರುವ ವಿಡಿಯೋ ನಾವೆಲ್ಲರೂ ನೋಡಿದ್ದೇವೆ. ಕೆಲವರು ಹಾವುಗಳಂತಹ ವಿಷಕಾರಿ ಜೀವಿಗಳೊಂದಿಗೆ ಆಟವಾಡಲು ಸಹ ಹೋಗುತ್ತಾರೆ. ಆದರೆ ಕೆಲವೊಮ್ಮೆ ಈ ಜೀವಿಗಳು ಸ್ಥಳದಲ್ಲೇ ತನ್ನ ಕೋಪವನ್ನು ಪ್ರದರ್ಶಿಸಿ ಸೇಡು ತೀರಿಸಿಕೊಳ್ಳುತ್ತವೆ.

ಇದನ್ನೂ ಓದಿ: Born With Four Legs : ನಾಲ್ಕು ಕಾಲಿನ ಮಗು ಜನನ! ಶಿಶು ನೋಡಲು ನೆರೆದ ಜನ

ಇದೀಗ ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಹೆಬ್ಬಾವು ಮತ್ತು ವ್ಯಕ್ತಿಯ ಮಧ್ಯೆ ನಡೆಯುತ್ತಿರುವ ಭೀಕರ ಸೆಣಸಾಟ ಎಂದೇ ಹೇಳಬಹುದು. ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ. ಹೆಬ್ಬಾವು ಕೋಪದಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದೆ.  

ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏನನ್ನೂ ಯೋಚಿಸದೆ ಹೆಬ್ಬಾವಿನ ಬಳಿ ಕುಳಿತುಕೊಂಡು ಅದರ ಜೊತೆ ಕಾಲ ಕಳೆಯುತ್ತಿರುವುದನ್ನು ಕಾಣಬಹುದು. ಅದೇ ಸಂದರ್ಭದಲ್ಲಿ ಹೆಬ್ಬಾವು ಅವನ ಮೇಲೆ ದಾಳಿ ನಡೆಸಿ ಕುತ್ತಿಗೆಗೆ ಸುತ್ತು ಹಾಕಿಕೊಳ್ಳಲು ಮುಂದಾಗುತ್ತದೆ.

 
 
 
 

 
 
 
 
 
 
 
 
 
 
 

A post shared by @laris_a9393

 

 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹೆಬ್ಬಾವಿನ ಜೊತೆ ಆಟವಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ಹೆಬ್ಬಾವಿನ ಜೊತೆ ಆಟವಾಡಲು ತೆರಳಿದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಹೆಬ್ಬಾವು ಎಷ್ಟೇ ಪ್ರಯತ್ನ ಪಟ್ಟರೂ ಬಿಡುವುದಿಲ್ಲ. ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲೇ ವ್ಯಕ್ತಿ ಜೋರಾಗಿ ಕೂಗಾಡ ತೊಡಗಿದ್ದಾನೆ. ಆತನನ್ನು ರಕ್ಷಿಸಲು ಅಲ್ಲಿಯೇ ಇದ್ದ ಜನರು ಆಗಮಿಸಿದ್ದಾರೆ. ಆದರೆ ಅದಾಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು.

ಇದನ್ನೂ ಓದಿ: Viral Video: ನಾಯಿಗಳಿಂದ ಮಗುವಿನ ಪ್ರಾಣ ರಕ್ಷಿಸುತ್ತಿರುವ ತಾಯಿ ಕೋತಿ, ವಿಡಿಯೋ ತಯಾರಕನ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು

ಏನನ್ನೂ ಯೋಚಿಸದೆ ಹಾವಿನಂತಹ ಜೀವಿಗಳೊಂದಿಗೆ ಆಟವಾಡಲು ಹೋಗುವವರಿಗ ಈ ವೀಡಿಯೊ ಒಂದು ಪಾಠದಂತಿದೆ. ಈ ವಿಡಿಯೋಗೆ ನೆಟಿಜನ್‌ಗಳ ಪ್ರತಿಕ್ರಿಯೆಗಳೂ ಬರಲಾರಂಭಿಸಿವೆ. ಈ ವೀಡಿಯೊವನ್ನು laris_a9393andwild.tough ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News