ಜಮೀರ್ ಕ್ಷೇತ್ರತ್ಯಾಗ; ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ?

ಮಂಡ್ಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಶಾಸಕ ಜಮೀರ್ ಅಹ್ಮದ್, ‘ಸಿದ್ದರಾಮಯ್ಯನವರಿಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಸಿದ್ದರಾಮಯ್ಯನವರು ರಾಜಕೀಯದಲ್ಲಿರಬೇಕು, ಹೀಗಾಗಿ ನಾನು ನನ್ನ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುತ್ತೇನೆ ಅಂತಾ ಹೇಳಿದ್ದಾರೆ.

Written by - Puttaraj K Alur | Last Updated : Dec 17, 2022, 11:14 AM IST
  • ಚಾಮರಾಜಪೇಟೆ ಕ್ಷೇತ್ರವನ್ನು ಸಿದ್ದರಾಮಯ್ಯರಿಗಾಗಿ ತ್ಯಾಗ ಮಾಡಲು ನಿರ್ಧರಿಸಿದ ಜಮೀರ್ ಅಹ್ಮದ್
  • ಸಿದ್ದರಾಮಯ್ಯನವರಿಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದ ಕಾಂಗ್ರೆಸ್ ಶಾಸಕ
  • ನಾನು 4ನೇ ಬಾರಿ ಎಂಎಲ್ಎ ಆಗಿದ್ರೂ ಯಾರು ಸಹ ನನ್ನನ್ನು ಅಲ್ಲಾಡಿಸಲು ಸಾಧ್ಯವಾಗಿಲ್ಲ
ಜಮೀರ್ ಕ್ಷೇತ್ರತ್ಯಾಗ; ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ? title=
ಸಿದ್ದರಾಮಯ್ಯಗಾಗಿ ಜಮೀರ್ ಕ್ಷೇತ್ರತ್ಯಾಗ!

ಮಂಡ್ಯ: ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ತ್ಯಾಗ ಮಾಡಲು ನಿರ್ಧರಿಸಿರುವ ಶಾಸಕ ಜಮೀರ್ ಅಹ್ಮದ್, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬಿಟ್ಟುಕೊಡಲು ಮುಂದಾಗಿದ್ದಾರೆಂದು ವರದಿಯಾಗಿದೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದಲೇ ಸಿದ್ದರಾಮಯ್ಯನವರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿರುವ ಶಾಸಕ ಜಮೀರ್ ಅಹ್ಮದ್, ‘ಸಿದ್ದರಾಮಯ್ಯನವರಿಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ’ ಅಂತಾ ಹೇಳಿದ್ದಾರೆ.  ‘ಚಾಮರಾಜಪೇಟೆಯಿಂದ ಸ್ಪರ್ಧಿಸಲು ಸಿದ್ದರಾಮಯ್ಯರನ್ನು ನಾನು  ಒಪ್ಪಿಸುತ್ತಿದ್ದೇನೆ. ಚಾಮರಾಜಪೇಟೆ ಕ್ಷೇತ್ರದಿಂದಲೇ ಸಿದ್ದರಾಮಯ್ಯನವರು ಸ್ಪರ್ಧಿಸಲಿ. ನನಗಿಂತ ರಾಜ್ಯದ ಜನರು ಸಿದ್ದರಾಮಯ್ಯರನ್ನು ಬಯಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೋಸ್ಕರ ಅಲ್ಲದಿದ್ದರೂ ರಾಜ್ಯದ ಜನರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತೇನೆ’ ಅಂತಾ ಜಮೀರ್ ಹೇಳಿದ್ದಾರೆ.

ಇದನ್ನೂ ಓದಿ: 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಟಾಟಾ ಮೋಟರ್ಸ್ ಜೊತೆ ಬಿಎಂಟಿಸಿ ಒಪ್ಪಂದ

‘ಸಿದ್ದರಾಮಯ್ಯನವರು ರಾಜಕೀಯದಲ್ಲಿರಬೇಕು, ಹೀಗಾಗಿ ನಾನು ನನ್ನ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುತ್ತೇನೆ. ನಾನು 4ನೇ ಬಾರಿ ಎಂಎಲ್ಎ ಆಗಿದ್ದು, ಯಾರು ಸಹ ನನ್ನನ್ನು ಅಲ್ಲಾಡಿಸಲು ಆಗಿಲ್ಲ‌. ನನ್ನನ್ನು ಸೋಲಿಸಲು ಬಹಳಷ್ಟು ಪ್ರಯತ್ನ ನಡೆದಿದೆ. ಆದರೆ ಯಾರಿಂದಲೂ ಏನೂ ಮಾಡಲು ಸಾಧ್ಯವಾಗಿಲ್ಲ’ ಅಂತಾ ಜಮೀರ್ ಹೇಳಿದ್ದಾರೆ.

ಜಮೀರ್‍ಗೆ ಅದ್ದೂರಿ ಸ್ವಾಗತ

ಇನ್ನು ಮಂಡ್ಯಕ್ಕೆ ಆಗಮಿಸಿದ ಶಾಸಕ ಜಮೀರ್ ಅಹ್ಮದ್ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಂಡ್ಯದ ಕುವೆಂಪು ನಗರಲ್ಲಿರುವ ಕಾಂಗ್ರೆಸ್ ಕಾರ್ಯಕರ್ತನ ನಿವಾಸಕ್ಕೆ ಜಮೀರ್ ಭೇಟಿ ನೀಡಿದರು. ಈ ವೇಳೆ ಅವರಿಗೆ ಹೂ ಮಳೆಗೈದು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಮಾಜಿ ಮುಡಾ ಅಧ್ಯಕ್ಷ ಶಾಮೀರ್ ಮಗಳ ಮದುವೆಗೆ ಬಾರದ ಹಿನ್ನಲೆ, ಇಂದು ನಿವಾಸಕ್ಕೆ ಭೇಟಿ ನೀಡಿ ನವಜೋಡಿಗೆ ಶಾಸಕ ಜಮೀರ್ ಅಹ್ಮದ್ ಶುಭಕೋರಿದ್ದಾರೆ. ಈ ವೇಳೆ ನಗರಸಭೆ ಸದಸ್ಯ ನಹೀಮ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಿ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: "ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News