ಮನೆಗೆ ಹಾವು ಬಂದರೆ ಶುಭವೋ ಅಶುಭವೋ? ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪರಿಣಾಮ ಏನು ?
ಕನಸಿನಲ್ಲಿ ಹಾವು ಕಂಡರೂ ಅದಕ್ಕೆ ಬೇರೆ ಬೇರೆ ಅರ್ಥಗಳಿವೆ. ಹಾಗೆಯೇ ಹಾವುಗಳು ಮನೆಯೊಳಗೆ ಬಂದರೆ ಕೂಡಾ, ಅದು ಶುಭ , ಅಶುಭ ಫಲಗಳನ್ನು ನೀಡುತ್ತವೆ.
ನವದೆಹಲಿ : ಮಳೆಗಾಲದಲ್ಲಿ ಹಳ್ಳಿ, ಗದ್ದೆ, ಕಾಡು ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಗಾಗ ಹಾವು ಕಾಣಿಸುವುದು ಸಾಮಾನ್ಯ. ಕೆಲವೊಮ್ಮೆ ಈ ವಿಷ ಜಂತುಗಳು ಮನೆಯ ಒಳಗೂ ಬರುತ್ತವೆ. ಕನಸಿನಲ್ಲಿ ಹಾವು ಕಂಡರೂ (Snake in dreams) ಅದಕ್ಕೆ ಬೇರೆ ಬೇರೆ ಅರ್ಥಗಳಿವೆ. ಹಾಗೆಯೇ ಹಾವುಗಳು ಮನೆಯೊಳಗೆ ಬಂದರೆ ಕೂಡಾ, ಅದು ಶುಭ , ಅಶುಭ ಫಲಗಳನ್ನು ನೀಡುತ್ತವೆ. ಶಕುನ ಶಾಸ್ತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಮನೆಯೊಳಗೆ ಹಾವು ಬಂದರೆ ಆಗುವ ಶುಭ ಮತ್ತು ಅಶುಭ ಪರಿಣಾಮಗಳು :
ಮನೆಯೊಳಗೆ ಕಪ್ಪು ಹಾವು (Snake in house) ಮನೆಗೆ ಬಂದರೆ, ಶೀಘ್ರದಲ್ಲೇ ಉತ್ತಮ ಯಶಸ್ಸು ಸಿಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇದರೊಂದಿಗೆ, ಇದು ಕೆಲವು ಈಡೇರದ ಬಯಕೆ ನೆರವೇರಲಿದೆ ಎನ್ನುವುದನ್ನು ಸೂಚಿಸುತ್ತದೆ. ಈ ಘಟನೆಯು ವ್ಯಾಪಾರ, ವ್ಯವಹಾರದಲ್ಲಿ ವೃದ್ದಿಯಾಗಲಿದೆ ಎನ್ನುವುದರ ಸಂಕೇತವಾಗಿದೆ.
ಇದನ್ನೂ ಓದಿ : Mauni Amavasya 2022: ಮೌನಿ ಅಮಾವಾಸ್ಯೆಯಂದು ಮಾಡುವ ಈ ತಪ್ಪುಗಳು ಜೀವನದಲ್ಲಿ ದೊಡ್ಡ ತೊಂದರೆ ತರಬಹುದು, ಎಚ್ಚರ!
ಮನೆಗೆ ಕಪ್ಪು ಹಾವಿನ ಆಗಮನವೂ, ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚಾಗುವ ಸಂಕೇತವಾಗಿರುತ್ತದೆ. ಅಲ್ಲದೆ ಮನೆಯಲ್ಲಿ ತೊಟ್ಟಿಲು ತೂಗುವ ಸಮಯ ಸಮೀಪಿಸುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಆದರೆ ಹಾವು ಮನೆಯಲ್ಲಿಯೇ ಉಳಿದರೆ ಅದು ಶುಭವಲ್ಲ, ಅದು ಅಶುಭ ಫಲವನ್ನು ಸೂಚಿಸುತ್ತದೆ. ಅಲ್ಲದೆ, ಎದುರಾಗಲಿರುವ ದೊಡ್ಡ ಸಮಸ್ಯೆಯ ಸಂಕೇತವಾಗಿದೆ.
ಮನೆಯಲ್ಲಿ ಬಿಳಿ ಹಾವು (white snake) ಬಂದರೆ, ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಂಡಿದೆ ಎಂದರ್ಥ. ಬಿಳಿ ಹಾವು ಕಾಣುವುದು ತೀರಾ ಅಪರೂಪ ಮಾತ್ರವಲ್ಲ ಅದು ಮನೆಗೆ ಬರುವುದು ಕೂಡಾ ಅಷ್ಟೇ ಅಪರೂಪವಾಗಿರುತ್ತದೆ. ಬಿಳಿ ಹಾವು ಮನೆಗೆ ಬಂದರೆ, ಹಣದ ಹೊಳೆಯೇ ಹರಿಯಲಿದೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ : Mauni Amavasya: ಇಂದು ಮೌನಿ ಅಮಾವಾಸ್ಯೆಯ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ
ಮನೆಗೆ ಹಳದಿ ಹಾವು ಬಂದರೆ, ಜೀವನದಲ್ಲಿ ಸಂಪತ್ತು ಹೆಚ್ಚುತ್ತದೆ.ಇದ್ದಕ್ಕಿದ್ದಂತೆ ಯಾವುದೋ ಮೂಲೆಯಿಂದ ಹಣದ ಹರಿವು ಬರುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ.
ಮನೆಯಲ್ಲಿ ಹಸಿರು ಹಾವಿನ (green sanke) ಆಗಮನವು ಜೀವನದ ಎಲ್ಲಾ ತೊಂದರೆಗಳನ್ನು ಕೊನೆಗೊಳಿಸುತ್ತದೆ. ಅದು ಹಣ, ವೃತ್ತಿ, ಮದುವೆ, ಪ್ರೀತಿ ಅಥವಾ ಯಾವುದೇ ವಿಷಯಕ್ಕೆ ಸಂಬಂಧಿದ್ದಾಗಿದೆ. ಹಸಿರು ಹಾವು ಕಂಡು ಬಂದರೆ ಅದು ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.