ನವದೆಹಲಿ:  ವಾಸ್ತು ಶಾಸ್ತ್ರವು (Vastu Shastra) ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸೂಚಿಸುತ್ತದೆ. ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗಬೇಕಾದರೆ ಏನು ಮಾಡಬೇಕು. ಮನೆ ಮಂದಿ ಆರೋಗ್ಯ (Health) ಕಾಪಾಡಿಕೊಳ್ಳಲು ಏನು ಉಪಾಯ, ಉದ್ಯೋಗದಲ್ಲಿ ಭಡ್ತಿ ಹೊಂದಬೇಕಾದರೆ ಯಾವ ಕ್ರಮ ಅನುಸರಿಸಬೇಕು ಎಲ್ಲವನ್ನೂ ತಿಳಿಸುತ್ತದೆ. ಅಡುಗೆ ಮನೆಗೆ ಕೆಲವು ನಿಯಮಗಳಿದ್ದರೆ ಆಹಾರ ಸೇವನೆಗೂ ವಾಸ್ತುವಿನಲ್ಲಿ ಶಿಷ್ಟಾಚಾರವಿದೆ. ಅದನ್ನು ತಪ್ಪಿದರೆ ಲಕ್ಷ್ಮೀ (Godess Lakshmi) ಮುನಿಸಿಕೊಳ್ಳುತ್ತಾಳಂತೆ. ಊಟದ ಹೊತ್ತಲ್ಲಿ ಮಾಡುವ ಕೆಲವು ತಪ್ಪುಗಳಿಂದ ದಟ್ಟದಾರಿದ್ರ್ಯ ವಕ್ಕರಿಸಿಕೊಳ್ಳಬಹುದಂತೆ. 


COMMERCIAL BREAK
SCROLL TO CONTINUE READING

ಆಹಾರ ಸೇವನೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ:
1. ಪೂರ್ವ ದಿಕ್ಕನ್ನು (east) ದೇವರ ದಿಕ್ಕು ಪರಿಗಣಿಸಲಾಗುತ್ತದೆ.  ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ, ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕುಳಿತು ಊಟ ಮಾಡಬೇಕಂತೆ. ಅಲ್ಲದೆ, ಉತ್ತರ ದಿಕ್ಕಿಗೆ ಮುಖ ಮಾಡಿಯೂ ಆಹಾರ (Food) ಸೇವಿಸಬಹುದು. ಹೀಗೆ ಮಾಡುವುದರಿಂದ, ರೋಗಗಳು ನಿಮ್ಮ ಸುತ್ತ ಕೂಡಾ  ಬರುವುದಿಲ್ಲವಂತೆ.


ಇದನ್ನೂ ಓದಿ : Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ


2. ಆಹಾರವನ್ನು ಅನ್ನಪೂರ್ಣ ಎಂದು ಪರಿಗಣಿಸಲಾಗುತ್ತದೆ.  ಆದ್ದರಿಂದ ಯಾವತ್ತೂ ಸ್ನಾನದ (Bath) ನಂತರವೇ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.  ಕೈ, ಕಾಲು ಮುಖ ತೊಳೆದ ನಂತರವೇ ಆಹಾರ ಸೇವನೆ ಮಾಡುವುದರಿಂದ  ವ್ಯಕ್ತಿಯ ಆಯುಷ್ಯ ಹೆಚ್ಚುತ್ತದೆಯಂತೆ. 
3. ಯಾವುದೇ ಅಡಿಗೆ ಪಾತ್ರೆ, ತಟ್ಟೆ ಅಥವಾ ಬೌಲ್ ಮುರಿದುಹೋಗಿದ್ದರೆ ಅದನ್ನು ಅಡುಗೆ ಮನೆಯಿಂದ (Kitchen) ಹೊರ ಹಾಕಿ. ಮುರಿದ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸಿ, ಸೇವಿಸುವುದರಿಂದ ಜೀವನದಲ್ಲಿ ದಾರಿದ್ರ್ಯ ಎದುರಾಗುತ್ತದೆಯಂತೆ. 
4. ನಿಮ್ಮ ಹಸಿವು ನೀಗಿಸಲು ಎಷ್ಟು ಆಹಾರ ಬೇಕೋ ಅಷ್ಟನ್ನು ಮಾತ್ರ ತಟ್ಟೆಗೆ ಹಾಕಿಕೊಳ್ಳಿ. ಸುಮ್ಮನೆ ತಟ್ಟೆ ತುಂಬ  ಅನ್ನ (Rice)ಬಡಿಸಿಕೊಂಡು ನಂತರ ಅದನ್ನು ಎಸೆಯಬೇಡಿ. ಅನ್ನವನ್ನು ಎಸೆಯುವುದು ಎಂದರೆ ಅನ್ನಕ್ಕೆ ಅವಮಾನ ಮಾಡುವುದು ಎಂದರ್ಥ. ಅಲ್ಲದೆ, ಯಾವತ್ತೂ ಕೋಪದಿಂದ ಆಹಾರವನ್ನು ಸೇವಿಸಬೇಡಿ. ಊಟ ತಿಂಡಿ ಮಾಡುವಾಗ ಶಾಂತ ಚಿತ್ತರಾಗಿ ನಗುನಗುತ್ತಾ ತಿನ್ನಿ. 


ಇದನ್ನೂ ಓದಿ : Lakshmi ಕೃಪೆಗೆ ಪಾತ್ರರಾಗಲು ಪ್ರತಿ ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ


ಅಡಿಗೆಗೆ ಸಂಬಂಧಿಸಿದ ವಾಸ್ತು ಬಗ್ಗೆ ತಿಳಿಯಿರಿ : 
ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎನ್ನುತ್ತಾರೆ. ಈ ದಿಕ್ಕಿನಲ್ಲಿ ನಿಮ್ಮ ಅಡುಗೆಮನೆ ಇರಬೇಕು. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು (Positive energy) ಸೃಷ್ಟಿಸುತ್ತದೆ. ಈಶಾನ್ಯ ದಿಕ್ಕಿನಲ್ಲಿ ಅಂದರೆ ಈಶಾನ್ಯ ದಿಕ್ಕಿನಲ್ಲಿ ಎಂದಿಗೂ ಅಡುಗೆ ಕೆಲಸ ಬೇಡ. 
-ವಾಸ್ತು ಪ್ರಕಾರ  ತಿನ್ನುವಾಗ  ವ್ಯಕ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಇದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. 
- ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಬೇಯಿಸಿದ ಆಹಾರವು ಇಡೀ ಕುಟುಂಬಕ್ಕೆ ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ತರುತ್ತದೆ.
- ಅಡುಗೆಮನೆಯಲ್ಲಿ ಇರಿಸಲಾಗಿರುವ ಒಲೆ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅಡುಗೆ ಮಾಡಿದ ನಂತರ ಒಲೆಯನ್ನು ಹಾಗೆಯೇ  ಬಿಡಬೇಡಿ. ಅಡುಗೆ ಕೆಲಸ ಮುಗಿದ ಕೂಡಲೇ ಒಲೆಯನ್ನುಶುಚಿಗೊಳಿಸಿ.  


ಇದನ್ನೂ ಓದಿ : Ram Navami 2021: ರಾಮ ನವಮಿಯ ಪೂಜಾ ವಿಧಿ ವಿಧಾನಗಳನ್ನು ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.