Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ

Tulsi Puaj Rules: ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯಲ್ಲಿ ತಾಯಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ. ಆದರೆ ತುಳಸಿಯನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.  

Written by - Nitin Tabib | Last Updated : Sep 10, 2022, 05:56 PM IST
  • ದೇವ-ದೇವತೆಗಳ ವಾಸಸ್ಥಾನವಾಗಿರುವ ಹಲವು ಗಿಡ-ಮರಗಳ ಕುರಿತು ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
  • ಈ ಗಿಡಮರಗಳಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ
  • ಮತ್ತು ಅದೇ ಕಾರಣದಿಂದ ಅವುಗಳಿಗೆ ಪೂಜೆ ಕೂಡ ಸಲ್ಲಿಸಲಾಗುತ್ತದೆ. ಈ ಸಸ್ಯಗಳಲ್ಲಿ ತುಳಸಿ ಕೂಡ ಶಾಮೀಲಾಗಿದೆ.
Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ title=
Tulsi Puja Rules

Tulsi Niyam: ದೇವ-ದೇವತೆಗಳ ವಾಸಸ್ಥಾನವಾಗಿರುವ ಹಲವು ಗಿಡ-ಮರಗಳ ಕುರಿತು ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.  ಈ ಗಿಡಮರಗಳಲ್ಲಿ ದೇವರು ಮತ್ತು ದೇವತೆಗಳು ವಾಸಿಸುತ್ತಾರೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ ಮತ್ತು ಅದೇ ಕಾರಣದಿಂದ ಅವುಗಳಿಗೆ ಪೂಜೆ ಕೂಡ ಸಲ್ಲಿಸಲಾಗುತ್ತದೆ. ಈ ಸಸ್ಯಗಳಲ್ಲಿ ತುಳಸಿ ಕೂಡ ಶಾಮೀಲಾಗಿದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನವಿದೆ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಸುಖ-ಸಮೃದ್ಧಿ ಮತ್ತು ಸಂತೋಷಕ್ಕಾಗಿ ಇದು ಒಂದು ಉತ್ತಮ ಗಿಡವಾಗಿದೆ. ಆದರೆ ತುಳಸಿ ಗಿಡವನ್ನು ಪೂಜಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ತುಂಬಾ ಮುಖ್ಯವಾದ ಸಂಗತಿ.

ತುಳಸಿ ಗಿಡವನ್ನು ಯಾವಾಗ ಪೂಜಿಸಬೇಕು ಮತ್ತು ಯಾವಾಗ ಪೂಜಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಅಷ್ಟೇ ಅಲ್ಲ, ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಮುಟ್ಟುವುದು ನಿಷಿದ್ಧ ಎಂದಾಗ, ಅದರ ಎಲೆಗಳನ್ನು ಕತ್ತರಿಸುವುದು ನಿಷಿದ್ಧ ಎಂದಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಯಾವ ದಿನಗಳಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಮತ್ತು ಅದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಈ ಸಮಯದಲ್ಲಿ ತುಳಸಿಯನ್ನು ಸ್ಪರ್ಶಿಸಬಾರದು ಎಂಬುದನ್ನು ನೆನಪಿನಲ್ಲಿಡಿ
ತುಳಸಿ ಗಿಡವನ್ನು ಪೂಜಿಸುವಾಗ ನಿಯಮಗಳನ್ನು ಪಾಲಿಸದಿದ್ದರೆ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆಬಿಟ್ಟು ಹೊರಹೋಗುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡವನ್ನು ರಾತ್ರಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಸ್ಪರ್ಶಿಸಬಾರದು. ತುಳಸಿ ಗಿಡವನ್ನು ರಾತ್ರಿಯಲ್ಲಿ ಸ್ಪರ್ಶಿಸಿದರೆ ಧನಹಾನಿಯಾಗುತ್ತದೆ. ಇದಲ್ಲದೆ, ತುಳಸಿಗೆ ರಾತ್ರಿ ಹೊತ್ತಿನಲ್ಲಿ ನೀರನ್ನು ಅರ್ಪಿಸಬಾರದು.

ಇದನ್ನೂ ಓದಿ-Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

ಈ ದಿನ ತುಳಸಿ ಗಿಡವನ್ನು ಸ್ಪರ್ಶಿಸಬೇಡಿ
ಭಾನುವಾರವೂ ತುಳಸಿ ಗಿಡವನ್ನು ಸ್ಪರ್ಶಿಸಬಾರದು ಎಂಬುದು ಧಾರ್ಮಿಕ ನಂಬಿಕೆ. ಅಷ್ಟೇ ಅಲ್ಲ, ಈ ದಿನ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಕೂಡ ನಿಷೇಧಿಸಲಾಗಿದೆ. ತುಳಸಿ ಮಾತೆ ಭಾನುವಾರದಂದು ಉಪವಾಸ ವ್ರತ ಕೈಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಇನ್ನೊಂದೆಡೆ, ಏಕಾದಶಿಯಂದು ತುಳಸಿಗೆ ನೀರು ಕೊಡುವುದು ಕೂಡ ನಿಷಿದ್ಧ ಎನ್ನಲಾಗಿದೆ. ಈ ದಿನದಂದು ತಾಯಿ ತುಳಸಿಯು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ಈ ದಿನ ತುಳಸಿಯನ್ನು ಸ್ಪರ್ಶಿಸುವುದು ಮತ್ತು ನೀರು ಕೊಡುವುದು, ತುಳಸಿ ಮಾತೆಯ ಉಪವಾಸವನ್ನು ಮುರಿದಂತಾಗುತ್ತದೆ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ-Shani Margi 2022: ಶೀಘ್ರದಲ್ಲಿಯೇ ಶನಿಯ ನೇರ ನಡೆ ಆರಂಭ, ಮಹಾ ಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಜಬರ್ದಸ್ತ್ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News