Mauni Amavasya 2022: ಮೌನಿ ಅಮಾವಾಸ್ಯೆಯಂದು ಮಾಡುವ ಈ ತಪ್ಪುಗಳು ಜೀವನದಲ್ಲಿ ದೊಡ್ಡ ತೊಂದರೆ ತರಬಹುದು, ಎಚ್ಚರ!

Mauni Amavasya 2022: ಇಂದು ಮೌನಿ ಅಮಾವಾಸ್ಯೆಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ತಿಳಿದೋ ಅಥವಾ ತಿಳಿಯದೆಯೋ ಈ ದಿನ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು.

Written by - Yashaswini V | Last Updated : Feb 1, 2022, 08:10 AM IST
  • ಇಂದು ಮೌನಿ ಅಮಾವಾಸ್ಯೆ
  • ಈ ದಿನ ಕೆಲವು ಕೆಲಸಗಳನ್ನು ಮಾಡುವುದು ತುಂಬಾ ಅಶುಭ
  • ಇವು ಜೀವನದಲ್ಲಿ ಸಾಕಷ್ಟು ತೊಂದರೆಗಳಿಗೆ ಕಾರಣವಾಗಬಹುದು
Mauni Amavasya 2022: ಮೌನಿ ಅಮಾವಾಸ್ಯೆಯಂದು ಮಾಡುವ ಈ ತಪ್ಪುಗಳು ಜೀವನದಲ್ಲಿ ದೊಡ್ಡ ತೊಂದರೆ ತರಬಹುದು, ಎಚ್ಚರ! title=
Things to dos and donts on mauni amavasya

Mauni Amavasya 2022: ಈ ವರ್ಷ ಇಂದು ಅಂದರೆ ಫೆಬ್ರವರಿ 1 ರಂದು ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಅಂದರೆ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಇದನ್ನು ಮಾಘಿ ಅಮವಾಸ್ಯೆ ಎಂದೂ ಕರೆಯುತ್ತಾರೆ.   ಇಡೀ ಅಮಾವಾಸ್ಯೆಯಲ್ಲಿ ಮೌನಿ ಅಮಾವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಸ್ನಾನ, ದಾನ, ವಿಷ್ಣು ಪೂಜೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಮೌನಿ ಅಮಾವಾಸ್ಯೆಯಂದು ಇಡೀ ದಿನ ಮೌನವಹಿಸಿದರೆ ಮುನಿಯ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ. 

ಧಾರ್ಮಿಕ ಗ್ರಂಥಗಳು ಮತ್ತು ಜ್ಯೋತಿಷ್ಯದಲ್ಲಿ (Astrology) ಮೌನಿ ಅಮಾವಾಸ್ಯೆಗೆ ಕೆಲವು ವಿಶೇಷ ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮತ್ತು ಈ ದಿನ ತಿಳಿದೋ ಅಥವಾ ತಿಳಿಯದೆಯೋ ಈ ದಿನ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.

ಇವತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ :
ಮೌನಿ ಅಮಾವಾಸ್ಯೆಯ (Mauni Amavasya) ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಅವುಗಳನ್ನು ಮಾಡುವುದನ್ನು ತಪ್ಪಿಸಿ. 

ಇದನ್ನೂ ಓದಿ- Mauni Amavasya: ಇಂದು ಮೌನಿ ಅಮಾವಾಸ್ಯೆಯ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ

>> ಮೌನಿ ಅಮಾವಾಸ್ಯೆಯ ಉಪವಾಸವನ್ನು ಆಚರಿಸುವ ಜನರು ಹಾಸಿಗೆಯ ಮೇಲೆ ಮಲಗಬಾರದು ಅಥವಾ ದಿಂಬನ್ನು ಬಳಸಬಾರದು. ಮೌನಿ ಅಮಾವಾಸ್ಯೆಯ ಉಪವಾಸ ಮಾಡುವವರು ನೆಲದ ಮೇಲೆ ಮಲಗುವುದರಿಂದ ವ್ರತದ ಫಲ ಪಡೆಯುತ್ತಾರೆ. 

>> ಅಮಾವಾಸ್ಯೆಯಂದು ಸೂಜಿ, ದಾರ ಬಳಸದ ಸಂಪ್ರದಾಯವಿದೆ. ಆದ್ದರಿಂದ ಇದನು ಇದನ್ನು ಬಳಸುವುದನ್ನು ತಪ್ಪಿಸಿ. 

>> ಈ ದಿನ ಆಹಾರದಲ್ಲಿ ಉಪ್ಪನ್ನು ಬಳಸಬೇಡಿ. ಸಾಧ್ಯವಾದರೆ, ಹಣ್ಣುಗಳು ಮತ್ತು ಸಿಹಿ ಪದಾರ್ಥಗಳನ್ನು ಮಾತ್ರ ತಿನ್ನಿರಿ. 

>> ಮೌನಿ ಅಮಾವಾಸ್ಯೆಯ ದಿನದಂದು ನಿರ್ಜನ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಏಕೆಂದರೆ ಮೌನಿ ಅಮಾವಾಸ್ಯೆಯಂದು ರಾತ್ರಿಯ ಕತ್ತಲೆಯಲ್ಲಿ ಅನೇಕ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗುತ್ತವೆ. ವಿಶೇಷವಾಗಿ ಸ್ಮಶಾನ ಮತ್ತು ಸ್ಮಶಾನದಂತಹ ಜಾಗಗಳಿಗೆ ಹೋಗಬೇಡಿ. 

>> ಮೌನಿ ಅಮಾವಾಸ್ಯೆಯ ದಿನದಂದು ಸಂತ-ಮಹಾತ್ಮರನ್ನು, ಭಿಕ್ಷುಕರನ್ನು ಅಥವಾ ಬಡವರನ್ನು ಅವಮಾನಿಸುವುದು ಜೀವನದಲ್ಲಿ ತೊಂದರೆ ತರಬಹುದು. ಈ ದಿನದಂದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಜನರಿಗೆ ದಾನ ಮಾಡಿದರೆ ಉತ್ತಮ ಫಲ ಸಿಗುತ್ತದೆ.

ಇದನ್ನೂ ಓದಿ- ಮೌನಿ ಅಮವಾಸ್ಯೆಯ ದಿನ ಈ ಕೆಲಸಗಳನ್ನು ಮಾಡಿದರೆ, ಪಿತೃ ದೋಷ ನಿವಾರಣೆಯಾಗುತ್ತದೆ

>> ಅಂದಹಾಗೆ, ಮೌನಿ ಅಮಾವಾಸ್ಯೆಯಂದು, ಇಡೀ ದಿನ ಮೌನವಾಗಿರಿ. ಇದು ಸಾಧ್ಯವಾಗದಿದ್ದರೂ, ತಪ್ಪಾಗಿಯೂ ಯಾರೊಂದಿಗೂ ನಿಂದನೀಯ ಪದಗಳನ್ನು ಬಳಸಬೇಡಿ. 

>> ಇಂದು ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ. ಯಾವುದೇ ರೀತಿಯ ಅಮಲು ಪದಾರ್ಥವನ್ನು ತೆಗೆದುಕೊಳ್ಳಬೇಡಿ. 

>> ಮೌನಿ ಅಮಾವಾಸ್ಯೆಯ ದಿನ ಗಂಡ ಹೆಂಡತಿ ಬ್ರಹ್ಮಚರ್ಯವನ್ನು ಆಚರಿಸಿದರೆ ಒಳಿತು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News