Ration Card: ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇದು ಸುಲಭ ಪ್ರಕ್ರಿಯೆ
Ration Card: ಕೈಗೆಟುಕುವ ಬೆಲೆಯಲ್ಲಿ ಪಡಿತರವನ್ನು ಪಡೆಯುವುದು ಮಾತ್ರವಲ್ಲ, ಅನೇಕ ದಾಖಲೆಗಳನ್ನು ತಯಾರಿಸಲು ಸಹ ಪಡಿತರ ಕಾರ್ಡ್ ಅಗತ್ಯವಾಗಿರುತ್ತದೆ.
ಬೆಂಗಳೂರು: Ration Card- ಕೈಗೆಟುಕುವ ಬೆಲೆಯಲ್ಲಿ ಪಡಿತರವನ್ನು ಒದಗಿಸುವುದಲ್ಲದೆ, ಅನೇಕ ದಾಖಲೆಗಳನ್ನು ತಯಾರಿಸಲು ಸಹ ಪಡಿತರ ಕಾರ್ಡ್/ ರೇಷನ್ ಕಾರ್ಡ್ ಅಗತ್ಯವಾಗಿರುತ್ತದೆ. ಕುಟುಂಬದ ಎಲ್ಲ ಸದಸ್ಯರ ಬಗ್ಗೆ ಮಾಹಿತಿ ಇರುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ, ಮನೆಗೆ ಹೊಸದಾಗಿ ಬರುವವರ (ಸೊಸೆ/ಮಗು) ಹೆಸರನ್ನು ಪಡಿತರ ಚೀಟಿಗೆ ಸೇರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಎಲ್ಲೂ ಓಡಾಡುವ ಅಗತ್ಯವಿಲ್ಲ, ನೀವು ಕುಳಿತಲ್ಲಿಯೇ ಸುಲಭವಾಗಿ ಈ ಕೆಲಸ ಮಾಡಬಹುದು.
ನಿಮ್ಮ ಮನೆಗೆ ಬರುವ ಸೊಸೆಯ ಹೆಸರನ್ನು ಈ ರೀತಿ ನಮೂದಿಸಿ:
ಮದುವೆಯ ನಂತರ ಹೊಸ ಸೊಸೆ ಮನೆಗೆ ಬಂದರೆ, ಪಡಿತರ ಚೀಟಿಯಲ್ಲಿ (Ration Card) ಆಕೆಯ ಹೆಸರನ್ನು ಸೇರಿಸಲು, ಮೊದಲನೆಯದಾಗಿ, ಆಧಾರ್ ಕಾರ್ಡ್ ಅನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ, ಮೊದಲು ಹುಡುಗಿ ತನ್ನ ಆಧಾರ್‌ನಲ್ಲಿ ತಂದೆಯ ಬದಲು ಗಂಡನ ಹೆಸರನ್ನು ನಮೂದಿಸಬೇಕಾಗುತ್ತದೆ ಮತ್ತು ವಿಳಾಸವನ್ನು ನವೀಕರಿಸಬೇಕು. ಅದರ ನಂತರ ಪರಿಷ್ಕೃತ ಆಧಾರ್ ಕಾರ್ಡ್‌ನ ಪ್ರತಿ ಜೊತೆಗೆ ಆಹಾರ ಸರಬರಾಜು ಅಧಿಕಾರಿಗೆ ಅರ್ಜಿಯನ್ನು ನೀಡಬೇಕಾಗುತ್ತದೆ.
ಮಗುವಿನ ಹೆಸರು ನೋಂದಣಿ ಪ್ರಕ್ರಿಯೆ:
ಕುಟುಂಬದಲ್ಲಿ ಒಂದು ಮಗು ಜನಿಸಿದರೆ, ಆ ಮಗುವಿನ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಾಯಿಸಿಕೊಳ್ಳಬೇಕಾದರೆ ಮೊದಲು ಮಗುವಿನ ಆಧಾರ್ ಕಾರ್ಡ್ (Aadhaar Card) ಅನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಮಗುವಿನ ಜನನ ಪ್ರಮಾಣಪತ್ರದ ಅಗತ್ಯವಿದೆ. ಆದ್ದರಿಂದ, ಮಗುವಿನ ಜನನ ಪ್ರಮಾಣಪತ್ರವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಅದಕ್ಕೆ ಸಂಬಂಧಿಸಿದ ಬಹಳಷ್ಟು ಕೆಲಸಗಳು ಸ್ಥಗಿತಗೊಳ್ಳಬಹುದು.
ಇದನ್ನೂ ಓದಿ - One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!
ಹೆಸರನ್ನು ಆನ್‌ಲೈನ್‌ನಲ್ಲಿ ಸಹ ಸೇರಿಸಬಹುದು:
ನಿಮ್ಮ ರಾಜ್ಯದಲ್ಲಿ ಈ ಸೌಲಭ್ಯ ಲಭ್ಯವಿದ್ದರೆ, ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಮೊದಲು ನಿಮ್ಮ ರಾಜ್ಯದ ಆಹಾರ ಪೂರೈಕೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ನಿಮ್ಮ ರಾಜ್ಯದ ಸರ್ಕಾರವು ಆನ್‌ಲೈನ್ ಸೌಲಭ್ಯವನ್ನು ನೀಡಿದರೆ, ಹೊಸ ಸದಸ್ಯರ ಹೆಸರನ್ನು ಸೇರಿಸುವುದು ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಅಲ್ಲಿ ನೀವು ಪಡೆಯುತ್ತೀರಿ. ಉದಾಹರಣೆಗೆ, ಕರ್ನಾಟಕದಲ್ಲಿ ಆನ್‌ಲೈನ್ ಸೇವೆಗಾಗಿ, ನೀವು https://ahara.kar.nic.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸದಸ್ಯರ ಹೆಸರನ್ನು ಸೇರಿಸಲು ಆನ್‌ಲೈನ್ ಪ್ರಕ್ರಿಯೆ:
>> ನಿಮ್ಮ ರಾಜ್ಯದ ಆಹಾರ ಪೂರೈಕೆಯ ಅಧಿಕೃತ ತಾಣಕ್ಕೆ ನೀವು ಹೋಗಬೇಕು.
>> ಈಗ ನೀವು ಲಾಗಿನ್ ಐಡಿಯನ್ನು ರಚಿಸಬೇಕು, ನೀವು ಈಗಾಗಲೇ ಐಡಿ ಹೊಂದಿದ್ದರೆ, ಅದರೊಂದಿಗೆ ಲಾಗ್ ಇನ್ ಮಾಡಿ
>> ಮುಖಪುಟದಲ್ಲಿ, ಹೊಸ ಸದಸ್ಯರನ್ನು ಸೇರಿಸುವ ಆಯ್ಕೆ ಕಾಣಿಸುತ್ತದೆ.
>> ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಹೊಸ ಫಾರ್ಮ್ ತೆರೆಯುತ್ತದೆ.
>> ನಿಮ್ಮ ಕುಟುಂಬದ ಹೊಸ ಸದಸ್ಯರ ಎಲ್ಲಾ ಮಾಹಿತಿಯನ್ನು ಇಲ್ಲಿ ಸರಿಯಾಗಿ ಭರ್ತಿ ಮಾಡಿ.
>> ಫಾರ್ಮ್ ಜೊತೆಗೆ, ನೀವು ಅಗತ್ಯವಿರುವ ದಾಖಲೆಗಳ ನಕಲನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.
>> ಫಾರ್ಮ್ ಅನ್ನು ಸಲ್ಲಿಸಿದ ನಂತರ, ಈ ಪೋರ್ಟಲ್ನಲ್ಲಿ ನಿಮ್ಮ ಫಾರ್ಮ್ ಅನ್ನು ಟ್ರ್ಯಾಕ್ ಮಾಡುವ ನೋಂದಣಿ ಸಂಖ್ಯೆಯನ್ನು ನೀವು ಪಡೆಯುತ್ತೀರಿ.
>> ಅಧಿಕಾರಿಗಳು ಫಾರ್ಮ್ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
>> ಎಲ್ಲವೂ ಸರಿಯಾಗಿದ್ದರೆ ನಿಮ್ಮ ಫಾರ್ಮ್ ಅನ್ನು ಸ್ವೀಕರಿಸಲಾಗುತ್ತದೆ ಮತ್ತು ಪಡಿತರ ಚೀಟಿಯನ್ನು ನಿಮಗೆ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.
ಇದನ್ನೂ ಓದಿ - Ration Card : ಪಡಿತರ ಚೀಟಿದಾರರಿಗೊಂದು ಗುಡ್ ನ್ಯೂಸ್..!
ಹೊಸ ಸದಸ್ಯರ ಹೆಸರಿಗಾಗಿ ಆಫ್‌ಲೈನ್ ಪ್ರಕ್ರಿಯೆ:
* ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ನೀವು ಹೋಗಬೇಕು.
* ಈಗ ನಿಮ್ಮೊಂದಿಗೆ ತಿಳಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಳ್ಳಿ.
* ಅಲ್ಲಿ ನೀವು ಹೊಸ ಸದಸ್ಯರ ಹೆಸರನ್ನು ಸೇರಿಸುವ ಫಾರ್ಮ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.
* ಎಲ್ಲಾ ವಿವರ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ.
* ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಇಲಾಖೆಗೆ ಸಲ್ಲಿಸಿ.
* ಇದರೊಂದಿಗೆ ಅರ್ಜಿ ಶುಲ್ಕವನ್ನು ಸಹ ಸಲ್ಲಿಸಬೇಕಾಗುತ್ತದೆ.
* ಫಾರ್ಮ್ ಸಲ್ಲಿಸಿದ ನಂತರ, ಅಧಿಕಾರಿಗಳು ನಿಮಗೆ ರಶೀದಿಯನ್ನು ನೀಡುತ್ತಾರೆ, * ಅದನ್ನು ನೀವು ನಿಮ್ಮೊಂದಿಗೆ ಜೋಪಾನವಾಗಿ ಇಟ್ಟುಕೊಳ್ಳಬೇಕು.
* ಈ ರಶೀದಿಯ ಮೂಲಕ ನೀವು ಆನ್‌ಲೈನ್ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಬಹುದು.
* ಅಧಿಕಾರಿಗಳು ನಿಮ್ಮ ಫಾರ್ಮ್ ಅನ್ನು ಪರಿಶೀಲಿಸುತ್ತಾರೆ ಮತ್ತು ಡಾಕ್ಯುಮೆಂಟ್ ಪರಿಶೀಲನೆಯ ನಂತರ, ನೀವು ಕನಿಷ್ಟ 2 ವಾರಗಳಲ್ಲಿ ಪಡಿತರ ಚೀಟಿ ಪಡೆಯುತ್ತೀರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.