Budh Vakri Gochar 2022: ಪಂಚಾಂಗದ ಪ್ರಕಾರ ಗ್ರಹಗಳ ರಾಜಕುಮಾರ ಬುಧ ಗ್ರಹ ಸೆಪ್ಟೆಂಬರ್ 10 ರಂದು ಬೆಳಗ್ಗೆ 9:07ಕ್ಕೆ ಕನ್ಯಾ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಿದೆ. ಬುಧನ ಈ ವಕ್ರ ನಡೆ ಮುಂದಿನ 23 ದಿನಗಳವರೆಗೆ ಮುಂದುವರೆಯಲಿದೆ. ಅಂದರೆ, ಬುಧ ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 2ರವರೆಗೆ ಕನ್ಯಾ ರಾಶಿಯಲ್ಲಿ ವಕ್ರ ನಡೆಯನ್ನೇ ಅನುಸರಿಸಲಿದೆ. ಇದಕ್ಕೂ ಮೊದಲು ಇದೆ ರಾಶಿಯಲ್ಲಿ ಬುಧ ನೇರ ನಡೆಯನ್ನು ಅನುಸರಿಸಿದ್ದ. ಬುಧನ ಈ ನಡೆ ಪರಿವರ್ತನೆ ಹಲವು ರಾಶಿಗಳ ಜನರ ಭಾಗ್ಯವನ್ನೇ ಬದಲಿಸಲಿದೆ. ಬುಧ ಕನ್ಯಾ ರಾಶಿಯಲ್ಲಿಯ ವಕ್ರನಾಗಿರುವ ಕಾರಣ ಕನ್ಯಾ ರಾಶಿಯಲ್ಲಿ ಭದ್ರಯೋಗ ನಿರ್ಮಾಣಗೊಳ್ಳುತ್ತಿದ್ದು, ಇದೊಂದು ಶುಭಯೋಗ ವಾಗಿದೆ.

COMMERCIAL BREAK
SCROLL TO CONTINUE READING

ಈ ರಾಶಿಗಳ ಜನರ ಭಾಗ್ಯ ಬದಲಾಗಲಿದೆ
ಕನ್ಯಾ ರಾಶಿ-
ಕನ್ಯಾರಾಶಿಯಲ್ಲಿಯೇ ಬುಧ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿರುವ ಕಾರಣ. ಕನ್ಯಾ ರಾಶಿಯಲ್ಲಿ ಭದ್ರಯೋಗವೂ ನಿರ್ಮಾಣಗೊಳ್ಳುತ್ತಿದೆ. ಆದ್ದರಿಂದ, ಅದರ ಗರಿಷ್ಠ ಪ್ರಭಾವ ಈ ರಾಶಿಯ ಜನರ ಮೇಲೆಯೇ ಇರಲಿದೆ. ಈ ಅವಧಿಯಲ್ಲಿ, ಕನ್ಯಾ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ. ನೀವು ನಿಮ್ಮ ಮಾತಿನ ಮೂಲಕ ಜನರ ಮನವನ್ನು ಗೆಲ್ಲುವಿರಿ. ಇದರೊಂದಿಗೆ ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಭದ್ರಾ ಯೋಗದ ನಿರ್ಮಾಣದಿಂದ, ಈ ಜನರು ಸಮರ್ಥ ತಂತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಅವಧಿಯಲ್ಲಿ ನಿಮಗೆ ಬಡ್ತಿ ಸಿಗುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸರ್ಕಾರಿ ಕೆಲಸ ಸಿಗಬಹುದು. ಸಂತಾನ ಹೊಂದುವ ನಿಮ್ಮ ಆಸೆ ಈಡೇರುವ ಸಾಧ್ಯತೆ ಇದೆ.


ಮಕರ ರಾಶಿ- ಮಕರ ರಾಶಿಯವರಿಗೆ ಬುಧಗ್ರಹದ ಹಿಮ್ಮುಖ ಚಲನೆ ಅತ್ಯಂತ ಶುಭಕರವಾಗಿರುತ್ತದೆ. ಈ ರಾಶಿಯ ಜನರು ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದ ಸಂತೋಷ ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನೀವು ಯಾವುದಾದರೊಂದು ದೊಡ್ಡ ಕೆಲಸವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಈ ಸಮಯವು ತುಂಬಾ ಒಳ್ಳೆಯ ಸಮಯವಾಗಿದೆ. ಈ ಅವಧಿಯಲ್ಲಿ ನಿಮಗೆ ಎಲ್ಲಾ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಆಡಳಿತ, ಅಧಿಕಾರದ ಬೆಂಬಲ ನಿಮಗೆ ಸಿಗಲಿದೆ.  ಕೋರ್ಟ್ ಕೇಸ್ ನಿಮ್ಮ ಪರವಾಗಿರಲಿದೆ. ಶತ್ರುಗಳನ್ನು ಹತಾಶರಾಗಲಿದ್ದಾರೆ.


ಇದನ್ನೂ ಓದಿ-Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ


ಮೀನ ರಾಶಿ- ಮೀನ ರಾಶಿಯವರಿಗೆ ಬುಧನ ಹಿಮ್ಮುಖ ಚಲನೆ ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಮದುವೆಗೆ ಅರ್ಹರಾದವರಿಗೆ, ವಿವಾಹ ಸಂಬಂಧಗಳು ಕೂಡಿಬರಲಿವೆ. ಅತ್ತೆಯ ಕಡೆಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ.


ಇದನ್ನೂ ಓದಿ-Kanya Sankranti 2022: ಕನ್ಯಾ ಸಂಕ್ರಮಣದ ದಿನ ಘನತೆ-ಗೌರವ ವೃದ್ಧಿಗಾಗಿ ಈ ರೀತಿ ಸೂರ್ಯನ ಉಪಾಸನೆ ಕೈಗೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ -


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.