ಗುಲ್ಕನ್‌ (Gulkand), ಗುಲಾಬಿ ಹೂವಿನಿಂದ ತಯಾರಿಸುವ ಒಂದು ರುಚಿಕರವಾದ ತಿನಿಸು. ಇದು ನಾಲಿಗೆಯ ರುಚಿ ಮಾತ್ರವಲ್ಲ ದೇಹದ ಆರೋಗ್ಯ ಕಾಪಾಡುವಲ್ಲಿಯೂ ಸಹಾಯಕ ಎಂದರೆ ನೀವು ನಂಬಲೇಬೇಕು. ಗುಲ್ಕನ್​ ಎಂದರೆ ಗುಲಾಬಿ ಎಸಳುಗಳು ಮತ್ತು ಸಾಕಷ್ಟು ಸಕ್ಕರೆ ಹಾಕಿ ಮಾಡುವ ಒಂದು ಜಾಮ್​. ಇನ್ನು ಆಯುರ್ವೇದ (Ayurveda) ಪದ್ಧತಿಯಲ್ಲಿ ಗುಲ್ಕನ್​​ನ್ನು ಬಳಕೆ ಕೂಡ ಮಾಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿHealth Tips: ಈ ಡ್ರೈ ಫ್ರೂಟ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ!


ಗುಲ್ಕನ್​​ನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಗಂಭೀರ ಸ್ವರೂಪದ ಅಲ್ಸರ್​ಗಳು ನಿಯಂತ್ರಣವಾಗುತ್ತವೆ ಎಂಬುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ. ಅಷ್ಟೇ ಅಲ್ಲ, ಎದೆಯುರಿ, ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಗುಲ್ಕನ್‌ ಸಹಾಯ ಮಾಡುತ್ತದೆಯಂತೆ. 


ಇನ್ನು ಬೇಸಿಗೆ ಕಾಲದಲ್ಲಿ ಅತಿಯಾದ ಉಷ್ಣವಿರುವಾಗ ಗುಲ್ಕನ್‌ ಸೇವನೆ ಮಾಡುವುದು ಉತ್ತಮವಂತೆ. ಅಷ್ಟೇ ಸನ್​ ಸ್ಟ್ರೋಕ್​​, ಮೂಗಿನಲ್ಲಿ ರಕ್ತಬರುವುದು, ತಲೆ ತಿರುಗುವ ಸಮಸ್ಯೆಗಳಿಂದ ಸಹ ಮುಕ್ತಿಹೊಂದಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 


ಇದನ್ನು ಓದಿಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!


ಇನ್ನು ಹೆಣ್ಣಿಗೆ ಮುಟ್ಟಿನ ದಿನಗಳಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದರೆ, ಅದರ ನಿಯಂತ್ರಣಕ್ಕೆ ಗುಲ್ಕನ್​ ಸೇವನೆ ಮಾಡಿದರೆ ಒಳ್ಳೆಯದು. ಇದು ದೇಹಕ್ಕೆ ಗ್ಲುಕೋಸ್ ಅಂಶ ನೀಡುತ್ತದೆ. ಅಷ್ಟೇ ಅಲ್ಲದೆ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. 


ಮುಖ್ಯವಾಗಿ ಗುಲ್ಕನ್‌ ರಕ್ತಶುದ್ಧಿ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಈ ಮೂಲಕ ದೇಹವನ್ನು ಆರೋಗ್ಯಯುತವಾಗಿ ಮತ್ತು ಸುಸ್ಥಿತಿಯಲ್ಲಿಡುತ್ತದೆ ಎಂದು ತಜ್ಞರು ಹೇಳುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.