ಬೆಂಗಳೂರು: ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮೀ ಚಂಚಲೆ, ಆಕೆ ಯಾವುದೇ ಒಂದು ಸ್ಥಳದಲ್ಲಿ ದೀರ್ಘಕಾಲ ಉಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ನೀವು ಲಕ್ಷ್ಮಿ ದೇವಿಯನ್ನು ಪೂರ್ಣ ನೇಮ ನಿಷ್ಠೆಯಿಂದ ಪೂಜಿಸಿದರೆ ತಾಯಿ ಲಕ್ಷ್ಮಿ ಎಂದಿಗೂ ನಿಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ. ಲಕ್ಷ್ಮಿ ದೇವಿಯನ್ನು ಪೂಜೆಯ ಮೂಲಕ ಒಲಿಸಿಕೊಳ್ಳಲು ಶುಕ್ರವಾರವನ್ನು ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಶುಕ್ರವಾರ ತಾಯಿ ಲಕ್ಷ್ಮಿಯ ದಿನವಾಗಿದೆ.
ಆರ್ಥಿಕ ಸಂಕಷ್ಟದಿಂದ ಪರಿಹಾರ ಪಡೆಯಲು ಲಕ್ಷ್ಮಿ ದೇವಿಯನ್ನು ಈ ರೀತಿ ಆರಾಧಿಸಿ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದಂದು ಶುದ್ಧ ಮನಸ್ಸಿನಿಂದ, ನಿಷ್ಠೆಯಿಂದ ಲಕ್ಷ್ಮಿ (Lakshmi) ದೇವಿಯನ್ನು ವಿಶೇಷವಾಗಿ ಆರಾಧಿಸುವುದರಿಂದ ತಾಯಿ ಬೇಗ ಸಂತುಷ್ಟಳಾಗುತ್ತಾಳೆ. ತನ್ನ ಭಕ್ತರ ಮನಸ್ಸಿನ ಇಚ್ಛೆಯನ್ನು ಪೂರೈಸಿ ಅವರನ್ನು ಎಲ್ಲಾ ರೀತಿಯ ಆರ್ಥಿಕ ತೊಂದರೆಗಳಿಂದ ಮುಕ್ತಗೊಳಿಸುತ್ತಾಳೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ - Friday Remedies: ಶುಕ್ರವಾರ ಮುಸ್ಸಂಜೆ ವೇಳೆ ಈ ಕೆಲಸ ಮಾಡಿ Lakshmi ಕೃಪೆಗೆ ಪಾತ್ರರಾಗಿ
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ:
1. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಶುಕ್ರವಾರ ಲಕ್ಷ್ಮಿ ಸನ್ನಿದಿಗೆ ಹೋಗಿ ಕೆಂಪು ಬಣ್ಣದ ಬಟ್ಟೆ, ಕೆಂಪು ಬಿಂದಿ, ಕೆಂಪು ಬಳೆಯನ್ನು ದಾನ ಮಾಡಿ. ಈ ದಿನದಂದು ಪೂಜೆಯ ಸಮಯದಲ್ಲಿ ಕೆಂಪು ಹೂವುಗಳನ್ನು ಲಕ್ಷ್ಮಿಗೆ ಅರ್ಪಿಸಿ. ಪೂಜೆ ಪೂರ್ಣಗೊಂಡ ನಂತರ ಈ ಹೂವುಗಳನ್ನು ನಿಮ್ಮ ಬೀರು ಅಥವಾ ನೀವು ಹಣ ಇಡುವ ಜಾಗದಲ್ಲಿ ಇರಿಸಿ.
2. ಶುಕ್ರವಾರ ಸಂಜೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸಿ. ನಂತರ, ಹಸುವಿನ ತುಪ್ಪದ ದೀಪವನ್ನು (Cow Ghee Diya) ಬೆಳಗಿಸಿ. ಈ ದೀಪದಲ್ಲಿ ಹತ್ತಿ ಉಣ್ಣೆಯ ಬದಲು, ಕೆಂಪು ಬಣ್ಣದ ದಾರವನ್ನು ಬಳಸಿ. ದೀಪ ಹಚ್ಚಿದ ಬಳಿಕ ಈ ದೀಪದಲ್ಲಿ ಒಂದು ಚಿಟಿಕೆ ಕೇಸರಿಯನ್ನು ಹಾಕಿ. ಇದರಿಂದಲೂ ಧನ-ಸಂಪತ್ತು ನಿಮ್ಮ ಮನೆಯಲ್ಲಿ ನೆಲಸಲಿದೆ ಎಂದು ನಂಬಿಕೆ ಇದೆ.
ಇದನ್ನೂ ಓದಿ - Friday remedy : ಲಕ್ಷ್ಮೀ ಕೃಪೆಗಾಗಿ ಶುಕ್ರವಾರ ಈ ಕೆಲಸಗಳನ್ನು ಮಾಡಿ
3. ಶುಕ್ರವಾರ ಲಕ್ಷ್ಮಿ ದೇವಿಯೊಂದಿಗೆ ವಿಷ್ಣು (Lord Vishnu)ವನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಶುಕ್ರವಾರ ಶಂಖ ಚಿಪ್ಪಿನಲ್ಲಿ ನೀರು ತುಂಬಿಸಿ ವಿಷ್ಣುವಿಗೆ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟು ಶಾಶ್ವತವಾಗಿ ಕೊನೆಗೊಳ್ಳಬಹುದು.
4. ಶುಕ್ರವಾರ ಶ್ರೀ ಯಂತ್ರವನ್ನು ಹಾಲಿನಿಂದ ಅಭಿಷೇಕ ಮಾಡಿ. ಇದು ಸಂಪತ್ತನ್ನು ಪಡೆಯುವ ಖಚಿತವಾದ ಮಾರ್ಗವೆಂದು ಪರಿಗಣಿಸಲಾಗಿದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.